ಮೋದಿಗೆ ಟಾಂಗ್ ಕೊಟ್ಟ ನಿತೀಶ್ ನಾಯಕತ್ವದಲ್ಲೇ ಬಿಹಾರ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಾಗಿದ್ದೇಕೆ? ಶಾ ರಣತಂತ್ರ

ಎನ್‌ಡಿಎ ಮೈತ್ರಿಕೂಟ ಪಕ್ಷಗಳು ಒಗ್ಗಟ್ಟಿನಿಂದ ಮುಂದುವರಿಯಲಿದ್ದು, ಬಿಹಾರದಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲೇ ಎದುರಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಸ್ಪಷ್ಟಪಡಿಸಿದ್ದಾರೆ.
ಮೋದಿ-ನಿತೀಶ್-ಅಮಿತ್ ಶಾ
ಮೋದಿ-ನಿತೀಶ್-ಅಮಿತ್ ಶಾ

ಹಾಜೀಪುರ: ಎನ್‌ಡಿಎ ಮೈತ್ರಿಕೂಟ ಪಕ್ಷಗಳು ಒಗ್ಗಟ್ಟಿನಿಂದ ಮುಂದುವರಿಯಲಿದ್ದು, ಬಿಹಾರದಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲೇ ಎದುರಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಸ್ಪಷ್ಟಪಡಿಸಿದ್ದಾರೆ.
 
ಈ ವರ್ಷದ ಅಕ್ಟೋಬರ್-ನವಂಬರ್ ತಿಂಗಳಲ್ಲಿ ನಡೆಯಬಹುದಾದ ಬಿಹಾರ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಹಾಗೂ ಜೆಡಿಯು ಪಕ್ಷಗಳನ್ನು ಒಳಗೊಂಡ ಎನ್‌ಡಿಎ ಮೈತ್ರಿಕೂಟ ಒಗ್ಗೂಡಿ ಎದುರಿಸಲಿವೆ.  ಈ ಸಂಬಂಧ ಹಬ್ಬಿರುವ ಎಲ್ಲ ವದಂತಿಗಳನ್ನು ಗೃಹ ಸಚಿವ ಅಮಿತ್ ಶಾ ತಳ್ಳಿಹಾಕಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಬಿಜೆಪಿ ಆಯೋಜಿಸಿರುವ ಜನ ಜಾಗೃತಿ ಅಭಿಯಾನದ ಭಾಗವಾಗಿ ಸಾರ್ವಜನಿಕ ಸಭೆ  ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲೇ ಮುಂದಿನ ವಿಧಾನಸಭಾ ಚುನಾವಣೆಯನ್ನು ಎನ್‌ಡಿಎ ಒಗ್ಗಟ್ಟಿನಿಂದ ಎದುರಿಸಲಿದ್ದು, ಈ ವಿಷಯದಲ್ಲಿ ಯಾರೊಬ್ಬರಿಗೂ, ಯಾವುದೇ ಅನುಮಾನ ಬೇಡ ಎಂದು ಅಮಿತ್ ಶಾ ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್ ಡಿಎ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿಯಂತಹ ವಿವಾದಾತ್ಮಕ  ನಿರ್ಧಾರಗಳನ್ನು ಒಂದರ ನಂತರ ಕೈಗೊಳ್ಳುತ್ತಿದ್ದು, ಈ ನಿರ್ಧಾರಗಳು ಕೇವಲ ವಿರೋಧ ಪಕ್ಷಗಳನ್ನು ಮಾತ್ರವಲ್ಲದೆ, ನಿತೀಶ್ ಕುಮಾರ್ ಆಧ್ಯಕ್ಷರಾಗಿರುವ ಜೆಡಿಯು ಸಹ ವಿರೋಧಿಸುತ್ತಿದ್ದು ಈ ಹಿನ್ನಲೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟ ಒಗ್ಗಟ್ಟಾಗಿ ಉಳಿಯುವ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ  ಸಂಶಯಗಳು ಉದ್ಭವಿಸಿವೆ.

ಎನ್‌ಡಿಎ ಮೈತ್ರಿಕೂಟವನ್ನು ಕಡೆಗಣಿಸುವ, ಆರ್ ಜೆಡಿ ಹಾಗೂ ಇತರ ವಿರೋಧ ಪಕ್ಷಗಳ ಯಾವುದೇ ಪ್ರಯತ್ನದ ಬಗ್ಗೆ ಎಚ್ಚರಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಅಮಿತ್ ಶಾ, ಇದು ಯಾವುದೇ ಸಕಾರಾತ್ಮಕ ಫಲಿತಾಂಶ ಕಲ್ಪಿಸುವುದಿಲ್ಲ ಎಂದರು. ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಎನ್‌ಡಿಎ ಸರ್ಕಾರ ಬಿಹಾರವನ್ನು ಆರ್ಜೆಡಿಯ ಜಂಗಲ್ ರಾಜ್ ಆಡಳಿತದ ಕಂದೀಲು ಯುಗದಿಂದ ಎಲ್ ಇಡಿ ಯುಗಕ್ಕೆ ಬದಲಾಯಿಸಿ,  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು. ಆರ್ ಜೆಡಿ ಆಡಳಿತದಲ್ಲಿ ಬಿಹಾರದ ಬೆಳವಣಿಗೆಯ ದರ ಶೇ. 3 ಮಾತ್ರ ಇದ್ದರೆ, ಎನ್‌ಡಿಎ ಆಡಳಿತದಲ್ಲಿ ಇದು ಶೇ.11 ಕ್ಕೆ ಏರಿದೆ ಎಂದು ಅವರು  ಅಮಿತ್ ಶಾ ಸಮರ್ಥಿಸಿಕೊಂಡರು.

ಆರ್ ಜೆಡಿ ಆಳ್ವಿಕೆಯಲ್ಲಿ, ಪಶುಗಳ ಮೇವಿಗಾಗಿ ಮೀಸಲಿರಿಸಿದ್ದ ನಿಧಿಯನ್ನು ದರುಪಯೋಗಪಡಿಸಿಕೊಳ್ಳಲಾಗಿತ್ತು. ಬಿಹಾರದ ಮೇವಿನ ಹಗರಣ ಇಡೀ  ದೇಶವನ್ನು ಬೆಚ್ಚಿಬೀಳಿಸಿದ್ದು, ಅಂದಿನ ಆಡಳಿತ ಪಕ್ಷದ ಹಲವಾರು ನಾಯಕರು ಈಗ ಜೈಲು ಶಿಕ್ಷೆ ಎದುರಿಸುತ್ತಿದ್ದಾರೆ ಎಂದು ಶಾ ಹೇಳಿದರು, ಪ್ರಸ್ತುತ ನಿತೀಶ್ ಕುಮಾರ್ ಆಡಳಿತದಲ್ಲಿ ಬಿಹಾರದಲ್ಲಿ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದರು.

ರಾಜ್ಯ ಮೇಲ್ಮನೆ ಸದಸ್ಯ ಸಂಜಯ್ ಪಾಸ್ವಾನ್ ಸೇರಿ ಕೆಲ ಬಿಜೆಪಿ ನಾಯಕರು ಬಿಹಾರದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸುವ  ಬದಲು ಬಿಜೆಪಿ ನಾಯಕನ್ನು ಘೋಷಿಸಬೇಕು ಎಂದು ಬಹಿರಂಗವಾಗಿ ಒತ್ತಾಯಿಸಿದ್ದರಿಂದ ಬಿಹಾರದಲ್ಲಿ ಎನ್‌ಡಿಎ ಭವಿಷ್ಯದ ಬಗ್ಗೆ ಊಹಾಪೋಹಗಳು ಹಬ್ಬಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com