ತಾಜ್ ಮಹಲ್, ಕೆಂಪುಕೋಟೆ ಸೇರಿದಂತೆ ಎಲ್ಲಾ ಪಾರಂಪರಿಕ ಸ್ಮಾರಕಗಳು ಜುಲೈ 6ರಿಂದ ಪ್ರವಾಸಿಗರಿಗೆ ಮುಕ್ತ

ಎಎಸ್‌ಐ ಸಂರಕ್ಷಿತ ಸ್ಮಾರಕಗಳನ್ನು ಜುಲೈ 6 ರಿಂದ ಸಾರ್ವಜನಿಕರಿಗೆ ಮತ್ತೆ ತೆರೆಯಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ಗುರುವಾರ ತಿಳಿಸಿದ್ದಾರೆ.
ತಾಜ್ ಮಹಲ್
ತಾಜ್ ಮಹಲ್

ನವದೆಹಲಿ: ಎಎಸ್‌ಐ ಸಂರಕ್ಷಿತ ಸ್ಮಾರಕಗಳನ್ನು ಜುಲೈ 6 ರಿಂದ ಸಾರ್ವಜನಿಕರಿಗೆ ಮತ್ತೆ ತೆರೆಯಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ಗುರುವಾರ ತಿಳಿಸಿದ್ದಾರೆ.

ಧಾರ್ಮಿಕ ಸಭೆಗಳು ನಡೆಯುವ  3,000 ಎಎಸ್‌ಐ ನಿರ್ವಹಿಸುವ ಸ್ಮಾರಕಗಳಲ್ಲಿ  820 ಸ್ಮಾರಕಗಳನ್ನು ಸಂಸ್ಕೃತಿ ಸಚಿವಾಲಯವು ಜೂನ್‌ನಲ್ಲಿ ಪುನಃ ತೆರೆದಿತ್ತು.

ಕೊರೋನಾವೈರಸ್ ಬಿಕ್ಕಟ್ಟಿನ ಹಿನ್ನೆಲೆ ಎಎಸ್ಐ ನಿರ್ವಹಿಸುತ್ತಿರುವ 3,691 ಕೇಂದ್ರ-ಸಂರಕ್ಷಿತ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳನ್ನು ಮಾರ್ಚ್ 17 ರಿಂದ ಮುಚ್ಚಲಾಗಿತ್ತು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಎಲ್ಲಾ ಕೊರೋನಾ ಸಂಬಂಧಿತ ಪ್ರೋಟೋಕಾಲ್‌ಗಳನ್ನು ಸ್ಮಾರಕ ಅಧಿಕಾರಿಗಳು ಅನುಸರಿಸಲಿದ್ದಾರೆ ಎಂದು ಸಚಿವರು ಹೇಳಿದರು

ಮೂಲಗಳ ಪ್ರಕಾರ, ಸಂದರ್ಶಕರಿಗೆ ಅಂತಹ ತಾಣಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯವಾಗಿರಲಿದೆ. .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com