ಜೈಸಿಂಗ್ ಗೆ ನಾಚಿಕೆಯಾಗ್ಬೇಕು! ನಾವು ಸೋನಿಯಾ ಅವರಂತೆ 'ವಿಶಾಲ ಹೃದಯ'ದವರಲ್ಲ: ನಿರ್ಭಯಾ ತಂದೆ ತಿರುಗೇಟು

ನನ್ನ ಮಗಳ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದು ಅವರಿಗೆ ಕ್ಷಮಾದಾನ ನೀಡಬೇಕು ಎಂದಿರುವ ಹಿರಿಯ ವಕೀಲ ಇಂದಿರಾ ಜೈಸಿಂಗ್ ಅವರಿಗೆ ತಮ್ಮ ಬಗ್ಗೆ ತಮಗೇ ನಾಚಿಕ್ಕೆಯಾಗಬೇಕು ಎಂದು ನಿರ್ಭಯಾ ತಂದೆ ಹೇಳಿದ್ದಾರೆ.ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿ ಯವರಂತೆ ಅವರ ಕುಟುಂಬದಂತೆ ನಾವು "ವಿಶಾಲ ಹೃದಯ"ವನ್ನು ಹೊಂದಿಲ್ಲ ಎಂದು ಅವರು ಇದೇ ವ

Published: 18th January 2020 09:30 PM  |   Last Updated: 18th January 2020 09:30 PM   |  A+A-


ರ್ಭಯಾ ತಂದೆ

Posted By : Raghavendra Adiga
Source : PTI

ನವದೆಹಲಿ: ನನ್ನ ಮಗಳ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದು ಅವರಿಗೆ ಕ್ಷಮಾದಾನ ನೀಡಬೇಕು ಎಂದಿರುವ ಹಿರಿಯ ವಕೀಲ ಇಂದಿರಾ ಜೈಸಿಂಗ್ ಅವರಿಗೆ ತಮ್ಮ ಬಗ್ಗೆ ತಮಗೇ ನಾಚಿಕ್ಕೆಯಾಗಬೇಕು ಎಂದು ನಿರ್ಭಯಾ ತಂದೆ ಹೇಳಿದ್ದಾರೆ.ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿ ಯವರಂತೆ ಅವರ ಕುಟುಂಬದಂತೆ ನಾವು "ವಿಶಾಲ ಹೃದಯ"ವನ್ನು ಹೊಂದಿಲ್ಲ ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟರು.

ಇದಕ್ಕೆ ಮುನ್ನ ನಿರ್ಭಯಾ ಅತ್ಯಾಚಾರಿಗಳಿಗೆ ಮರಣದಂಡನೆ ಬದಲು ಕ್ಷಮಾದಾನ ನೀಡಬೇಕೆಂದು  ಎಂ.ಎಸ್.ಜೈಸಿಂಗ್ ಎಂದು ಆಗ್ರಹಿಸಿದ್ದರು.

ಶುಕ್ರವಾರ ಟ್ವೀಟ್ನಲ್ಲಿ, ಎಂ.ಎಸ್. ಜೈಸಿಂಗ್ ಅವರು ನಿರ್ಭಯಾ ಅವರ ತಾಯಿಯ ನೋವು ಗೊತ್ತಿದ್ದೂ "ನಳಿನಿಯನ್ನು ಕ್ಷಮಿಸಿದ ಸೋನಿಯಾ ಗಾಂಧಿಯ ಉದಾಹರಣೆಯನ್ನು ಅನುಸರಿಸಬೇಕೆಂದು ನಾನು ನಿರ್ಭಯಾ ತಾಯಿಯನ್ನು ಒತ್ತಾಯಿಸುತ್ತೇನ. ಆರೋಪಿಗಳ ಮರಣದಂಡನೆಗೆ ನನ್ನ ಸಹಮತವಿಲ್ಲ" ಎಂದಿದ್ದರು.

"ನಾವು ನಿಮ್ಮೊಂದಿಗಿದ್ದೇವೆ ಆದರೆ ಮರಣದಂಡನೆಗೆ ನನ್ನ ಸಹಮತವಿಲ್ಲ" ಅವರು ಹೇಳಿದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ನಳಿನಿ ಶ್ರೀಹರನ್ ಅವರಿಗೆ ಮರಣದಂಡನೆ ವಿಧಿಸಲಾಗಿದ್ದು ಬಳಿಕ ಅದನ್ನು  ಜೀವಾವಧಿ ಶಿಕ್ಷೆಗೆ ಬದಲಿಸಲಾಗಿದೆ.ರಾಜೀವ್ ಗಾಂಧಿ ಪತ್ನಿ ಸೋನಿಯಾಗಾಂಧಿ ತನ್ನ ಪತಿಯ ಹತ್ಯೆ ಆರೋಪಿ ನಳಿನಿ ಜೈಲಿನಲ್ಲಿ ಜನಿಸಿದ ಚಿಕ್ಕ ಮಗಳನ್ನು ಹೊಂದಿದ್ದಾಳೆ ಎಂಬ ಕಾರಣಕ್ಕಾಗಿ ಕ್ಷಮಾದಾನಕ್ಕೆ ಆಗ್ರಹಿಸಿದ್ದರು.

