ಮನೆ ಬಾಗಿಲಿಗೆ ಕೋವಿಡ್ ಯೇತರ ಆರೋಗ್ಯ ಸೇವೆ: ಗುಜರಾತ್ ಯೋಜನೆಯನ್ನು ಶ್ಲಾಘಿಸಿದ ಕೇಂದ್ರ ಸರ್ಕಾರ!

ಧನ್ವಂತರಿ ರಥ ವಾಹನ
ಧನ್ವಂತರಿ ರಥ ವಾಹನ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ತೀವ್ರ ರೀತಿಯ ಹೊಡೆತಕ್ಕೆ ಸಿಲುಕಿರುವ ರಾಜ್ಯಗಳಲ್ಲಿ ಒಂದಾದ
ಅಹಮಾದಾಬಾದಿನಲ್ಲಿ ಜಾರಿಯಾಗಿರುವ  ಕೊರೋನಾವೈರಸ್ ಪ್ರಕರಣಗಳ ಪತ್ತೆ ಹಾಗೂ ಅವಶ್ಯಕ ಕೋವಿಡ್ ಯೇತರ ಆರೋಗ್ಯ ಸೇವೆಯನ್ನು ಮನೆ ಬಾಗಿಲಿಗೆ ಒದಗಿಸುವ ಸರ್ಕಾರದ ಯೋಜನೆಯನ್ನು ಕೇಂದ್ರ ಸರ್ಕಾರ ಶನಿವಾರ ಶ್ಲಾಘಿಸಿದೆ.

ಜನರಲ್ಲಿ ಇನ್ ಫ್ಲುಯೆಂಜಾದಂತಹ ಕಾಯಿಲೆ ಪತ್ತೆ ಹಾಗೂ ಅವಶ್ಯಕ ಆರೋಗ್ಯ ಸೇವೆಯನ್ನು ಜನರಿಗೆ ಒದಗಿಸುವ ನಿಟ್ಟಿನಲ್ಲಿ 'ಧನ್ವಂತರಿ ರಥ' ಎಂದು ಕರೆಯಲಾಗುವ ಸಂಚಾರಿ ವಾಹನವನ್ನು ಅಹಮದಾದ್ ಮುನ್ಸಿಪಲ್ ಕಾರ್ಪೋರೇಷನ್ ಆರಂಭಿಸಿದೆ ಎದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ನಗರದಲ್ಲಿನ ಅನೇಕ ದೊಡ್ಡ ಆಸ್ಪತ್ರೆಗಳು ಕೋವಿಡ್-19 ಚಿಕಿತ್ಸೆ ನೀಡುತ್ತಿವೆ. ಆದಾಗ್ಯೂ, ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿತ ರೋರಗಳಿಗೆ ಕೋವಿಡ್ ಯೇತರ ಅವಶ್ಯಕ ಸೇವೆ ಒದಗಿಸಲು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂಚಾರಿ ವಾಹನದಲ್ಲಿ ಆಯುಷ್ ಡಾಕ್ಟರ್, ಅರೆವೈದ್ಯಕೀಯ ಸಿಬ್ಬಂದಿ ನರ್ಸ್ ಗಳನ್ನು ನಿಯೋಜಿಸಲಾಗಿರುತ್ತದೆ.  ಇದು ಇಡೀ ನಗರದಾದ್ಯಂತ ಸಂಚರಿಸಿ ಕೋವಿಡ್ ಯೇತರ ರೋಗಿಗಳಿಗೆ ಓಪಿಡಿ ಸೇವೆಯನ್ನು ನೀಡಲಿದೆ ಎಂದು ಮಾಹಿತಿ ನೀಡಿದೆ.

ಆಯುರ್ವೇದಿಕ್ ಮತ್ತು ಹೋಮಿಯೋಪಥಿ ಔಷಧ ಸೇರಿದಂತೆ ಎಲ್ಲಾ ರೀತಿಯ ಅವಶ್ಯಕ ಔಷಧಗಳು ಸಂಚಾರಿ ವಾಹನದಲ್ಲಿ ಇರುತ್ತದೆ. ಪಲ್ಸ್ ಆಕ್ಸಿಮೀಟರ್ಸ್ ಜೊತೆಗೆ ಮೂಲ ಪರೀಕ್ಷಾ ಸಾಧನಗಳು ಸಂಚಾರಿ ವಾಹನದಲ್ಲಿರುತ್ತದೆ. ಮುಂದಿನ ಕ್ಲಿನಿಕ್ ಚಿಕಿತ್ಸೆ ಅಥವಾ ಒಳರೋಗಿಯಾಗಿ ದಾಖಲಾಗಬೇಕಾದವರನ್ನು ಕಂಡುಹಿಡಿಯುವಲ್ಲಿ ಧನ್ವಂತರಿ ರಥ ನೆರವಾಗಲಿದೆ. ಅಹಮದಾಬಾದ್
ನಗರದಾದ್ಯಂತ ಇದೇ ರೀತಿಯ 120 ವಾಹನಗಳನ್ನು ನಿಯೋಜಿಸಲಾಗಿದ್ದು, ಈವರೆಗೂ 4.27 ಲಕ್ಷ ಓಪಿಡಿ ಸಮಾಲೋಚನಾ ಕಾರ್ಯವನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ. 

ಜ್ವರದಿಂದ ಬಳಲುತ್ತಿದ್ದ ಸುಮಾರು 20,143 ರೋಗಿಗಳು ಮತ್ತು ಕೆಮ್ಮು, ಶೀತದಿಂದ ನರಳುತ್ತಿದ್ದ ಸುಮಾರು  74, 0048 ಜನರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದ್ದು,  ತೀವ್ರ ಉಸಿರಾಟದಿಂದ ನರಳುತ್ತಿದ್ದ ಸುಮಾರು 462 ರೋಗಿಗಳ ಚಿಕಿತ್ಸೆಗಾಗಿ ನಗರದ ಆರೋಗ್ಯ ಕೇಂದ್ರ ಹಾಗೂ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗಿದೆ.ಮಧು ಮೇಹ, ಅಧಿಕ ರಕ್ತದೊತ್ತಡ ಮತ್ತಿತರ ಸಮಸ್ಯೆಗಳಿಂದ ನರಳುತ್ತಿದ್ದ 862 ರೋಗಿಗಳಿಗೆ ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯದ ಕೇಂದ್ರ , ಸಮುದಾಯ ಆರೋಗ್ಯ ಕೇಂದ್ರ ಮತ್ತಿತರ ಆಸ್ಪತ್ರೆಗಳಿಗೆ ಈ ಸಂಚಾರಿ ವಾಹನ ಶಿಫಾರಸು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com