ಜೆಎನ್ ಯು ಹಿಂಸಾಚಾರ: ಭಯದಿಂದ ಕ್ಯಾಂಪಸ್ ತೊರೆಯುತ್ತಿರುವ ವಿದ್ಯಾರ್ಥಿನಿಯರು

ದೆಹಲಿಯ ಪ್ರತಿಷ್ಠಿತ ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್ ಯು)ದಲ್ಲಿ ಭಾನುವಾರ ನಡೆದ ಹಿಂಸಾಚಾರ ಪ್ರಕರಣದ ನಂತರ ಸುರಕ್ಷತೆಯ ಭಯದಿಂದ ಸೋಮವಾರ ಹಲವು ವಿದ್ಯಾರ್ಥಿನಿಯರು ವಿವಿ ಕ್ಯಾಂಪಸ್ ತೊರೆದಿದ್ದಾರೆ.
ಜೆಎನ್ ಯು ಕ್ಯಾಂಪಸ್
ಜೆಎನ್ ಯು ಕ್ಯಾಂಪಸ್

ನವದೆಹಲಿ: ದೆಹಲಿಯ ಪ್ರತಿಷ್ಠಿತ ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್ ಯು)ದಲ್ಲಿ ಭಾನುವಾರ ನಡೆದ ಹಿಂಸಾಚಾರ ಪ್ರಕರಣದ ನಂತರ ಸುರಕ್ಷತೆಯ ಭಯದಿಂದ ಸೋಮವಾರ ಹಲವು ವಿದ್ಯಾರ್ಥಿನಿಯರು ವಿವಿ ಕ್ಯಾಂಪಸ್ ತೊರೆದಿದ್ದಾರೆ.

ಹಿಂಸಾಚಾರ ಘಟನೆಯಿಂದ ಆತಂಕಗೊಂಡಿರುವ ವಿದ್ಯಾರ್ಥಿನಿಯರು ಹಾಸ್ಟೆಲ್ ತೊರೆದು, ತಮ್ಮ ಮನೆಗೆ ಹಾಗೂ ಇನ್ನು ಕೆಲವರು ತಮ್ಮ ಸಂಬಂಧಿಗಳ ಮನೆಗೆ ಬ್ಯಾಗ್ ಸಮೇತ ತೆರಳುತ್ತಿರುವ ದೃಶ್ಯ ಕಂಡು ಬಂತು.

ಪೋಷಕರು ತಮ್ಮ ಭದ್ರತೆ ಬಗ್ಗೆ ಆತಂಕಗೊಂಡಿದ್ದು, ಮಕ್ಕಳನ್ನು ಮನೆಗೆ ಕರೆಯಿಸಿಕೊಳ್ಳುತ್ತಿದ್ದಾರೆ ಎಂದು ಕ್ಯಾಂಪಸ್ ತೊರೆಯುತ್ತಿದ್ದ ವಿದ್ಯಾರ್ಥಿನಿಯರು ಹೇಳಿದ್ದಾರೆ.

ಸುರಕ್ಷತೆಯ ಭಯದಿಂದ ನಾನು ಹಾಸ್ಟೆಲ್ ಬಿಟ್ಟು ಹೋಗುತ್ತಿದ್ದೇನೆ ಎಂದು ಹಿಂಸಾಚಾರ ನಡೆದ ಕೊಯ್ನಾ ಹಾಸ್ಟೆಲ್ ನ ವಿದ್ಯಾರ್ಥಿನಿ ಪಂಚಮಿ ಅವರು ಹೇಳಿದ್ದಾರೆ.

ನನ್ನ ಸುರಕ್ಷತೆ ಬಗ್ಗೆ ನನ್ನ ಪೋಷಕರು ತುಂಬಾ ಆತಂಕಗೊಂಡಿದ್ದಾರೆ. ಹೀಗಾಗಿ ನಾನು ನನ್ನ ರಾಜ್ಯ ಹರಿಯಾಣಕ್ಕೆ ತೆರಳುತ್ತಿದ್ದೇನೆ ಎಂದು ಎಂಎ ಸಮಾಜಶಾಸ್ತ್ರ ವಿದ್ಯಾರ್ಥಿನಿಯೊಬ್ಬರು ತಿಳಿಸಿದ್ದಾರೆ.

ಭಾನುವಾರ ಸಂಜೆ 6.30ರ ಸುಮಾರಿಗೆ ಮುಖ ಮುಚ್ಚಿಕೊಂಡಿದ್ದ ಅಂದಾಜು 50 ಜನರ ಗುಂಪು ವಿವಿ ಆವರಣಕ್ಕೆ ನುಗ್ಗಿತು. ಈ ಗುಂಪು ಹಾಸ್ಟೆಲ್​ಗೆ ನುಗ್ಗಿ  ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷೆ ಘೋಷ್ ಹಾಗೂ ಉಪನ್ಯಾಸಕರು ಸೇರಿದಂತೆ ಹಲವು ವಿದ್ಯಾರ್ಥಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com