ಅಮಿತ್ ಶಾ ಹೆಸರಿನಲ್ಲಿ ಮಧ್ಯ ಪ್ರದೇಶ ರಾಜ್ಯಪಾಲರಿಗೆ ಕರೆ ಮಾಡಿದ್ದ ವಿಂಗ್ ಕಮಾಂಡರ್ ಬಂಧನ

ಮಧ್ಯ ಪ್ರದೇಶ ರಾಜ್ಯಪಾಲ ಲಾಲ್ ಜಿ ಟಂಡನ್ ಅವರಿಗೆ ಕರೆ ಮಾಡಿ ತಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂದು ಹೇಳಿಕೊಂಡಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಒಬ್ಬರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕುಲದೀಪ್ ವಘೇಲಾ - ಚಂದ್ರೇಶ್ ಶುಕ್ಲಾ
ಕುಲದೀಪ್ ವಘೇಲಾ - ಚಂದ್ರೇಶ್ ಶುಕ್ಲಾ

ಭೋಪಾಲ್: ಮಧ್ಯ ಪ್ರದೇಶ ರಾಜ್ಯಪಾಲ ಲಾಲ್ ಜಿ ಟಂಡನ್ ಅವರಿಗೆ ಕರೆ ಮಾಡಿ ತಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂದು ಹೇಳಿಕೊಂಡಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಒಬ್ಬರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಭಾರತೀಯ ವಾಯುಪಡೆಯ ದೆಹಲಿ ಮುಖ್ಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಂಗ್ ಕಮಾಂಡರ್ ಕುಲದೀಪ್ ವಘೇಲಾ ಅವರು ಮಧ್ಯ ಪ್ರದೇಶ ರಾಜ್ಯಪಾಲರಿಗೆ ಕರೆ ಮಾಡಿ, ನಾನು ಅಮಿತ್ ಶಾ ಮಾತನಾಡುತ್ತಿದ್ದು, ಡೆಂಟಲ್ ಸರ್ಜನ್ ಆಗಿರುವ ತನ್ನ ಸ್ನೇಹಿತ ಚಂದ್ರೇಶ್ ಕುಮಾರ್ ಶುಕ್ಲಾ ಅವರನ್ನು ಮಧ್ಯ ಪ್ರದೇಶ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ಮಾಡಬೇಕು ಎಂದು ಹೇಳಿದ್ದಾರೆ. 

ಅಮಿತ್ ಶಾ ಹೆಸರಿನಲ್ಲಿ ಕರೆ ಮಾಡಿದ್ದ ಕುಲದೀಪ್ ವಘೇಲಾ ಹಾಗೂ ಆತನ ಸ್ನೇಹಿತ ಚಂದ್ರೇಶ್ ಕುಮಾರ್ ಶುಕ್ಲಾ ಅವರನ್ನು ಮಧ್ಯ ಪ್ರದೇಶ ಪೊಲೀಸರು ಬಂಧಿಸಿದ್ದು, ಇಬ್ಬರ ವಿರದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಜಬಲಪುರ್ ದ ಮಧ್ಯ ಪ್ರದೇಶ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ನೂತನ ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಶೋಧನಾ ಸಮಿತಿ ರಚಿಸಿದ್ದು, ಡೆಂಟಲ್ ಸರ್ಜನ್ ಡಾ.ಚಂದ್ರಶ್ ಕುಮಾರ್ ಶುಕ್ಲಾ ಅವರು ಸಮಿತಿ ಮುಂದೆ ಸಂದರ್ಶನಕ್ಕೂ ಹಾಜರಾಗಿದ್ದಾರೆ. ಹೀಗಾಗಿ ಅಮಿತ್ ಶಾ ಹೆಸರಿನಲ್ಲಿ ಕುಲಪತಿಗಳ ಮೇಲೆ ಪ್ರಭಾವ ಬೀರಲು ಇಬ್ಬರು ಯತ್ನಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಶೋಕ್ ಅವಸ್ಥಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com