ಕೊಲ್ಕತ್ತಾ ಪೋರ್ಟ್ ಗೆ ಶ್ಯಾಮ್ ಪ್ರಸಾದ್ ಮುಖರ್ಜಿ ಹೆಸರು ಮರು ನಾಮಕರಣ, ಪ್ರಧಾನಿ ಮೋದಿ ಘೋಷಣೆ!

ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೊಲ್ಕತ್ತಾ ಪೋರ್ಟ್ ಟ್ರಸ್ಟ್ ಅನ್ನು ಭಾರತೀಯ ಜನಾ ಸಂಘದ  ಸಂಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಪೋರ್ಟ್ ಎಂದು ಮರುನಾಮಕರಣ ಮಾಡಿದ್ದಾರೆ.

Published: 12th January 2020 08:38 PM  |   Last Updated: 12th January 2020 08:38 PM   |  A+A-


Narendra Modi

ನರೇಂದ್ರ ಮೋದಿ

Posted By : Vishwanath S
Source : UNI

ಕೋಲ್ಕತ್ತಾ: ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೊಲ್ಕತ್ತಾ ಪೋರ್ಟ್ ಟ್ರಸ್ಟ್ ಅನ್ನು ಭಾರತೀಯ ಜನಾ ಸಂಘದ  ಸಂಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಪೋರ್ಟ್ ಎಂದು ಮರುನಾಮಕರಣ ಮಾಡಿದ್ದಾರೆ.

ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಮೂಲತಃ ಕೋಲ್ಕತ್ತದವರೇ ಆಗಿದ್ದಾರೆ. ಇಂದು ಕೋಲ್ಕತ್ತಾ ಪೋರ್ಟ್ ಟ್ರಸ್ಟ್ನ 150ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಿ ಮೋದಿಯವರು ಮಹತ್ವದ ನಿರ್ಧಾರ ಪ್ರಕಟಿಸಿದರು.

ಡಾ. ಮುಖರ್ಜಿ ಭಾರತಿಯ ರಾಜಕಾರಣದ  ದಂತಕಥೆಯಾಗಿದ್ದು, ಅವರು ಅಭಿವೃದ್ಧಿಯ ನಾಯಕರಾಗಿದ್ದರು ಮತ್ತು 'ಒಂದು  ರಾಷ್ಟ್ರ, ಒಂದು  ಸಂವಿಧಾನ' ಕಲ್ಪನೆಯ ಜಾರಿಗಾಗಿ ಗಿ ಮುಂಚೂಣಿಯಲ್ಲಿ ನಿಂತು ಹೋರಾಡಿದ ಮಾಹಾನ್ ನಾಯಕ . ಆ ಕಾರಣದಿಂದಲೇ ದೇಶದ ಬಹುಮುಖ್ಯ ಬಂದರಿಗೆ ಅವರ ಹೆಸರನ್ನಿಡಲಾಗಿದೆ ಎಂದರು. ಈ ಬಂದರನ್ನು ಪೂರ್ವ ಭಾರತದ ಗೇಟ್ ವೇ ಎಂದು ಕರೆಯಲಾಗುತ್ತದೆ.

ಆದರೆ  ಕೋಲ್ಕತ್ತ ಪೋರ್ಟ್ ಟ್ರಸ್ಟ್ನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲ್ಗೊಳ್ಳಲಿಲ್ಲ. ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಬಳಿಕ ಮತ್ತೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp