ಪೌರತ್ವ ತಿದ್ದುಪಡಿ ಕಾಯ್ದೆಗೆ ತಡೆ ನೀಡಿ: ಭಾರತೀಯ ಮುಸ್ಲಿಂ ಲೀಗ್ ಸಂಘಟನೆಯಿಂದ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ  

ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) 2019ಕ್ಕೆ ತಡೆಯೊಡ್ಡಬೇಕೆಂದು ಭಾರತೀಯ ಮುಸ್ಲಿಂ ಲೀಗ್ ಸಂಘಟನೆ(ಐಯುಎಂಎಲ್)ಗುರುವಾರ ಎರಡು ಹೊಸ ಅರ್ಜಿ ಸಲ್ಲಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆಗೆ ತಡೆ ನೀಡಿ: ಭಾರತೀಯ ಮುಸ್ಲಿಂ ಲೀಗ್ ಸಂಘಟನೆಯಿಂದ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ  

ನವದೆಹಲಿ: ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) 2019ಕ್ಕೆ ತಡೆಯೊಡ್ಡಬೇಕೆಂದು ಭಾರತೀಯ ಮುಸ್ಲಿಂ ಲೀಗ್ ಸಂಘಟನೆ(ಐಯುಎಂಎಲ್)ಗುರುವಾರ ಎರಡು ಹೊಸ ಅರ್ಜಿ ಸಲ್ಲಿಸಿದೆ.
ದೇಶಾದ್ಯಂತ ರಾಷ್ಟ್ರೀಯ ಪೌರತ್ವ ದಾಖಲಾತಿ(ಎನ್ಆರ್ ಸಿ)ಯನ್ನು ಜಾರಿಗೆ ತರುವುದರ ಬಗ್ಗೆ ಸ್ಪಷ್ಟತೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬೇಕೆಂದು ಸಹ ಅದು ನ್ಯಾಯಾಲಯವನ್ನು ಕೋರಿದೆ.


ಸಿಎಎಯು ಎನ್ ಆರ್ ಸಿಗೆ ಪೂರ್ವಗಾಮಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಲವು ಸಂದರ್ಭಗಳಲ್ಲಿ ಹೇಳಿರುವುದನ್ನು ಮತ್ತು ಕ್ರೀಡಾ ಇಲಾಖೆ ರಾಜ್ಯ ಸಚಿವ ಕಿರನ್ ರಿಜಿಜು ರಾಜ್ಯಸಭೆಯಲ್ಲಿ, ರಾಷ್ಟ್ರೀಯ ಜನಸಂಖ್ಯಾ ದಾಖಲಾತಿ(ಎನ್ ಪಿಆರ್) ಎನ್ ಆರ್ ಸಿಗೆ ಮೊದಲ ಹೆಜ್ಜೆ ಎಂದು ಹೇಳಿರುವುದನ್ನು ಸಹ ಮುಸ್ಲಿಂ ಲೀಗ್ ಅರ್ಜಿಯಲ್ಲಿ ನಮೂದಿಸಿದೆ.


ಪ್ರಧಾನ ಮಂತ್ರಿ, ಗೃಹ ಸಚಿವರು, ಕಾನೂನು ಸಚಿವರು ನಂತರ ಎನ್ ಆರ್ ಸಿ ಯೋಜನೆಯನ್ನು ಹಾಗೂ ಎನ್ ಪಿಆರ್ ಮತ್ತು ಎನ್ ಆರ್ ಸಿ ನಡುವಿನ ಸಂಬಂಧವನ್ನು ನಿರಾಕರಿಸಲಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ದೇಶಾದ್ಯಂತ ಸಿಎಎ ಮತ್ತು ಎನ್ ಆರ್ ಸಿ ವಿರುದ್ಧ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಹಿನ್ನಲೆಯಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ. ಒಟ್ಟಾರೆ ಇದರಲ್ಲಿ ವ್ಯಾಪಕ ಗೊಂದಲಗಳಿದ್ದು ದೇಶದ ಜನರಲ್ಲಿ ಒಟ್ಟಾರೆ ಗೊಂದಲ, ಭಯ ಉಂಟಾಗಿದೆ, ಹೀಗಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡುವವರೆಗೆ ಎನ್ ಆರ್ ಸಿ ಮತ್ತು ಎನ್ ಪಿಆರ್ ಪ್ರಕ್ರಿಯೆಗಳಿಗೆ ತಡೆಯೊಡ್ಡಬೇಕೆಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com