ಅಲಿಪುರ್‍ದೌರ್ ಟ್ರಾನ್ಸ್ಮಿಷನ್ ಕಂಪನಿ ಅದಾನಿ ಕಂಪನಿಗೆ 1,286 ಕೋಟಿ ರೂ. ಗಳಿಗೆ ಮಾರಾಟ!

ಅಲಿಪುರ್ದೌರ್ ಟ್ರಾನ್ಸ್ಮಿಷನ್ ಲಿಮಿಟೆಡ್ (ಎಟಿಎಲ್) ನ್ನು ಕಲ್ಪತರು ಪವರ್ ಟ್ರಾನ್ಸ್ಮಿಷನ್ ಲಿಮಿಟೆಡ್ ಅದಾನಿಗೆ 1,286 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವುದಾಗಿ ಹೇಳಿದೆ. 
ಅಲಿಪುರ್‍ದೌರ್ ಟ್ರಾನ್ಸ್ಮಿಷನ್ ಅದಾನಿ ಕಂಪನಿಗೆ 1,286 ಕೋಟಿ ರೂಗಳಿಗೆ ಮಾರಾಟ!
ಅಲಿಪುರ್‍ದೌರ್ ಟ್ರಾನ್ಸ್ಮಿಷನ್ ಅದಾನಿ ಕಂಪನಿಗೆ 1,286 ಕೋಟಿ ರೂಗಳಿಗೆ ಮಾರಾಟ!

ನವದೆಹಲಿ: ಅಲಿಪುರ್ದೌರ್ ಟ್ರಾನ್ಸ್ಮಿಷನ್ ಲಿಮಿಟೆಡ್ (ಎಟಿಎಲ್) ನ್ನು ಕಲ್ಪತರು ಪವರ್ ಟ್ರಾನ್ಸ್ಮಿಷನ್ ಲಿಮಿಟೆಡ್ (ಕೆಪಿಟೆಲ್) ಅದಾನಿ ಟ್ರಾನ್ಸ್ಮಿಷನ್ ಲಿಮಿಟೆಡ್ ಗೆ 1,286 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವುದಾಗಿ ಹೇಳಿದೆ. 

ಕೆಪಿಟಿಎಲ್ ನ ಅಂಗಸಂಸ್ಥೆಯಾಗಿರುವ ಎಟಿಎಲ್ ನ್ನು ಭೂತಾನ್ ನಿಂದ ಭಾರತಕ್ಕೆ ಹೈಡ್ರೋ ಎಲೆಕ್ಟ್ರಿಕ್ ಯೋಜನೆಗಳಿಂದ ವಿದ್ಯುತ್ ಪ್ರಸರಣಕ್ಕಾಗಿ ಸ್ಥಾಪಿಸಲಾಗಿತ್ತು.

325 ಕಿ.ಮೀ ನಷ್ಟಿರುವ 400 ಕೆ.ವಿ ಟ್ರಾನ್ಸ್ಮಿಷನ್ ಲೈನ ವಿನ್ಯಾಸ, ಹಣಕಾಸು ನಿರ್ವಹಣೆ, ನಿರ್ಮಾಣ, ಕಾರ್ಯನಿರ್ವಹಣೆ ಈ ಯೋಜನೆಯ ಭಾಗವಾಗಿತ್ತು. ಈ ಮಾರಾಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಟಿಎಲ್ ನ  ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮನೀಷ್ ಮೊಹ್ನೋತ್, 2019-20 ನೇ ಸಾಲಿನಲ್ಲಿ ಸಂಸ್ಥೆ ಸತ್ಪುರ ಟ್ರಾನ್ಸ್ಮಿಷನ್ ಅಸೆಟ್ ನ್ನು ಪೂರ್ಣಗೊಳಿಸಿ ಮಾರಾಟ ಮಾಡಿದೆ.

2020-21 ರಲ್ಲಿ ಟಿ&ಡಿ ಅಸೆಟ್ ಗಳನ್ನು ಪೂರ್ಣಗೊಳಿಸಿ ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ಮನೀಷ್ ಮಹ್ನೋತ್ ಹೇಳಿದ್ದು ಇದರಿಂದಾಗಿ ಜಾಗತಿಕ ಇಪಿಸಿ ಮಾರುಕಟ್ಟೆಯಲ್ಲಿ ಕೆಪಿಟಿಎಲ್ ನ ಬೆಳವಣಿಗೆ ಕಾರ್ಯತಂತ್ರಕ್ಕೆ ಮತ್ತಷ್ಟು ಬಲ ಬರಲಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com