'ರೇವಾ ಏಷ್ಯಾದ ಮೆಗಾ ಪ್ರಾಜೆಕ್ಟ್' ಹೇಗಾದೀತು? ಪ್ರಧಾನಿಗೆ ರಾಹುಲ್ ಗಾಂಧಿ ಪ್ರಶ್ನೆ

ಮಧ್ಯಪ್ರದೇಶದಲ್ಲಿ 750 ಮೆಗಾವ್ಯಾಟ್ ರೇವಾ ಅಲ್ಟ್ರಾ ಮೆಗಾ ಸೌರ ವಿದ್ಯುತ್ ಯೋಜನೆ ಏಷ್ಯಾದ ಅತಿದೊಡ್ಡ ಯೋಜನೆ ಹೇಗಾದೀತು ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಮಧ್ಯಪ್ರದೇಶದಲ್ಲಿ 750 ಮೆಗಾವ್ಯಾಟ್ ರೇವಾ ಅಲ್ಟ್ರಾ ಮೆಗಾ ಸೌರ ವಿದ್ಯುತ್ ಯೋಜನೆ ಏಷ್ಯಾದ ಅತಿದೊಡ್ಡ ಯೋಜನೆ ಹೇಗಾದೀತು ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ರೇವಾ ವಿದ್ಯುತ್ ಯೋಜನೆಯನ್ನು ಏಷ್ಯಾದ ಅತಿದೊಡ್ಡ ವಿದ್ಯುತ್ ಯೋಜನೆ ಎಂದು ವಿವರಿಸುವ ಪ್ರಧಾನ ಮಂತ್ರಿಗಳ ಕಚೇರಿಯ ಟ್ವಿಟರ್ ಅನ್ನು ಟ್ಯಾಗ್ ಮಾಡಿರುವ ರಾಹುಲ್, “ಅಸತ್ಯಾಗ್ರಹಿ!” (ಅಸತ್ಯದ ಅಭ್ಯಾಸವಿರುವ ವ್ಯಕ್ತಿ) ಎಂದು ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರೇವಾ ಅಲ್ಟ್ರಾ ಮೆಗಾ ಸೌರಶಕ್ತಿ ಯೋಜನೆಯನ್ನು ದೇಶಕ್ಕೆ ಸಮರ್ಪಿಸಿದ್ದರು. ನಂತರ, ಪ್ರಧಾನ ಮಂತ್ರಿ ಕಚೇರಿಯ ಟ್ವಿಟ್ಟರ್ ನಲ್ಲಿ ''ಪ್ರಧಾನಿ ನರೆಂದ್ರ ಮೋದಿ ಅವರು ರೇವಾ ಅಲ್ಟ್ರಾ ಮೆಗಾ ಸೌರ ವಿದ್ಯುತ್ ಯೋಜನೆಯನ್ನು ರಾಷ್ಟ್ರಕ್ಕೆ ಅರ್ಪಿಸುತ್ತಿದ್ದಾರೆ(ಇಂದು ರೇವಾ ವಾಸ್ತವವಾಗಿ ಇತಿಹಾಸವನ್ನು ನಿರ್ಮಿಸಿದೆ. ರೇವಾವನ್ನು ಸಾಮಾನ್ಯವಾಗಿ ನರ್ಮದಾ ನದಿ ಮತ್ತು ಬಿಳಿ ಹುಲಿಯಿಂದ ಗುರುತಿಸಲಾಗುತ್ತದೆ. ಇದು ಈಗ ಏಷ್ಯಾದ ಅತಿದೊಡ್ಡ ಸೌರ ವಿದ್ಯುತ್ ಯೋಜನೆಯೊಂದಿಗೆ ಸಂಬಂಧಿಸಿದೆ). ''
ಎಂದು ಬರೆಯಲಾಗಿತ್ತು. 

ಪ್ರಧಾನಿ ಹೇಳಿಕೆಗೆ ಸಂಬಂಧಿಸಿ ಈ ಮೊದಲ ಕರ್ನಾಟಕದ ಕಾಂಗ್ರೆಸ್ ಮುಖ್ಯಸ್ಥ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ಹಕ್ಕಿನ ಬಗ್ಗೆ ಕೇಂದ್ರ ವಿದ್ಯುತ್ ಸಚಿವರಿಂದ ಸ್ಪಷ್ಟನೆ ಕೋರಿ, ಕರ್ನಾಟಕದ ತುಮಕೂರು ಜಿಲ್ಲೆಯ ಪಾವಗಡದಲ್ಲಿ ಈಗಾಗಲೇ 2,000 ಮೆಗಾವ್ಯಾಟ್ ಸೌರ ಸ್ಥಾವರ ಅಸ್ತಿತ್ವದಲ್ಲಿದೆ ಎಂದು ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆಯೇ ಆರಂಭವಾದ ಕರ್ನಾಟಕದ ಪಾವಗಡ ಅತಿದೊಡ್ಡ ಸೋಲಾರ್ ಪಾರ್ಕ್ ಆಗಿರುವಾಗ ರೇವಾ ಸೋಲಾರ್ ಪಾರ್ಕ್(750 ಮೆಗಾವ್ಯಾಟ್) ಇಂದು ಏಷ್ಯಾದ ಅತಿದೊಡ್ಡದು ಎಂದು ಕೇಂದ್ರ ಸರ್ಕಾರವು ಹೇಗೆ ಹೇಳಬಹುದು ಎಂಬುದಕ್ಕೆ ಕೇಂದ್ರ ವಿದ್ಯುತ್ ಸಚಿವರು ಉತ್ತರಿಸಬೇಕು! , '' ಎಂದು ಶಿವಕುಮಾರ್ ಟ್ವೀಟ್ ನಲ್ಲಿ ಸ್ಸ್ಪಷ್ಟನೆ ಬಯಸಿದ್ದರು. 

"2000 ಮೆಗಾವ್ಯಾಟ್ ಪಾವಗಡ ಮೆಗಾ ಸೋಲಾರ್ ಪಾರ್ಕ್ ನ ವಿಶಿಷ್ಟ ವಿಷಯವೆಂದರೆ ರೈತರಿಂದ ಒಂದು ಎಕರೆ ಭೂಮಿಯನ್ನು ಸಹ ಸ್ವಾಧೀನಪಡಿಸಿಕೊಂಡಿಲ್ಲ. ಎಲ್ಲಾ 13,000 ಎಕರೆಗಳನ್ನು ರೈತರಿಂದ ಗುತ್ತಿಗೆಗೆ ಪಡೆದು ವಾರ್ಷಿಕ ಬಾಡಿಗೆ ನೀಡಲಾಗುತ್ತಿದೆ. ನವೀಕರಿಸಬಹುದಾದ ಶಕ್ತಿಯ ಕರ್ನಾಟಕ ಮಾದರಿಯನ್ನು ಭಾರತದಲ್ಲಿ ಅತ್ಯುತ್ತಮವೆಂದು ಸ್ವೀಕರಿಸಲಾಗಿದೆ, ”ಎಂದು ಅವರು ಮತ್ತೊಂದು ಟ್ವಿಟರ್ ನಲ್ಲಿ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com