ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ರಾವಣನಿಗೆ ಹೋಲಿಸಿ ಎಸ್ ಪಿ ಕೈ ಹಿಡಿದ ಯೋಗಿ ಆಪ್ತ

ಹಿಂದೊಮ್ಮೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ತಮ್ಮ ನಡುವಿನ ಸಂಬಂಧವನ್ನು ರಾಮ- ಹನುಮಂತನಿಗೆ ಹೋಲಿಸಿದ್ದ ಹಿಂದೂ ಯುವ ವಾಹಿನಿಯ ಮಾಜಿ ಅಧ್ಯಕ್ಷ ಸುನೀಲ್ ಸಿಂಗ್ ಇದೀಗ ಯೋಗಿ ಆದಿತ್ಯನಾಥ್ ಅವರನ್ನು ರಾವಣನಿಗೆ ಹೋಲಿಸುವ ಮೂಲಕ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

Published: 18th January 2020 07:06 PM  |   Last Updated: 18th January 2020 07:06 PM   |  A+A-


SunilSingh1

ಸಮಾಜವಾದಿ ಪಕ್ಷ ಸೇರ್ಪಡೆಯಾದ ಯೋಗಿ ಆಪ್ತ

Posted By : Nagaraja AB
Source : Online Desk

ಲಖನೌ: ಹಿಂದೊಮ್ಮೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ತಮ್ಮ ನಡುವಿನ ಸಂಬಂಧವನ್ನು ರಾಮ- ಹನುಮಂತನಿಗೆ ಹೋಲಿಸಿದ್ದ ಹಿಂದೂ ಯುವ ವಾಹಿನಿಯ ಮಾಜಿ ಅಧ್ಯಕ್ಷ ಸುನೀಲ್ ಸಿಂಗ್ ಇದೀಗ ಯೋಗಿ ಆದಿತ್ಯನಾಥ್ ಅವರನ್ನು ರಾವಣನಿಗೆ ಹೋಲಿಸುವ ಮೂಲಕ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಉತ್ತರ ಪ್ರದೇಶದಲ್ಲಿನ ಮಹಿಳೆಯರು, ರೈತರು ಹಾಗೂ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವ ಬಿಜೆಪಿಯನ್ನು ನಾಶ ಮಾಡುವ ಶಪಥದೊಂದಿಗೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವನ್ನು ಇಂದು  ಸೇರಿಕೊಂಡಿದ್ದಾರೆ.

ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತು  ತಮ್ಮ ಬೆಂಬಲಿಗರೊಂದಿಗೆ ಸಮಾಜವಾದಿ ಪಕ್ಷವನ್ನು ಸೇರ್ಪಡೆಯಾಗಿರುವುದಾಗಿ ತಿಳಿಸಿರುವ ಸುನೀಲ್ ಸಿಂಗ್, 2022ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಮಚರಿತಮಾನಸದಲ್ಲಿನ ಅಧ್ಯಯನವೊಂದರಲ್ಲಿ ಸೀತೆಯನ್ನು ಅಪಹರಿಸುವ ರಾವಣ ಕೇಸರಿ ಧರಿಸಿರುತ್ತಾನೆ. ಆದೇ ರೀತಿಯ ರಾವಣನಾಗಿ ಯೋಗಿ ಆದಿತ್ಯನಾಥ್ ಹುಟ್ಟಿದ್ದು, ಉತ್ತರ ಪ್ರದೇಶ ಸರ್ಕಾರ ಲಕ್ಷಾಂತರ ಮಂದಿಯ ಕನಸುಗಳನ್ನು ನಾಶಪಡಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp