ಮಹಿಳಾ ಪೇದೆ ಬಟ್ಟೆ ಬದಲಿಸುವ ದೃಶ್ಯ ಚಿತ್ರೀಕರಣ; ಸುದ್ದಿವಾಹಿನಿಗಳ 3 ಕ್ಯಾಮೆರಾಮನ್‌ಗಳ ವಿರುದ್ಧ ಕೇಸ್!

ಮಹಿಳಾ ಪೊಲೀಸ್ ಪೇದೆಯೊಬ್ಬರು ರೂಂನಲ್ಲಿ ಬಟ್ಟೆ ಬದಲಿಸುತ್ತಿದ್ದ ದೃಶ್ಯಗಳನ್ನು ಚಿತ್ರೀಕರಿಸಿದ್ದ ಆರೋಪದ ಮೇಲೆ ವಿವಿಧ ಸುದ್ದಿ ವಾಹಿನಿಗಳ ಮೂವರು ಕ್ಯಾಮೆರಾಮನ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಮರಾವತಿ: ಮಹಿಳಾ ಪೊಲೀಸ್ ಪೇದೆಯೊಬ್ಬರು ರೂಂನಲ್ಲಿ ಬಟ್ಟೆ ಬದಲಿಸುತ್ತಿದ್ದ ದೃಶ್ಯಗಳನ್ನು ಚಿತ್ರೀಕರಿಸಿದ್ದ ಆರೋಪದ ಮೇಲೆ ವಿವಿಧ ಸುದ್ದಿ ವಾಹಿನಿಗಳ ಮೂವರು ಕ್ಯಾಮೆರಾಮನ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಅಸೆಂಬ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೇದೆ ಕೋಣೆಯಲ್ಲಿ ಬಟ್ಟೆ ಬದಲಿಸುವಾಗ ವಿಡಿಯೋ ಮಾಡಿದ್ದಾರೆ ಎಂದು ತಮ್ಮ ಮೇಲಾಧಿಕಾರಿಗೆ ದೂರು ನೀಡಿದ್ದರು. ಈ ದೂರಿನನ್ವಯ ನಿರ್ಭಯಾ ಕಾಯ್ದೆ ಅನ್ವಯ ಐಪಿಸಿ ಸೆಕ್ಷನ್ 345ಸಿ ಅಡಿಯಲ್ಲಿ ಕ್ಯಾಮೆರಾಮನ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನು ತೆನಾಲಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೀಲಕ್ಷ್ಮಿ ಅವರು ಈ ಪ್ರಕರಣದ ತನಿಖೆಯನ್ನು ನಡೆಸಲಿದ್ದಾರೆ. 

ಅಸೆಂಬ್ಲಿ ಕರ್ತವ್ಯದ ಮೇಲೆ ನಾನು ಒಂಗೋಲ್ ನಿಂದ ಬಂದಿದ್ದೆ. ನನ್ನ ಆರೋಗ್ಯ ಸರಿ ಇಲ್ಲದ ಕಾರಣ ನಾನು ರೂಂಮಿಗೆ ಬಂದೆ. ಆಗ ನಾನು ಬಟ್ಟೆಯನ್ನು ಬದಲಿಸುವಾಗ ಕಿಟಕಿಯಲ್ಲಿ ಕ್ಯಾಮೆರಾ ಇರುವುದನ್ನು ಕಂಡು ಗಾಬರಿಯಾಯಿತು. ಕೆಲ ನಿಮಿಷದಲ್ಲೇ ಕೆಲವರು ಬಂದು ನನ್ನು ಬಳಿ ಕ್ಷಮೆ ಕೇಳಿದರು. ಕೂಡಲೇ ನಾನು ನನ್ನ ಮೇಲಾಧಿಕಾರಿಗಳಿಗೆ ದೂರು ನೀಡಿದೆ ಎಂದು ಮಹಿಳಾ ಪೇದೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com