ಕೆನಡಾದ ಟೊರೆಂಟೋದಲ್ಲಿ ತಮಿಳುನಾಡು ವಿದ್ಯಾರ್ಥಿಗೆ ಚಾಕು ಇರಿತ: ಆಘಾತ ವ್ಯಕ್ತಪಡಿಸಿದ ಎಂಇಎ

 ಕೆನಡಾದ ಟೊರೆಂಟೋದಲ್ಲಿ ತಮಿಳುನಾಡಿನ ರಾಚೆಲ್ ಅಲ್ಬರ್ಟ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿತಕ್ಕೊಳಗಾಗಿದ್ದು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್  ಆಘಾತ ವ್ಯಕ್ತಪಡಿಸಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್
ವಿದೇಶಾಂಗ ಸಚಿವ ಎಸ್. ಜೈಶಂಕರ್

ನವ ದೆಹಲಿ:  ಕೆನಡಾದ ಟೊರೆಂಟೋದಲ್ಲಿ ತಮಿಳುನಾಡಿನ ರಾಚೆಲ್ ಅಲ್ಬರ್ಟ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿತಕ್ಕೊಳಗಾಗಿದ್ದು, ವಿದೇಶಾಂಗ ಸಚಿವ ಎಸ್. ಜೈ ಶಂಕರ್  ಆಘಾತ ವ್ಯಕ್ತಪಡಿಸಿದ್ದಾರೆ.

ಟೊರೆಂಟೋದಲ್ಲಿನ ಭಾರತೀಯ ವಿದ್ಯಾರ್ಥಿ ರಾಚೆಲ್ ಅಲ್ಬರ್ಟ್ ಮೇಲಿನ ದಾಳಿ ದಿಗ್ಬ್ರಮೆ ಮೂಡಿಸಿದೆ. ಆ ವಿದ್ಯಾರ್ಥಿಯ ಕುಟುಂಬಸ್ಥರಿಗೆ ಸಹಾಯ ಮಾಡಲು ವಿದೇಶಾಂಗ ವ್ಯವಹಾರಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕುಟುಂಬ ಸದಸ್ಯರು ಕೂಡಲೇ 919873983884 ಸಂಪರ್ಕಿಸುವಂತೆ ರಾಚೆಲ್ ಸಂಬಂಧಿ ಎಂದು ಪರಿಚಯಿಸಿಕೊಂಡಿರುವ ರೊನಾಲ್ಡ್ ಅವರಿಗೆ ಟ್ವೀಟ್ ಗೆ ಸಚಿವರು ಪ್ರತಿಕ್ರಿಯಿಸಿದ್ದಾರೆ.

ಇದಕ್ಕೂ ಮುನ್ನ , ತಮಿಳುನಾಡಿನಿಂದ ಕೆನಡಾಕ್ಕೆ ಹೋಗಿದ್ದ ನನ್ನ ಸಂಬಂಧಿ ರಾಚೆಲ್ ಚಾಕು ಇರಿತದಿಂದ ಆಸ್ಪತ್ರೆ ಸೇರಿದ್ದಾರೆ. ಆಕೆಯ ಕುಟುಂಬಸ್ಥರು ತಮಿಳುನಾಡಿನ ಕೂನೂರಿನಲ್ಲಿದ್ದು, ದಯವಿಟ್ಟು ಆಕೆಗೆ ಸಹಾಯ ಮಾಡಿ ಎಂದು ರೋನಾಲ್ಡ್ ಟ್ವೀಟ್ ಮಾಡಿದ್ದರು. 

ಈ ಘಟನೆ ಸಂಬಂಧ ಸ್ಥಳೀಯ ಮಾಧ್ಯಮಗಳ ವರದಿಯನ್ನು ಟ್ವೀಟ್ ನಲ್ಲಿ ಹಾಕಿ ಪೋನ್ ನಂಬರ್ ನ್ನು ರೋನಾಲ್ಡ್ ಉಲ್ಲೇಖಿಸಿದ್ದರು. 23 ವರ್ಷದ ರಾಚೆಲ್ ಬುಧವಾರ ರಾತ್ರಿ ಚಾಕು ಇರಿತಕ್ಕೊಳಗಾಗಿರುವ ಬಗ್ಗೆ ವರದಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com