ಸಿಎಎ ವಿರೋಧಿ ಸಭೆಗೆ ಶಿವಸೇನೆ ಗೈರು: ರಾಹುಲ್, ಅಹ್ಮದ್ ಪಟೇಲ್ ಭೇಟಿ ಮಾಡಿದ ಆದಿತ್ಯ ಠಾಕ್ರೆ! 

ಪೌರತ್ವ ತಿದ್ದುಪಡಿ ವಿರೋಧಿಸುವ ಪ್ರತಿಪಕ್ಷಗಳ ಸಭೆಗೆ ಶಿವಸೇನೆ ಗೈರಾಗಿತ್ತು. ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಆದಿತ್ಯ ಠಾಕ್ರೆ ರಾಹುಲ್ ಗಾಂಧಿ, ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡಿದ್ದಾರೆ. 

Published: 15th January 2020 12:37 PM  |   Last Updated: 15th January 2020 12:37 PM   |  A+A-


Aaditya Thackeray meets Rahul, Ahmed Patel in Delhi

ಸಿಎಎ ವಿರೋಧಿ ಸಭೆಗೆ ಶಿವಸೇನೆ ಗೈರು: ರಾಹುಲ್, ಅಹ್ಮದ್ ಪಟೇಲ್ ಭೇಟಿ ಮಾಡಿದ ಆದಿತ್ಯ ಠಾಕ್ರೆ!

Posted By : Srinivas Rao BV
Source : IANS

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ಪ್ರತಿಪಕ್ಷಗಳ ಸಭೆಗೆ ಶಿವಸೇನೆ ಗೈರಾಗಿತ್ತು. ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಆದಿತ್ಯ ಠಾಕ್ರೆ ರಾಹುಲ್ ಗಾಂಧಿ, ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡಿದ್ದಾರೆ. 

ರಾಹುಲ್ ಗಾಂಧಿ ಭೇಟಿಗೂ ಮುನ್ನ ಆದಿತ್ಯ ಠಾಕ್ರೆ ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡಿ ರಾಜ್ಯದ ಸಮ್ಮಿಶ್ರ ರಾಜಕಾರಣದ ಬಗ್ಗೆ ಚರ್ಚೆ ನಡೆಸಿದರು.
 
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾದ ಬಳಿಕ ಮೊದಲ ಬಾರಿಗೆ ರಾಹುಲ್ ಗಾಂಧಿ-ಆದಿತ್ಯ ಠಾಕ್ರೆ ಭೇಟಿ ಮಾಡಿದ್ದು ಸಿಎಎ ಹಾಗೂ ಎನ್ ಪಿಆರ್ ಬಗ್ಗೆಯೂ ಮಾತನಾಡಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp