ಡ್ರಗ್ ದೊರೆಯನ್ನು ಬಂಧಮುಕ್ತಗೊಳಿಸಲು ಸಿಎಂ ಒತ್ತಡವಿತ್ತು: ಹೈಕೋರ್ಟ್ ಗೆ ಮಣಿಪುರ ಮಹಿಳಾ ಪೊಲೀಸ್ ಅಧಿಕಾರಿ ಮಾಹಿತಿ 

ಬಂಧನಕ್ಕೊಳಪಡಿಸಲಾಗಿದ್ದ ಡ್ರಗ್ ದೊರೆಯೊಬ್ಬನನ್ನು ಬಂಧಮುಕ್ತಗೊಳಿಸಲು ಸಿಎಂ ಹಾಗೂ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಒತ್ತಡವಿತ್ತು ಎಂದು ಮಣಿಪುರದ ಮಹಿಳಾ ಪೊಲೀಸ್ ಅಧಿಕಾರಿ ಥೌನೋಜಮ್ ಬೃಂದ ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. 
ಡ್ರಗ್ ದೊರೆಯನ್ನು ಬಂಧಮುಕ್ತಗೊಳಿಸಲು ಸಿಎಂ ಒತ್ತಡವಿತ್ತು: ಹೈಕೋರ್ಟ್ ಗೆ ಮಣಿಪುರ ಮಹಿಳಾ ಪೊಲೀಸ್ ಅಧಿಕಾರಿ ಮಾಹಿತಿ
ಡ್ರಗ್ ದೊರೆಯನ್ನು ಬಂಧಮುಕ್ತಗೊಳಿಸಲು ಸಿಎಂ ಒತ್ತಡವಿತ್ತು: ಹೈಕೋರ್ಟ್ ಗೆ ಮಣಿಪುರ ಮಹಿಳಾ ಪೊಲೀಸ್ ಅಧಿಕಾರಿ ಮಾಹಿತಿ

ಗುವಾಹಟಿ: ಬಂಧನಕ್ಕೊಳಪಡಿಸಲಾಗಿದ್ದ ಡ್ರಗ್ ದೊರೆಯೊಬ್ಬನನ್ನು ಬಂಧಮುಕ್ತಗೊಳಿಸಲು ಸಿಎಂ ಹಾಗೂ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಒತ್ತಡವಿತ್ತು ಎಂದು ಮಣಿಪುರದ ಮಹಿಳಾ ಪೊಲೀಸ್ ಅಧಿಕಾರಿ ಥೌನೋಜಮ್ ಬೃಂದ ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. 

ಹೈಕೋರ್ಟ್ ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಬೃಂದಾ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ವಾಯತ್ತ ಜಿಲ್ಲಾ ಮಂಡಳಿಯ ಮಾಜಿ ಅಧ್ಯಕ್ಷನಾಗಿದ್ದ ಡ್ರಗ್ಸ್ ದೊರೆ ಲುಂಖೋಸಿ ಝೌ ನ್ನು ಬಂಧಮುಕ್ತಗೊಳಿಸಲು ಹಾಗೂ ಆತನ ವಿರುದ್ಧ ದಾಖಲಿಸಲಾದ ಚಾರ್ಜ್ ಶೀಟ್ ನ್ನು ಹಿಂಪಡೆಯುವಂತೆ ಸ್ವತಃ ಮುಖ್ಯಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳು ಒತ್ತಡ ಹೇರಿದ್ದರು ಎಂದು ಹೇಳಿದ್ದಾರೆ.
ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಕೋರ್ಟ್  ಲುಂಖೋಸಿ ಝೌ ಗೆ ಜಾಮೀನು ನೀಡಿದ್ದನ್ನು ಬೃಂದಾ ಫೇಸ್ ಬುಕ್ ನಲ್ಲಿ ಟೀಕಿಸಿ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದರು.

2018 ರ ಜೂ.19 ರಂದು ಬೃಂದಾ ಅವರ ನೇತೃತ್ವದ ಎನ್ಎಬಿ ಅಧಿಕಾರಿಗಳು ಲುಂಖೋಸಿ ಝೌ ಹಾಗೂ ಇನ್ನಿತರ 7 ಬಂದಿಯನ್ನು, 4.595 ಕೆ.ಜಿ ಹೆರಾಯಿನ್ ಹಾಗೂ 2,80,200 ವರ್ಲ್ಡ್ ಈಸ್ ಯುವರ್ಸ್ ಎಂಬ ಟ್ಯಾಬ್ಲೆಟ್, 57.18 ಲಕ್ಷ ನಗದು, 95,000 ಹಳೆಯ ಕರೆನ್ಸಿ ನೋಟುಗಳ ಸಹಿತ ಬಂಧಿಸಿದ್ದರು. ಬಂಧನದ ಬೆನ್ನಲ್ಲೇ ಬಿಜೆಪಿಯ ಉಪಾಧ್ಯಕ್ಷ ಮೊಯಿರಾಂಗ್ಥೆಮ್ ಅಸ್ನಿಕುಮಾರ್ ಬೃಂದಾ ಅವರಿಗೆ ಕರೆ ಮಾಡಿ ಸಿಎಂ ಜೊತೆ ಮಾತನಾಡುವಂತೆ ಕರೆ ಕನೆಕ್ಟ್ ಮಾಡಿದ್ದರು, "ನಾವು ಎಡಿಸಿಯ ಸದಸ್ಯರೊಬ್ಬರ ಮನೆಯನ್ನು ಪ್ರಕರಣದ ಸಂಬಂಧ ಶೋಧ ನಡೆಸಬೇಕಿದೆ ಎಂದು ತಿಳಿಸಿದಾಗ ಮೆಚ್ಚುಗೆ ವ್ಯಕ್ತಪಡಿಸಿ, ಎಡಿಸಿ ಸದಸ್ಯರ ಮನೆಯಲ್ಲಿ ಡ್ರಗ್ಸ್ ಪತ್ತೆಯಾದರೆ ಆತನನ್ನು ಬಂಧಿಸುವಂತೆ ಸೂಚಿಸಿದ್ದರು".

ಅದರಂತೆಯೇ ನಡೆದ ಕಾರ್ಯಾಚರಣೆ ಪ್ರಗತಿಯಲ್ಲಿರುವಾಗಲೇ ಝೌ ಪ್ರಕರಣದ ಸಂಬಂಧ ರಾಜಿ ಮಾಡಿಕೊಳ್ಳುವಂತೆ ತಮಗೆ ಪದೇ ಪದೇ ಒತ್ತಡ ಹೇರುತ್ತಿದ್ದರು ಆದರೆ ತಾವು ನಿರಾಕರಿಸಿದ್ದಾಗಿ ಪೊಲೀಸ್ ಅಧಿಕಾರಿ ಬೃಂದಾ ತಿಳಿಸಿದ್ದಾರೆ.

ಕೊನೆಗೂ ಆ ಸದಸ್ಯರ ಮನೆಯಲ್ಲಿ ಡ್ರಗ್ಸ್ ಪತ್ತೆಯಾದಾಗ ಡಿಜಿಪಿ ಹಾಗೂ ಸಿಎಂ ಕರೆ ಮಾಡಲು ಅನುಮತಿ ಕೇಳಿದ ಆದರೆ ನಾನು ಒಪ್ಪಲಿಲ್ಲ, ಕೊನೆಗೆ ಮೊಯಿರಾಂಗ್ಥೆಮ್ ಅಸ್ನಿಕುಮಾರ್ ಮನೆಗೆ ಬಂದು ಬಂಧಿತ ಎಡಿಸಿ ಸದಸ್ಯ ಮುಖ್ಯಮಂತ್ರಿಗಳ ಪತ್ನಿಯ ಬಲಗೈ ಭಂಟ, ಆತನ ಬಂಧನದಿಂದ ಮುಖ್ಯಮಂತ್ರಿಗಳ ಪತ್ನಿ ಆಕ್ರೋಶಗೊಂಡ ಪರಿಣಾಮ, ಝೌ ಬದಲಿಗೆ ಆತನ ಪತ್ನಿ ಅಥವಾ ಪುತ್ರನನ್ನು ಬಂಧಿಸಿ ಆತನನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳೇ ಆದೇಶ ನೀಡಿದ್ದರು ಎಂದು ಬೃಂದಾ ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com