ದೇಶದ್ರೋಹ ಪ್ರಕರಣ: ವಿಚಾರಣೆಗೆ ಹಾಜರಾಗದೆ ನ್ಯಾಯಾಂಗಕ್ಕೆ ಅಗೌರವ, ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಬಂಧನ

2015 ರ ದೇಶದ್ರೋಹ ಪ್ರಕರಣವೊಂದರಲ್ಲಿ ವಿಚಾರಣೆಗೆ ಹಾಜರಾಗಲು ವಿಫಲವಾದ ಕಾರಣ  ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಅವರನ್ನು ಗುಜರಾತ್‌ನ ಅಹಮದಾಬಾದ್ ಜಿಲ್ಲೆಯ ವಿರಮ್‌ಗಮ್ ತಾಲ್ಲೂಕಿನಲ್ಲಿ  ಶನಿವಾರ ರಾತ್ರಿ ಬಂಧಿಸಲಾಗಿದೆ.

Published: 18th January 2020 11:27 PM  |   Last Updated: 18th January 2020 11:43 PM   |  A+A-


ಹಾರ್ದಿಕ್ ಪಟೇಲ್

Posted By : Raghavendra Adiga
Source : PTI

ಅಹಮದಾಬಾದ್: 2015 ರ ದೇಶದ್ರೋಹ ಪ್ರಕರಣವೊಂದರಲ್ಲಿ ವಿಚಾರಣೆಗೆ ಹಾಜರಾಗಲು ವಿಫಲವಾದ ಕಾರಣ  ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಅವರನ್ನು ಗುಜರಾತ್‌ನ ಅಹಮದಾಬಾದ್ ಜಿಲ್ಲೆಯ ವಿರಮ್‌ಗಮ್ ತಾಲ್ಲೂಕಿನಲ್ಲಿ  ಶನಿವಾರ ರಾತ್ರಿ ಬಂಧಿಸಲಾಗಿದೆ.

ಪಟೇಲ್ ಬಂಧನವನ್ನು ಡಿಸಿಪಿ ರಾಜ್‌ದೀಪ್ ಸಿಂಗ್  ಜಲಾ (ಸೈಬರ್ ಅಪರಾಧ) ದೃ ಢಪಡಿಸಿದ್ದಾರೆ."ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ನಂತರ ನಾವು ಹಾರ್ದಿಕ್ ಪಟೇಲ್ ಅವರನ್ನು ವಿರಮ್‌ಗಂ ಬಳಿ ಬಂಧಿಸಿದ್ದೇವೆ. ನಾಳೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ" ಎಂದು ಜಲಾ ಹೇಳಿದರು.

ಆಗಸ್ಟ್ 25, 2015 ರಂದು ಅಹಮದಾಬಾದ್ನಲ್ಲಿ ಪಟೇಲ್ ಸಮುದಾಯ ನಡೆಸಿದ ರ್ಯಾಲಿಯಲ್ಲಿ ಹಿಂಸಾಚಾರ ನಡೆದ ನಂತರ ಸ್ಥಳೀಯ ಅಪರಾಧ ಶಾಖೆ ಸಲ್ಲಿಸಿದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟೇಲ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಆ ನಂತರ 2016 ರ ಜುಲೈನಲ್ಲಿ ಜಾಮೀನು ನೀಡಲಾಯಿತು, ನ್ಯಾಯಾಲಯವು 2018 ರ ನವೆಂಬರ್‌ನಲ್ಲಿ ಈ ಪ್ರಕರಣದಲ್ಲಿ ಆತನ ಮತ್ತು ಇತರ ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸಿತ್ತು.

ಪಾಟೀದಾರ್ ಸಮುದಾಯದ ಮುಖಂಡನ ಪರ ವಕೀಲರು ಸಲ್ಲಿಸಿದ ವಿನಾಯಿತಿ ಅರ್ಜಿಯ ವಿರುದ್ಧ ಸರ್ಕಾರದ ಮನವಿಯನ್ನು ಅಂಗೀಕರಿಸಿದ ನಂತರ, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಬಿ ಜಿ ಗಣತ್ರಾ ಅವರು ಪಟೇಲ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದಾರೆ. ಕೋರ್ಟ್ ಗೆ ನಿಯಮಿತವಾಗಿ ಹಾಜರಾಗದೆ ಲಕ ವಿಚಾರಣೆಯನ್ನು ವಿಳಂಬಗೊಳಿಸುವ ಉದ್ದೇಶದ ಕುರಿತು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿದೆ ಪ್ರಕರಣದಲ್ಲಿ ಕ್ರಾಸ್ ಚೆಕ್ ಮಾಡಬೇಕಾಗಿರುವ  ಪಟೇಲ್, ವಿಚಾರಣೆಯನ್ನು ವಿಳಂಬಗೊಳಿಸುವ ಉದ್ದೇಶದಿಂದ ನಿಯಮಿತವಾಗಿ ಹಾಜರಾಗದೆ ಜಾಮೀನು ಷರತ್ತುಗಳನ್ನು ಮೀರುತ್ತಿದ್ದಾನೆ ಎಂದು ನ್ಯಾಯಾಲಯವು ಗಮನಿಸಿದೆ.

 

 

ಪಟೇಲ್ ಅವರು 2019 ರ ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp