ಭಾನುವಾರ ಶಿರಡಿ ಬಂದ್ ಆಗಲ್ಲ! ವದಂತಿಗಳನ್ನು ತಳ್ಳಿ ಹಾಕಿದ ಶಿರಡಿ ಟ್ರಸ್ಟ್

: ಪೂಜ್ಯ ಗುರು ಶಿರಡಿ ಶ್ರೀ ಸಾಯಿಬಾಬಾ ಅವರ ಜನ್ಮಸ್ಥಳ 'ವಿವಾದ' ಅವರು 'ಸಮಾಧಿ' ಹೊಂದಿದ 102 ವರ್ಷಗಳ ನಂತರ ಮತ್ತೆ ತಲೆ ಎತ್ತಿದೆ.ಇದರಿಂದ ರ ವಿಶ್ವಪ್ರಸಿದ್ಧ ಶಿರಡಿ ಪಟ್ಟಣ ಭಾನುವಾರ ಬಂದ್ ಆಗಲಿದೆ ಎಂಬ ವದಂತಿಗಳೂ ಹರಡಿದ್ದವು ಆದರೆ  ವದಂತಿಗಳನ್ನು ತಳ್ಳಿಹಾಕಿದ ದೇವಾಲಯದ ಉನ್ನತ ಅಧಿಕಾರಿ ಶಿರಡಿ ಸಾಯಿಬಾಬಾ ದೇವಾಲಯ ಭಾನುವಾರ ಸಹ ತೆರೆದಿರುತ್ತದೆ ಮತ್ತು ಎಲ್ಲಾ ಸೌಲಭ
ಶಿರಡಿ ಸಾಯಿಬಾಬಾ
ಶಿರಡಿ ಸಾಯಿಬಾಬಾ

ಅಹಮದ್ ನಗರ: ಪೂಜ್ಯ ಗುರು ಶಿರಡಿ ಶ್ರೀ ಸಾಯಿಬಾಬಾ ಅವರ ಜನ್ಮಸ್ಥಳ 'ವಿವಾದ' ಅವರು 'ಸಮಾಧಿ' ಹೊಂದಿದ 102 ವರ್ಷಗಳ ನಂತರ ಮತ್ತೆ ತಲೆ ಎತ್ತಿದೆ.ಇದರಿಂದ ರ ವಿಶ್ವಪ್ರಸಿದ್ಧ ಶಿರಡಿ ಪಟ್ಟಣ ಭಾನುವಾರ ಬಂದ್ ಆಗಲಿದೆ ಎಂಬ ವದಂತಿಗಳೂ ಹರಡಿದ್ದವು ಆದರೆ  ವದಂತಿಗಳನ್ನು ತಳ್ಳಿಹಾಕಿದ ದೇವಾಲಯದ ಉನ್ನತ ಅಧಿಕಾರಿ ಶಿರಡಿ ಸಾಯಿಬಾಬಾ ದೇವಾಲಯ ಭಾನುವಾರ ಸಹ ತೆರೆದಿರುತ್ತದೆ ಮತ್ತು ಎಲ್ಲಾ ಸೌಲಭ್ಯಗಳು ಎಂದಿನಂತೆ ಮುಂದುವರಿಯುತ್ತದೆ ಎಂದು ಹೇಳಿದರು.

"ದೇವಾಲಯ ಎಂದಿನಂತೆ ತೆರೆಯುತ್ತದೆ, ಎಲ್ಲಾ 'ಪೂಜೆಗಳು' ಮತ್ತು ಸೇವಾ ಕೈಂಕರ್ಯಗಳು ಎಂದಿನಂತೆ ನಡೆಯಲಿದೆ.ಭಕ್ತರು ಸಾಯಿಬಾಬಾದ 'ದರ್ಶನ ಪಡೆಯಲು ಮುಕ್ತರಾಗುತ್ತಾರೆ, 'ಪ್ರಸಾದ ಸಹ ನೀಡಲಾಗುವುದು ಮತ್ತು ಯಾತ್ರಾರ್ಥಿಗಳ ವಸತಿ ಸೌಕರ್ಯಗಳು ಇತ್ಯಾದಿ ಸಹ ಸಾಮಾನ್ಯ ರೀತಿಯಲ್ಲಿ ಮುಂದುವರಿಯುತ್ತದೆ, "ಶ್ರೀ ಸಾಯಿಬಾಬಾ ಸಂಸ್ಥಾನ್ ಟ್ರಸ್ಟ್ (ಎಸ್‌ಎಸ್‌ಟಿ) ಶಿರಡಿ ಸಿಇಒ ದೀಪಕ್ ಮುಗ್ಲಿಕರ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಪತ್ರಿ ಗ್ರಾಮವು 19 ನೇ ಶತಮಾನದ ಸಂತ ಶ್ರೀ ಸಾಯಿಬಾಬಾ ಅವರ ಜನ್ಮಸ್ಥಳ ಎಂದು  ಮಹಾರಾಷ್ಟ್ರ ಮುಖ್ಯ ಮಂತ್ರಿ ಉದ್ಧವ್ ಠಾಕ್ರೆ ಹೇಳಿದ ಬೆನ್ನಲ್ಲೇ  ಶಿರಡಿ ಪಟ್ಟಣ  ಬಂದ್ ಆಗುತ್ತದೆ ಎಂದು ವದಂತಿ ಹವ್ಬ್ಬಿತ್ತು. ಸಿಎಂ ಠಾಕ್ರೆ ಪತ್ರಿ ಗ್ರಾಮದ ಅಭಿವೃದ್ಧಿಗಾಗಿ 100 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಘೋಷಿಸಿದ್ದಾರೆ 

