ಸವಾರನ ಜೊತೆ ಹೆಲ್ಮೆಟ್ ಧರಿಸಿ ಸವಾರಿ ಮಾಡಿದ ನಾಯಿಯ ಸ್ಟೈಲ್ ನೋಡಿ!

ಮಿಳು ನಾಡಿನಲ್ಲಿ ನಾಯಿಯೊಂದು ಹೆಲ್ಮೆಟ್ ಧರಿಸಿ ಬೈಕ್ ಸವಾರನ ಹಿಂದೆ ಕುಳಿತು ಬೈಕ್ ನಲ್ಲಿ ಪ್ರಯಾಣಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಸವಾರನ ಜೊತೆ ಹೆಲ್ಮೆಟ್ ಧರಿಸಿದ ನಾಯಿ
ಸವಾರನ ಜೊತೆ ಹೆಲ್ಮೆಟ್ ಧರಿಸಿದ ನಾಯಿ

ಚೆನ್ನೈ: ತಮಿಳು ನಾಡಿನಲ್ಲಿ ನಾಯಿಯೊಂದು ಹೆಲ್ಮೆಟ್ ಧರಿಸಿ ಬೈಕ್ ಸವಾರನ ಹಿಂದೆ ಕುಳಿತು ಬೈಕ್ ನಲ್ಲಿ ಪ್ರಯಾಣಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


ಈ ವಿಡಿಯೊವನ್ನು ಟ್ವಿಟ್ಟರ್ ಬಳಕೆದಾರರೊಬ್ಬರು ಶೇರ್ ಮಾಡಿದ್ದು ತಮಿಳು ನಾಡಿನಲ್ಲಿ ನಾಯಿಯೊಂದು ಸುರಕ್ಷತೆಗೆ ಹೆಲ್ಮೆಟ್ ಧರಿಸಿದೆ. ಮಾಲೀಕನ ಜಾಗೃತೆ ನಿಜಕ್ಕೂ ಪ್ರಶಂಸಾರ್ಹ ಎಂದು ಟ್ವೀಟ್ ಮಾಡಿದ್ದಾರೆ. 17 ಸೆಕೆಂಡ್ ಗಳ ಈ ವಿಡಿಯೊವನ್ನು ಸಾವಿರಾರು ಮಂದಿ ವೀಕ್ಷಿಸಿ ಹಲವರು ರಿಟ್ವೀಟ್ ಮಾಡಿದ್ದಾರೆ, ಇನ್ನು ಹಲವರು ಲೈಕ್ ಮಾಡಿದ್ದಾರೆ.


ಕೆಲವರು ನಾಯಿ ಹೆಲ್ಮೆಟ್ ಧರಿಸಿದ್ದನ್ನು ನೋಡಿ ಖುಷಿಪಟ್ಟರೆ, ಇನ್ನು ಕೆಲವರು ಬೈಕ್ ನಲ್ಲಿ ಹೀಗೆ ನಾಯಿಯನ್ನು ಕೂರಿಸಿ ಸರ್ಕಸ್ ಮಾಡಿಕೊಂಡು ಹೆಲ್ಮೆಟ್ ಧರಿಸಿರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.ಹಲವರು ಹಲವು ರೀತಿಯ ಕಮೆಂಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com