ಇಂದಿರಾ ಗಾಂಧಿ, ವಾಜಪೇಯಿಯಂಥ ಬಲಿಷ್ಠ ನಾಯಕರು ಕೂಡ ಚುನಾವಣೆಯಲ್ಲಿ ಸೋತಿದ್ದರು: ಶರದ್ ಪವಾರ್

ರಾಜಕಾರಣಿಗಳು ಮತದಾರರನ್ನು ಲಘುವಾಗಿ ಪರಿಗಣಿಸಬಾರದು, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿಯಂತಹ ಬಲಿಷ್ಠ ರಾಜಕೀಯ ನಾಯಕರು ಕೂಡ ಚುನಾವಣೆಯಲ್ಲಿ ಸೋತಿದ್ದರು ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಅಧ್ಯಕ್ಷ ಶರದ್ ಪವಾರ್ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಶರದ್ ಪವಾರ್
ಶರದ್ ಪವಾರ್

ಮುಂಬೈ: ರಾಜಕಾರಣಿಗಳು ಮತದಾರರನ್ನು ಲಘುವಾಗಿ ಪರಿಗಣಿಸಬಾರದು, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿಯಂತಹ ಬಲಿಷ್ಠ ರಾಜಕೀಯ ನಾಯಕರು ಕೂಡ ಚುನಾವಣೆಯಲ್ಲಿ ಸೋತಿದ್ದರು ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಅಧ್ಯಕ್ಷ ಶರದ್ ಪವಾರ್ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ನಾನು ಮತ್ತೆ ಅಧಿಕಾರಕ್ಕೆ ಬರುತ್ತೇನೆ ಎಂದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಳಸಿದ್ದ ಚುನಾವಣಾ ಘೋಷಣೆಯನ್ನು ಉಲ್ಲೇಖಿಸಿ ಮಾತನಾಡಿದ ಪವಾರ್, ಇದು ಅಹಂಕಾರದಿಂದ ಆಡುವ ಮಾತು ಎಂದು ಮತದಾರರಿಗೆ ಗೊತ್ತಾಗಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದರು ಎಂದರು.

ಪ್ರಜಾಪ್ರಭುತ್ವದಲ್ಲಿ ಶಾಶ್ವತವಾಗಿ ನೀವು ಅಧಿಕಾರದಲ್ಲಿರುತ್ತೀರಿ ಎಂದು ಭಾವಿಸಲು ಸಾಧ್ಯವಿಲ್ಲ. ಮತದಾರರನ್ನು ಲಘುವಾಗಿ ಪರಿಗಣಿಸಿದರೆ ಅವರು ತಕ್ಕ ಪಾಠವನ್ನು ಮುಂದಿನ ಚುನಾವಣೆಯಲ್ಲಿ ನಮಗೆ ಕಲಿಸುತ್ತಾರೆ. ಈ ದೇಶದ ರಾಜಕೀಯದಲ್ಲಿ ಶಕ್ತಿಶಾಲಿ ನಾಯಕರುಗಳಾಗಿದ್ದ ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿಯಂತವರು ಕೂಡ ಸೋಲು ಕಂಡಿದ್ದರು ಎಂದು ಶಿವಸೇನೆ ಮುಖವಾಣಿ ಸಾಮ್ನಾಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದರರ್ಥ, ಪ್ರಜಾಪ್ರಭುತ್ವ ಹಕ್ಕುಗಳ ವಿಷಯದಲ್ಲಿ ಸಾಮಾನ್ಯರು ರಾಜಕಾರಣಿಗಳಿಗಿಂತ ಬುದ್ಧಿವಂತರು. ನಾವು ರಾಜಕಾರಣಿಗಳು ಗಡಿ ದಾಟಿದರೆ, ಅವರು ನಮಗೆ ಪಾಠ ಕಲಿಸುತ್ತಾರೆ. ಆದ್ದರಿಂದ, ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ನಿಲುವನ್ನು ಜನರು ಇಷ್ಟಪಡುವುದಿಲ್ಲ ಎಂದು ದೇವೇಂದ್ರ ಫಡ್ನವೀಸ್ ಗೆ ಟಾಂಗ್ ಕೊಟ್ಟರು.

ಮಹಾರಾಷ್ಟ್ರ ಸರ್ಕಾರದ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮಧ್ಯೆ ಭಿನ್ನಾಭಿಪ್ರಾಯವಿದೆ ಎಂಬ ಮಾಧ್ಯಮಗಳ ವರದಿಯಲ್ಲಿ ಸತ್ಯಾಂಶವಿಲ್ಲ. ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾ ವಿಕಾಸ ಅಘಾಡಿ ಚೆನ್ನಾಗಿ ಮುಂದುವರಿಯಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com