ಆದರೆ ನಿರ್ಭಯಾ ತಂದೆ "ಇದೊಂದು ತಪ್ಪು ಸಂದೇಶ" ಎಂದಿದ್ದಾರೆ."ಆಕೆ (ಇಂದಿರಾ ಜೈಸಿಂಗ್) ಸ್ವತಃ ಒಬ್ಬ ಮಹಿಳೆ. ಆಕೆಯ ಅಭಿಪ್ರಾಯಗದ ಬಗೆಗೆ ಅವರಿಗೇ ನಾಚಿಕೆಯಾಗಬೇಕು.ನಿರ್ಭಯಾ ತಾಯಿ ಬಳಿ ಕ್ಷಮೆ ಬೇಡಬೇಕುನಾವು ಏಳು ವರ್ಷಗಳಿಂದ ಈ ಪ್ರಕರಣದ ವಿರುದ್ಧ ಹೋರಾಡುತ್ತಿದ್ದೇವೆ. ನಾವು ಸಾಮಾನ್ಯ ಜನರು ಮತ್ತು ರಾಜಕಾರಣಿಗಳಲ್ಲ.ನಾವು ಸೋನಿಯಾ ಗಾಂಧಿಯಷ್ಟು ದೊಡ್ಡ ಹೃದಯದವರಲ್ಲ" ಅವರು ಹೇಳೀದ್ದಾರೆ."ಹೆಚ್ಚುತ್ತಿರುವ ಅತ್ಯಾಚಾರಗಳಿಗೆ ಇಂತಹ ಮನಸ್ಥಿತಿಯು ಕಾರಣವಾಗಿದೆ" ಎಂದು ಅವರು ಹೇಳಿದರು.ತಮ್ಮ ಪತ್ನಿ ಸಹ ನನ್ನ ಆಭಿಪ್ರಾಯಕ್ಕೆ ಸಹಮತ ಹೊಂದಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ನಾವು ನ್ಯಾಯಾಲಯದಲ್ಲಿ .ಜೈಸಿಂಗ್ ಅವರನ್ನು ನೋಡಿದ್ದೇವೆ, ಆದರೆ ಅವರೊಡನೆ ಎಂದಿಗೂ ಮಾತುಕತೆ ನಡೆಸಿಲ್ಲಎಂದು ಅವರು ಹೇಳಿದರು."ಈ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲದ ಆಕೆ ಏನನ್ನಾದರೂ ಹೇಳಬೇಕಾಗಿತ್ತು  ಆದರೆ ಅನುಚಿತ ಮಾತನ್ನು ಹೇಳಿ  ಅವಮಾನವನ್ನು ಎದುರಿಸಬೇಕಾಯಿತು" ಎಂದು ಅವರು ಕೇಳಿದರು.

ಜನವರಿ 20 ರಂದು ಸುಪ್ರೀಂ ವಿಚಾರಣೆ

ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೊಳಗಾದವರ ಮನವಿಯನ್ನು ಸುಪ್ರೀಂ ಕೋರ್ಟ್ ಜನವರಿ 20 ರಂದು ವಿಚಾರಣೆ ನಡೆಸಲಿದೆ.ನ್ಯಾಯಮೂರ್ತಿಗಳಾದ ಆರ್ ಬಾನುಮತಿ, ಅಶೋಕ್ ಬುಶನ್ ಮತ್ತು ಎ ಎಸ್ ಬೋಪಣ್ಣ ಅವರ ನ್ಯಾಯಪೀಠವು ಪವನ್ ಕುಮಾರ್ ಗುಪ್ತಾ ಅವರ ಮನವಿಯನ್ನು ಆಲಿಸಲಿದೆ.

2012 ರ ಡಿಸೆಂಬರ್‌ನಲ್ಲಿ  ತಾನು ಬಾಲಾಪರಾಧಿಯಾಗಿದ್ದೆ ಎಂಬ ಹೇಳಿಕೆಯನ್ನು ತಳ್ಳಿಹಾಕಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಗುಪ್ತಾ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತೆರಳಿದರು.ಅಲ್ಲದೆ, ಫೆಬ್ರವರಿ 1 ರಂದು ನಿಗದಿಯಾಗಿದ್ದ ಮರಣದಂಡನೆಯನ್ನುವಿಧಿಸದಂತೆ ಅಧಿಕಾರಿಗಳನ್ನು ತಡೆಯುವ ನಿರ್ದೇಶನವನ್ನು ಕೊಡಬೇಕೆಂದು ಅವರು ನ್ಯಾಯಾಲಯಕ್ಕೆ ಕೋರಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp