'ಮಹಾ'ಕಾಂಗ್ರೆಸ್ ನಲ್ಲಿ ಅಸಮಾಧಾನ: ಶಮನಗೊಳಿಸುವ ಹೊಣೆ ಖರ್ಗೆ ಹೆಗಲಿಗೆ ಹಾಕಿದ ಸೋನಿಯಾ ಗಾಂಧಿ 

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಭಿನ್ನಮತೀಯ ಭುಗಿಲೆದ್ದಿದ್ದು ಇದನ್ನು ತಣಿಸುವ ಹೊಣೆಯನ್ನು ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕರ್ನಾಟಕದ ಮಲ್ಲಿಕಾರ್ಜುವ ಖರ್ಗೆಯವರ ಹೆಗಲಿಗೆ ಹಾಕಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಮುಂಬೈ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಭಿನ್ನಮತೀಯ ಭುಗಿಲೆದ್ದಿದ್ದು ಇದನ್ನು ತಣಿಸುವ ಹೊಣೆಯನ್ನು ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕರ್ನಾಟಕದ ಮಲ್ಲಿಕಾರ್ಜುವ ಖರ್ಗೆಯವರ ಹೆಗಲಿಗೆ ಹಾಕಿದ್ದಾರೆ.


ತಮಗೆ ಸಿಕ್ಕಿರುವ ಖಾತೆಯಿಂದ ಅಸಮಾಧಾನಗೊಂಡಿರುವ ವಿಜಯ್ ವಡೆಟ್ಟಿವಾರ್ ನಿನ್ನೆ ನಡೆದ ರಾಜ್ಯ ವಿಧಾನ ಮಂಡಲದ ವಿಶೇಷ ಅಧಿವೇಶನಕ್ಕೆ ಗೈರಾಗಿದ್ದರು. ಹಿಂದುಳಿದ ವರ್ಗಗಳು, ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ ಖಾತೆ ನೀಡಲಾಗಿದೆ.

ವಡೆಟ್ಟಿವಾರ್ ಹಿಂದಿನ ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದರು. ಈ ಬಾರಿ ದೊಡ್ಡ ಖಾತೆಯ ನಿರೀಕ್ಷೆಯಲ್ಲಿದ್ದರು. ಅಸಮಾಧಾನಗೊಂಡ ಅವರನ್ನು ಸಮಾಧಾನ ಮಾಡಲು ಕಾಂಗ್ರೆಸ್ ಹಿರಿಯ ನಾಯಕರಾದ ನಾಸಿಮ್ ಖಾನ್, ಸುನಿಲ್ ಕೇದಾರ್ ಭೇಟಿ ಮಾಡಿದ್ದರು. ಮಲ್ಲಿಕಾರ್ಜುನ ಖರ್ಗೆಯವರು ಸಹ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.


ಕಿರಿಯ ಸಚಿವರುಗಳಿಗೆ ಅನೇಕ ಉತ್ತಮ ಖಾತೆಗಳು ಸಿಕ್ಕಿ ತಮಗೆ ಅಷ್ಟೊಂದು ಮಹತ್ವವಲ್ಲದ ಖಾತೆ ಸಿಕ್ಕಿದೆ ಎಂಬುದು ವಡೆಟ್ಟಿವರ್ ಅಸಮಾಧಾನಕ್ಕೆ ಕಾರಣವಾಗಿದೆ. ಅವರನ್ನು ಸಮಾಧಾನಪಡಿಸಲು ಕೆಲವು ಮಹತ್ವದ ಇಲಾಖೆಗಳನ್ನು ಈಗಿರುವುದರ ಜೊತೆಗೆ ನೀಡಬಹುದಾಗಿತ್ತು ಎಂದು ಅವರ ನಿಕಟವರ್ತಿಗಳು ಹೇಳುತ್ತಾರೆ.


ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ್ ತೊರಟ್, ಕಾಂಗ್ರೆಸ್ ನಾಯಕರ ಮಧ್ಯೆ ಅಸಮಾಧಾನ ಇದೆ. ಮಹಾರಾಷ್ಟ್ರ ವಿಕಾಸ ಅಘಾಡಿಯ ಭಾಗವಾಗಿರುವ ನಾವು 42 ಸಚಿವ ಖಾತೆಗಳಲ್ಲಿ ನಮಗೆ 12 ಖಾತೆಗಳು ಸಿಕ್ಕಿವೆ. ವಾಸ್ತವವನ್ನು ನಮ್ಮ ರಾಜಕಾರಣಿಗಳು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕಾಗುತ್ತದೆ ಎಂದರು.


ಪುಣೆಯ ಕಾಂಗ್ರೆಸ್ ಶಾಸಕ ಸಂಗ್ರಮ್ ತೊಪ್ಟೆ ಅವರಿಗೆ ಸಚಿವ ಹುದ್ದೆ ಸಿಕ್ಕಿಲ್ಲ ಎಂಬ ಬೇಸರವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com