ಲೇಹ್ ಗೆ ಪ್ರಧಾನಿ ಭೇಟಿ: ವೈದ್ಯಕೀಯ ಸೌಲಭ್ಯ ಕುರಿತ ಟೀಕೆಗೆ ಭಾರತೀಯ ಸೇನೆ ತಿರುಗೇಟು

ಪ್ರಧಾನಿ ನರೇಂದ್ರಮೋದಿ ಒಂದು ದಿನದ ಹಿಂದೆ ಭೇಟಿ ನೀಡಿದ್ದ ಲೇಹ್‍ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳ ಕುರಿತ ಟೀಕೆಗಳು ದುರದೃಷ್ಟಕರ ಎಂದು ಭಾರತೀಯ ಸೇನೆ ಪ್ರತಿಕ್ರಿಯಿಸಿದೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರಮೋದಿ ಒಂದು ದಿನದ ಹಿಂದೆ ಭೇಟಿ ನೀಡಿದ್ದ ಲೇಹ್‍ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳ ಕುರಿತ ಟೀಕೆಗಳು ದುರದೃಷ್ಟಕರ ಎಂದು ಭಾರತೀಯ ಸೇನೆ ಪ್ರತಿಕ್ರಿಯಿಸಿದೆ. 

ಸಶಸ್ತ್ರ ಪಡೆಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಛಾಯಾಚಿತ್ರಗಳಲ್ಲಿ ತೋರಿಸಿರುವ ಸಭಾಂಗಣವನ್ನು ಕೋವಿಡ್ ವಾರ್ಡ್ ಆಗಿ ಪರಿವರ್ತಿಸಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ. 

ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಲೇಹ್ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಸೌಲಭ್ಯಗಳ ಬಗ್ಗೆ ಕೆಲ ವಲಯಗಳಲ್ಲಿ ದುರುದ್ದೇಶಪೂರಿತ ಮತ್ತು ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಧಾನಿ ಮೋದಿ ಶುಕ್ರವಾರ ಲಡಾಖ್‌ಗೆ ಭೇಟಿ ನೀಡಿ ಗಡಿ ಪ್ರದೇಶದಲ್ಲಿ ನಿಯೋಜನೆಗೊಂಡ ಭಾರತೀಯ ಸೇನೆ, ವಾಯುಪಡೆ ಮತ್ತು ಐಟಿಬಿಪಿ ಪಡೆಗಳೊಂದಿಗೆ ಸಿಬ್ಬಂದಿಯೊಂದಿಗೆ ಮಾತನಾಡಿದ್ದಾರೆ. ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೇನೆಯೊಂದಿಗೆ ಹೋರಾಡಿ ಗಾಯಗೊಂಡ ಸೈನಿಕರ ಆರೋಗ್ಯವನ್ನು ವಿಚಾರಿಸಿದ್ದಾರೆ. 

ಲೇಹ್‌ನ ಸೇನಾ ಆಸ್ಪತ್ರೆಯಲ್ಲಿ ಸೈನಿಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಭಾರತದ ಧೈರ್ಯಶಾಲಿ ಸೈನಿಕರು ‘ಅಂತಹ ಶಕ್ತಿ’ಗಳ ಮುಂದೆ ಶೌರ್ಯವನ್ನು ತೋರಿಸಿದ್ದಾರೆ ಎಂದು ಜಗತ್ತು ಚರ್ಚಿಸುತ್ತಿದೆ ಎಂದು ಹೇಳಿದ್ದರು. 

ಪ್ರಧಾನಿ ಮೋದಿ ಲೇಹ್ ವೈದ್ಯಕೀಯ ಸೌಲಭ್ಯಕ್ಕೆ ಭೇಟಿ ನೀಡಿದ ಛಾಯಾಚಿತ್ರಗಳು ಹೊರಬರುತ್ತಿದ್ದಂತೆ, ಅನೇಕರು ಟ್ವಿಟರ್‍ ನಲ್ಲಿ ಪೋಸ್ಟ್ ಮಾಡಿ, ಫೋಟೋಗಳಲ್ಲಿ ಕಾಣಿಸುತ್ತಿರುವ ಲೇಹ್ ಸೌಲಭ್ಯವು ಆಸ್ಪತ್ರೆಯಾಗಿದೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಫೋಟೋಗಳಲ್ಲಿ ತೋರಿಸಿರುವ ವೈದ್ಯಕೀಯ ಸೌಲಭ್ಯವು ಸಭಾಂಗಣವೇ ಹೊರತು ಆಸ್ಪತ್ರೆಯಲ್ಲ ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಂತೆ, ಲೇಹ್ ಆಸ್ಪತ್ರೆಯು ಗೊತ್ತುಪಡಿಸಿದ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿದ ನಂತರ ತರಬೇತಿ ಹಾಲ್‍ ಅನ್ನು ವಾರ್ಡ್‍ ಆಗಿ ಬದಲಾಯಿಸಲಾಗಿದೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. 

ಟೀಕಾಕಾರಿಗೆ ಭಾರತೀಯ ಸೇನೆ ಉತ್ತರಿಸಿ, ‘ನಮ್ಮ ಕೆಚ್ಚೆದೆಯ ಸಶಸ್ತ್ರ ಪಡೆಗಳನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ ಎಂದು ಅನುಮಾನಗಳನ್ನು ಹುಟ್ಟುಹಾಕುತ್ತಿರುವುದು ದುರದೃಷ್ಟಕರ. ಸಶಸ್ತ್ರ ಪಡೆಗಳು ತಮ್ಮ ಸಿಬ್ಬಂದಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆಯನ್ನು ನೀಡುತ್ತವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com