ಕಾನ್ಪುರ್ ಶೆಲ್ಟರ್ ಹೋಮ್ ನ ಕೊರೋನಾ ಸೋಂಕಿತ ಬಾಲಕಿಯರ ಸ್ಥಿತಿಗತಿ ವರದಿ ನೀಡಿ: ಸುಪ್ರೀಂ ಕೋರ್ಟ್

ಕಾನ್ಪುರದ ಆಶ್ರಯ ಮನೆಯ 57 ಅಪ್ರಾಪ್ತ ಬಾಲಕಿಯರಿಗೆ ಕೋವಿಡ್ -19 ಗೆ ಪಾಸಿಟಿವ್ ದೃಢಪಟ್ಟಿದೆ  ಎಂಬ ಮಾಧ್ಯಮ ವರದಿಗಳಿಗೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಮಂಗಳವಾರ ಸೂಚಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಕಾನ್ಪುರದ ಆಶ್ರಯ ಮನೆಯ 57 ಅಪ್ರಾಪ್ತ ಬಾಲಕಿಯರಿಗೆ ಕೋವಿಡ್ -19 ಗೆ ಪಾಸಿಟಿವ್ ದೃಢಪಟ್ಟಿದೆ  ಎಂಬ ಮಾಧ್ಯಮ ವರದಿಗಳಿಗೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಮಂಗಳವಾರ ಸೂಚಿಸಿದೆ.

ಮಾಧ್ಯಮಗಳ ವರದಿ ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್, ಆಶ್ರಯ ಮನೆಗಳಲ್ಲಿರುವ ಅಪ್ರಾಪ್ತ ಬಾಲಕಿಯರ ಆರೋಗ್ಯದ ಬಗ್ಗೆ ವರದಿ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

ವಿಡಿಯೋ ಕಾನ್ಫೆರೆನ್ಸ್ ವಿಚಾರಣೆ ವೇಳೆ ಚೆನ್ನೈನ ರಾಯಪುರಂನಲ್ಲಿ ಸರ್ಕಾರದ ಆಶ್ರಯ ಮನೆಯೊಂದರ 35 ಕೊವಿಡ್ -19 ಪಾಸಿಟಿವ್ ಮಕ್ಕಳು ಈಗ ಚೇತರಿಸಿಕೊಂಡಿದ್ದಾರೆ ಮತ್ತು ಆಶ್ರಯ ಮನೆಗೆ ಮರಳಿದ್ದಾರೆ ಎಂದು ತಮಿಳುನಾಡಿನ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಸಪ್ರೀಂ ಕೋರ್ಟ್ ಮೆಚ್ಚುಗೆ ಸಹ ವ್ಯಕ್ತಪಡಿಸಿದೆ.  ಅಲ್ಲದೆ ಇತರೆ ರಾಜ್ಯಗಳು ಸಹ ಆಶ್ರಮ ಮನೆಗಳಲ್ಲಿರುವ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿದೆ.

ಇತ್ತೀಚಿಗಷ್ಟೇ ವಕೀಲೆ ಅಪರ್ಣಾ ಭಟ್ ಅವರು ಸಹ, ಕಾನ್ಪುರದ ಶೆಲ್ಟರ್ ಹೋಮ್ ನ 57 ಕೊರೋನಾ ಪಾಸಿಟಿವ್ ಬಾಲಕಿಯರ ವೈದ್ಯಕೀಯ ಚಿಕಿತ್ಸೆ ಮತ್ತು ಸೌಲಭ್ಯದ ಬಗ್ಗೆ ಮಾಹಿತಿ ಕೋರಿ ಸುಪ್ರೀಂ ಅರ್ಜಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com