ಯುರೋಪ್ ನ ಸಂಸತ್ ನಲ್ಲಿ ಸಿಎಎ ವಿರೋಧಿ ನಿರ್ಣಯದ  ಕುರಿತು ಚರ್ಚೆ: ಮತದಾನ

ಭಾರತದ ಸಂಸತ್ ನಲ್ಲಿ ಅಂಗೀಕಾರಗೊಂಡಿರುವ ಸಿಎಎ ಕಾಯ್ದೆಗೆ ವಿರುದ್ಧವಾಗಿ ಯುರೋಪ್ ನ ಸಂಸತ್ ಸದಸ್ಯರು ನಿರ್ಣಯ ಮಂಡಿಸಿದ್ದು, ಈ ಬಗ್ಗೆ ಮುಂದಿನ ವಾರ ಚರ್ಚೆ ನಡೆಯಲಿದೆ.
ಯುರೋಪ್ ನ ಸಂಸತ್ ನಲ್ಲಿ ಸಿಎಎ ವಿರೋಧಿ ನಿರ್ಣಯದ  ಕುರಿತು ಚರ್ಚೆ: ಮತದಾನ
ಯುರೋಪ್ ನ ಸಂಸತ್ ನಲ್ಲಿ ಸಿಎಎ ವಿರೋಧಿ ನಿರ್ಣಯದ  ಕುರಿತು ಚರ್ಚೆ: ಮತದಾನ

ಲಂಡನ್: ಭಾರತದ ಸಂಸತ್ ನಲ್ಲಿ ಅಂಗೀಕಾರಗೊಂಡಿರುವ ಸಿಎಎ ಕಾಯ್ದೆಗೆ ವಿರುದ್ಧವಾಗಿ ಯುರೋಪ್ ನ ಸಂಸತ್ ಸದಸ್ಯರು ನಿರ್ಣಯ ಮಂಡಿಸಿದ್ದು, ಈ ಬಗ್ಗೆ ಮುಂದಿನ ವಾರ ಚರ್ಚೆ ನಡೆಯಲಿದೆ.
 
ಸಿಎಎ ಕಾಯ್ದೆ ವಿರೋಧಿ ನಿರ್ಣಯ ಮಂಡಿಸಿರುವ ಯುರೋಪಿಯನ್ ಸಂಸತ್ ಸದಸ್ಯರು ಕಾಯ್ದೆಯನ್ನು ದೇಶದ ಪೌರತ್ವಕ್ಕೆ ಸಂಬಂಧಿಸಿದ ಅಪಾಯಕಾರಿ ಬದಲಾವಣೆ ಎಂದು ಹೇಳಿದ್ದರು. 

ಈ ಸಂಬಂಧ ಜ.29 ರಂದು ಯುರೋಪಿಯನ್ ಸಂಸತ್ ನಲ್ಲಿ ಚರ್ಚೆ ನಡೆಯಲಿದ್ದು, ಯುರೋಪಿಯನ್ ಯುನೈಟೆಡ್ ಲೆಫ್ಟ್/ ನಾರ್ಡಿಕ್ ಗ್ರೀನ್ ಲೆಫ್ಟ್ ಮಂಡಿಸುವ ನಿರ್ಣಯಕ್ಕೆ ಮತದಾನ ಪ್ರಕ್ರಿಯೆಯೂ ನಡೆಯಲಿದೆ. 

ಯುರೋಪಿಯನ್ ಸಂಸತ್ ನಲ್ಲಿ ಮಂಡನೆಯಾಗಿರುವ ನಿರ್ಣಯದಲ್ಲಿ ವಿಶ್ವಸಂಸ್ಥೆಯ ಆರ್ಟಿಕಲ್ 15 ರ ಪ್ರಕಾರ ಮಾನವಹಕ್ಕುಗಳನ್ನು ಸಾರ್ವತ್ರಿಕ ಘೋಷಣೆಯಾಗಿಸಿರುವುದು ಹಾಗೂ 2005 ರಲ್ಲಿ ಭಾರತ-ಇಯು ಕಾರ್ಯತಂತ್ರ ಪಾಲುದಾರಿಕೆಗಾಗಿ ಜಂಟಿ ಕ್ರಿಯಾ ಯೋಜನೆಗೆ ಸಹಿ ಹಾಕಿರುವುದನ್ನು ಉಲ್ಲೇಖಿಸಲಾಗಿದ್ದು, ಪ್ರತಿಭಟನಾ ನಿರತರೊಂದಿಗೆ ಭಾರತದ ಅಧಿಕಾರಿಗಳು ರಚನಾತ್ಮಕವಾಗಿ ಮಾತುಕತೆ ನಡೆಸಬೇಕು ಹಾಗೂ ತಾರತಮ್ಯ   ಉಂಟುಮಾಡುವ ಸಿಎಎಗೆ ಸಂಬಂಧಿಸಿದಂತೆ ಅವರ ಬೇಡಿಕೆಗಳನ್ನು ಪರಿಗಣಿಸಬೇಕೆಂದು ಸಲಹೆ ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com