ಐಸಿಎಸ್ಇ 10, 12ನೇ ತರಗತಿ ಫಲಿತಾಂಶ ಪ್ರಕಟ

ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಸಿಎಸ್ಇ) ಶುಕ್ರವಾರ 10 ಮತ್ತು 12 ನೇ ತರಗತಿ ಪರೀಕ್ಷೆಗಳಿಗೆ ಫಲಿತಾಂಶವನ್ನು ಪ್ರಕಟಿಸಿದೆ.
ಐಸಿಎಸ್ಇ 10, 12ನೇ ತರಗತಿ ಫಲಿತಾಂಶ ಪ್ರಕಟ

ನವದೆಹಲಿ: ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಸಿಎಸ್ಇ) ಶುಕ್ರವಾರ 10 ಮತ್ತು 12 ನೇ ತರಗತಿ ಪರೀಕ್ಷೆಗಳಿಗೆ ಫಲಿತಾಂಶವನ್ನು ಪ್ರಕಟಿಸಿದೆ.

ಕೊರೋನಾವೈರಸ್ ಸೋಂಕಿನ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಮಂಡಳಿಯು ತನ್ನ ಬಾಕಿ ಇರುವ ಪರೀಕ್ಷೆಗಳನ್ನು ರದ್ದುಗೊಳಿಸಿತ್ತು ಮತ್ತು ಫಲಿತಾಂಶವು  ಪರ್ಯಾಯ ಮೌಲ್ಯಮಾಪನ ಯೋಜನೆಯ ಆಧಾರದ ಮೇಲೆ ಹೊರಬಿದ್ದಿದೆ. 

ಈ ಸಾಲಿನಲ್ಲಿ ಒಟ್ಟು 2,06,525 ಅಭ್ಯರ್ಥಿಗಳು 10 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. 1,377 ಅಭ್ಯರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ಐಎಸ್ಸಿ) ಪರೀಕ್ಷೆ ಎಂದು ಕರೆಯಲ್ಪಡುವ 12 ನೇ ತರಗತಿ ಪರೀಕ್ಷೆಯಲ್ಲಿ  85,611 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ , 2,798 ವಿದ್ಯಾರ್ಥಿಗಳು ತೇರ್ಗಡೆಯಾಗಿಲ್ಲ.

"ಅಸಾಧಾರಣ ಸನ್ನಿವೇಶಗಳನ್ನು ಗಮನಿಸಿ ಈ ವರ್ಷ ಸಿಐಎಸ್ಸಿಇ ಐಸಿಎಸ್ಇ ಅಥವಾ ಐಎಸ್ಸಿ ವರ್ಷದ 2020 ಪರೀಕ್ಷೆಗಳಿಗೆ ಅರ್ಹತಾ ಪಟ್ಟಿಯನ್ನು ಪ್ರಕಟಿಸುವುದಿಲ್ಲ" ಎಂದು ಸಿಐಸಿಎಸ್ಇ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗ್ಯಾರಿ  ಅರಾಥೂನ್ ಹೇಳಿದ್ದಾರೆ. "ಈ ವರ್ಷಕೋವಿಡ್ -19 ಸಾಂಕ್ರಾಮಿಕ ಮತ್ತು ಅನೇಕ ರಾಜ್ಯಗಳಲ್ಲಿ  ಲಾಕ್‌ಡೌನ್‌ಗಳಿಂದಾಗಿ ಎಲ್ಲರಿಗೂ ಸಂಕಷ್ಟ ಎದುರಾಗಿದೆ, ಜೊತೆಗೆ ಇತರ ಅನೇಕ ಸಮಸ್ಯೆಗಳೂ ಇದೆ." ಎಂದು ಅವರು ಹೇಳಿದ್ದಾರೆ.

ಫಲಿತಾಂಶಗಳು ಆನ್‌ಲೈನ್ ನಲ್ಲಿ ಲಭ್ಯವಿದ್ದು cisce.org  ಮತ್ತು results.cisce.org ನಲ್ಲಿ ಲಭ್ಯವಿದೆ ಮತ್ತು ಕೌನ್ಸಿಲ್‌ನ 'CAREERS' ಪೋರ್ಟಲ್ ಮತ್ತು SMS ಮೂಲಕವೂ ಫಲಿತಾಂಶ ತಿಳ್ಲಿಯಲು ಸಾಧ್ಯವೆಂದು ಹೇಳಿದೆ.

ಯೋಜನೆಯ ಪ್ರಕಾರ, ಮಂಡಳಿಯ ಪರೀಕ್ಷೆಗಳನ್ನು ನಡೆಸಲಾದ ವಿಷಯಗಳಲ್ಲಿ ಪಡೆದ ಅತ್ಯುತ್ತಮಶೇಕಡಾವಾರು ಅಂಕಗಳ ಆಧಾರದ ಮೇಲೆ ಅಭ್ಯರ್ಥಿಯ  ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಅವರ ಆಂತರಿಕ ಮೌಲ್ಯಮಾಪನದ ಅಂಕಗಳು ಮತ್ತು ಯೋಜನಾ ಕಾರ್ಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆಂತರಿಕ ಮೌಲ್ಯಮಾಪನ ಸೂತ್ರವು 12 ನೇ ತರಗತಿಗೆ ಅನ್ವಯವಾಗಲಿದೆ, ಅದು ಭಾರತೀಯ ಶಾಲಾ ಪ್ರಮಾಣಪತ್ರ (ಐಎಸ್‌ಸಿ) ಪರೀಕ್ಷೆಯಾಗಿದ್ದು, 10 ನೇ ತರಗತಿಗೆ ಭಾರತೀಯ ಮಾಧ್ಯಮಿಕ ಶಿಕ್ಷಣ ಪ್ರಮಾಣಪತ್ರ (ಐಸಿಎಸ್‌ಇ), ಯೋಜನಾ ಕಾರ್ಯವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com