ಆದರೆ ಈ ವದಂತಿಗಳನ್ನು ತಳ್ಳಿ ಹಾಕಿರುವ ಶಿರಡಿ ಟ್ರಸ್ಟ್ ಲವು ವ್ಯಕ್ತಿಗಳು ಯೋಜಿಸಿರುವಂತೆ ಶಿರಡಿಯನ್ನು ಮುಚ್ಚುವ ಬಗ್ಗೆ ದೇವಾಲಯ ಆಡಳಿತವು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇನ್ನೊಂದೆಡೆ ಮುಖ್ಯಮಂತ್ರಿ ಠಾಕ್ರೆ ಪತ್ರಿ ಸಾಯಿಬಾಬಾ ಜನ್ಮಸ್ಥಳ ಅದರ ಅಭಿವೃದ್ಧಿಗೆ 100 ಕೋಟಿ ರೂ.ಗಳನ್ನು ಮಂಜೂರು  ಂಆಡಿದ್ದಾರೆಂಬ ವಿಚಾರದ ವಿರುದ್ಧ  ಭಾರತೀಯ ಜನತಾ ಪಕ್ಷದ ಸಂಸದ ಸುಜಯ್ ವಿಖೆ-ಪಾಟೀಲ್ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ."ಇಲ್ಲಿಯವರೆಗೆ ಅಂತಹ ಯಾವುದೇ ವಿವಾದ ಇರಲಿಲ್ಲ. ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರವೇ ಪತ್ರಿ ಸಾಯಿಬಾಬಾ ಅವರ ಜನ್ಮಸ್ಥಳ ಎಂಬ ಕೂಗು ಏಕೆ ಕೇಳಿ ಬಂದಿದೆ?ಶಿರಡಿಯ ಜನರು ಕಾನೂನು ಕ್ರಮ ಕೈಗೊಳ್ಳಬಹುದು" ಎಂದು ಸುಜಯ್ ವಿಖೆ-ಪಾಟೀಲ್ ಎಚ್ಚರಿಸಿದ್ದಾರೆ, ಅವರ ಕ್ಷೇತ್ರವ್ಯಾಪ್ತಿಯಲ್ಲಿಲ್ ಶಿರಡಿ ಪಟ್ಟಣ ಬರುತ್ತದೆ.ಮತ್ತೊಂದೆಡೆ,ಸಾಯಿಬಾಬಾ ಜನ್ಮಸ್ಥಳ ಪತ್ರಿ ಎಂಬುದನ್ನು ಸಾಬೀತು ಮಾಡಲು  "ಸಾಕಷ್ಟು ಐತಿಹಾಸಿಕ ಪುರಾವೆಗಳಿವೆ" ಎಂದು ಎನ್‌ಸಿಪಿ ಹಿರಿಯ ಮುಖಂಡ ದುರ್ರಾನಿ ಅಬ್ದುಲ್ಲಾ ಖಾನ್ ಹೇಳಿದ್ದಾರೆ.

"ಪತ್ರಿ ಸಾಯಿಬಾಬಾದ 'ಜನ್ಮಭೂಮಿ' ಆಗಿದ್ದರೆ, ಶಿರಡಿ ಅವರ 'ಕರ್ಮಭೂಮಿ.' ಎರಡೂ ಸ್ಥಳಗಳಿಗೆ ಅವರ ಎಲ್ಲ ಭಕ್ತರು ಸಮಾನ ಪ್ರಾಮುಖ್ಯತೆ ಕೊಡುತ್ತಾರೆ ”ಎಂದು ಖಾನ್ ಹೇಳಿದರು. ಶಿರಡಿಯ ಜನರಿಗೆ ಸರ್ಕಾರವು ನೀಡುವ ನಿಧಿಯ ಬಗ್ಗೆ ಕಾಳಜಿಯಿಲ್ಲ, ಆದರೆ ಪತ್ರಿ ಸಾಯಿಬಾಬಾ ಅವರ ಜನ್ಮಸ್ಥಳ ಎಂದು ಉಲ್ಲೇಖಿಸುವುದನ್ನು ಮಾತ್ರ ಆಕ್ಷೇಪಿಸುತ್ತಾರೆ ಎಂದು ಅವರು ಹೇಳಿದರು. "ಕೆಲವು ಸ್ಥಳೀಯರು ಪತ್ರಿ  ಜನಪ್ರಿಯವಾದರೆ ಅಭಿವೃದ್ಧಿ ಹೊಂದಿದರೆ, ಶಿರಡಿಗೆ ಭಕ್ತರ ಹರಿವು ಕಡಿಮೆಯಾಗಬಹುದು ಸ್ಥಳೀಯ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು ಎಂದು ಅನುಮಾನಗೊಂಡಿದ್ದಾರೆ"ಖಾನ್ ವಿವರಿಸಿದ್ದಾರೆ.

ಪತ್ರಿ ಗ್ರಾಮದಲ್ಲಿ 'ಶ್ರೀ ಸಾಯಿ ಜನ್ಮಸ್ಥಾನ್ ದೇವಸ್ಥಾನ' ಕೂಡ ಇದ್ದು ಅದು ಹೆಚ್ಚಿನ ಸಂಖ್ಯೆಯ ಭಕ್ತರನ್ನು ಆಕರ್ಷಿಸಿದೆ. ಮುಖ್ಯಮಂತ್ರಿ ಠಾಕ್ರೆ ಈ ವಾರ ಅಲ್ಲಿಗೆ ಭೇಟಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com