ಜಮ್ಮು-ಕಾಶ್ಮೀರ: ಉಗ್ರರಿಗೆ ನಿವಾಸದಲ್ಲಿ ಆಶ್ರಯ, ಡಿವೈಎಸ್ಪಿ ದೇವೇಂದ್ರ ಸಿಂಗ್ ಸೇವೆಯಿಂದ ಅಮಾನತು

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಬಾದಾಮಿ ಬಾಗ್ ಕಂಟೋನ್ಮೆಂಟ್  ಬಳಿಯ ಎಕ್ಸ್ ವಿ ಕಾರ್ಪ್ಸ್ ಸೇನೆಯ ಪ್ರಧಾನ ಕಚೇರಿಯ ಪಕ್ಕದಲ್ಲಿರುವ ನಿವಾಸದಲ್ಲಿಯೇ ಮೂವರು ಉಗ್ರರಿಗೆ  ಆಶ್ರಯ ನೀಡಿದ್ದ ಡಿವೈಎಸ್ಪಿ ದೇವೇಂದ್ರ ಸಿಂಗ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಡಿವೈಎಸ್ಪಿ ದೇವೇಂದ್ರ ಸಿಂಗ್
ಡಿವೈಎಸ್ಪಿ ದೇವೇಂದ್ರ ಸಿಂಗ್

ಶ್ರೀನಗರ:  ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಬಾದಾಮಿ ಬಾಗ್ ಕಂಟೋನ್ಮೆಂಟ್  ಬಳಿಯ ಎಕ್ಸ್ ವಿ ಕಾರ್ಪ್ಸ್ ಸೇನೆಯ ಪ್ರಧಾನ ಕಚೇರಿಯ ಪಕ್ಕದಲ್ಲಿರುವ ನಿವಾಸದಲ್ಲಿಯೇ ಮೂವರು ಉಗ್ರರಿಗೆ  ಆಶ್ರಯ ನೀಡಿದ್ದ ಡಿವೈಎಸ್ಪಿ ದೇವೇಂದ್ರ ಸಿಂಗ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ದೇವೇಂದ್ರ ಸಿಂಗ್ ಅವರೊಂದಿಗೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು ನಾಲ್ಕು ತಿಂಗಳ ಹಿಂದೆ ದೇವೇಂದ್ರ ಸಿಂಗ್ ಅವರಿಗೆ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಗಿತ್ತು. ಪೊಲೀಸ್ ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳು ದೇವೇಂದ್ರ ಸಿಂಗ್ ಅವರ ವಿಚಾರಣೆಯನ್ನು ಮುಂದುವರೆಸಿದ್ದಾರೆ. 

ಅಪಹರಣ ವಿರೋಧಿ ದಳದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದ ಶ್ರೀನಗರ ವಿಮಾನ ನಿಲ್ದಾಣದಲ್ಲಿರುವ ಅವರ ಕಚೇರನ್ನು  ಬಂದ್  ಮಾಡಲಾಗಿದೆ. 

ನಿಷೇಧಿತ ಹಿಜ್ಬುಲ್  ಮುಜಾಹಿದ್ದೀನ್ ಸಂಘಟನೆಯ ಸ್ವಯಂ ಘೋಷಿತ ಜಿಲ್ಲಾ ಕಮಾಂಡರ್ ಗಳಾದ ನವೀದ್ ಬಾಬಾ ಮತ್ತು ಅಲ್ತಫ್ ಅವರನ್ನು  ಉಗ್ರ ಸಂಘಟನೆಗಳಿಗೆ ಕೆಲಸ ಮಾಡುತ್ತಿರುವ ವಕೀಲ ಇರ್ಪಾನ್ ಶುಕ್ರವಾರ ದೇವೇಂದ್ರ ಸಿಂಗ್ ಅವರ ಮನೆಗೆ ಕರೆದುಕೊಂಡು ಹೋಗಿದ್ದರು ಎಂಬುದು ತಿಳಿದುಬಂದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಿರ್ ಬಜಾರ್‌ನಲ್ಲಿ ಪೊಲೀಸರ ತಂಡ ಮತ್ತು ಇತರ ಮೂವರು ಶನಿವಾರ ಉಗ್ರರನ್ನು ಬಂಧಿಸುವಾಗ ದೇವೇಂದ್ರ ಸಿಂಗ್  ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ. ಡಿವೈಎಸ್ಪಿ ಭಾನುವಾರದಿಂದ ಗುರುವಾರದವರೆಗೆ ರಜೆಗಾಗಿ ಅರ್ಜಿ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ದೇವೇಂದ್ರ ಸಿಂಗ್ ಅವರ ನಿವಾಸವನ್ನು ಶೋಧಿಸಿರುವ ಪೊಲೀಸರು ಎರಡು ಪಿಸ್ತೂಲ್ , ಒಂದು ಎಕೆ ರೈಫಲ್  ಅಲ್ಲದೇ ಭಾರಿ ಪ್ರಮಾಣದ ಸ್ಟೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಡ್ತಿ ನೀಡಲು ಅವರ ಹೆಸರನ್ನು ಪರಿಗಣಿಸಲಾಗಿತ್ತು. ಆದರೆ,  ಈ ಪ್ರಕರಣದಿಂದಾಗಿ ಅದನ್ನು ತಡೆಹಿಡಿಯುವ ಹಾಗೂ ಕಳೆದ ವರ್ಷ ನೀಡಲಾಗಿದ್ದ ರಾಷ್ಟ್ರಪತಿ ಪದಕವನ್ನು ವಾಪಾಸ್ ಪಡೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. 

ಪೊಲೀಸ್ ಕಸ್ಟಡಿಯಲ್ಲಿ 48 ಗಂಟೆಗಳ ಪೂರ್ಣಗೊಳಿಸಿದ ನಂತರ ಸೇವಾ ನಿಯಮಗಳ ಪ್ರಕಾರ ಡಿವೈಎಸ್ಪಿಯನ್ನು ಅಮಾನತುಗೊಳಿಸಲಾಗಿದೆ ಎಂದು ಪರಿಗಣಿಸಲಾಗಿದೆ. ನವೀದ್ ಬಾಬಾ ಅವರನ್ನು ಕಣಿವೆಯಿಂದ ಹೊರಗೆ ಕರೆದೊಯ್ಯಲಾಗುತ್ತಿದೆ ಎಂಬ ಗುಪ್ತಚರ ಮಾಹಿತಿಯ ನಂತರ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಪೊಲೀಸ್ ತಂಡವೊಂದು ರಾಷ್ಟ್ರೀಯ ಹೆದ್ದಾರಿಯ ಚೆಕ್‌ಪಾಯಿಂಟ್‌ನಲ್ಲಿ ಸಿಂಗ್‌ನನ್ನು ಬಂಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com