ಕೋವಿಡ್-19 ಹೊಸ ಕೇಸ್ ಪತ್ತೆ: ಶ್ರೀಹರಿಕೋಟಾ ಲಾಕ್ ಡೌನ್ 

ಹೊಸದಾಗಿ ಕೋವಿಡ್-19 ಕೇಸ್  ಪತ್ತೆಯಾಗಿರುವುದರಿಂದ ಅತ್ಯವಶ್ಯಕ, ಮತ್ತು ತುರ್ತು ಸೇವೆಯನ್ನು ಹೊರತುಪಡಿಸಿದಂತೆ
ಶ್ರೀ ಹರಿಕೋಟಾದ ಸತೀಶ್  ಧವನ್ ಬಾಹ್ಯಾಕಾಶ ಕೇಂದ್ರದ ಒಳಗಡೆ ಇರುವ  ಎಲ್ಲಾ ಕಚೇರಿಗಳನ್ನು ಬಂದ್ ಮಾಡಲಾಗಿದೆ.

Published: 20th July 2020 05:09 PM  |   Last Updated: 20th July 2020 05:21 PM   |  A+A-


Satish_Dhawan_Space_Centre1

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ

Posted By : Nagaraja AB
Source : The New Indian Express

ಚೆನ್ನೈ: ಹೊಸದಾಗಿ ಕೋವಿಡ್-19 ಕೇಸ್  ಪತ್ತೆಯಾಗಿರುವುದರಿಂದ ಅತ್ಯವಶ್ಯಕ, ಮತ್ತು ತುರ್ತು ಸೇವೆಯನ್ನು ಹೊರತುಪಡಿಸಿದಂತೆ
ಶ್ರೀ ಹರಿಕೋಟಾದ ಸತೀಶ್  ಧವನ್ ಬಾಹ್ಯಾಕಾಶ ಕೇಂದ್ರದ ಒಳಗಡೆ ಇರುವ  ಎಲ್ಲಾ ಕಚೇರಿಗಳನ್ನು ಬಂದ್ ಮಾಡಲಾಗಿದೆ.

ಘನ ಪ್ರೊಪೆಲ್ಲಂಟ್ ಸ್ಪೇಸ್ ಬೂಸ್ಟರ್ ಪ್ಲಾಂಟ್ ನ (ಎಸ್ ಪಿಆರ್ ಒಬಿ ) ಮತ್ತೊಬ್ಬ ಉದ್ಯೋಗಿ ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್ಎಫ್) ಹೊಂದಿಕೊಂಡಂತ ಭದ್ರತಾ ಸಿಬ್ಬಂದಿಯೊಬ್ಬರಿಗೆ ಸೋಮವಾರ ಪಾಸಿಟಿವ್ ಕಂಡುಬಂದಿದೆ. ಈ ಹಿಂದೆ ಶಾರ್ ಹೌಸಿಂಗ್ ಕಾಲೋನಿಯಿಂದ ಐದು ಕೇಸ್ ಗಳು ವರದಿಯಾಗಿದ್ದವು.

ಪ್ರಕರಣಗಳು ಹೆಚ್ಚಾಗುವುದು ಕಂಡುಬರುತ್ತಿದ್ದಂತೆ ಇಸ್ರೋ ಶ್ರೀಹರಿಕೋಟಾವನ್ನು ಲಾಕ್ ಡೌನ್ ಮಾಡಿದ್ದು, ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಾಗಿದೆ. ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಯೊಂದಿಗೆ ಸಮಾಲೋಚಿಸಿದ ಬಳಿಕ ಎಸ್ ಡಿಎಸ್ ಸಿ ಶಾರ್ ನಿರ್ದೇಶಕರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

ಏಪ್ರಿಲ್ ಕಳೆದ ವಾರದಿಂದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಶ್ರೀಹರಿಕೋಟಾದಲ್ಲಿರುವ ಕಾರ್ಮಿಕರಲ್ಲಿಯೂ ಸೋಂಕಿನ
ಭೀತಿ ಕಾಡುತ್ತಿದೆ. ಮುಂದಿನ ಆದೇಶದವರೆಗೂ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಅತ್ಯವಶ್ಯಕ ಸೇವೆ ವಿಭಾಗ ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಆದೇಶ ಹೊರಡಿಸಲಾಗಿದೆ.  ಅಗತ್ಯ  ಸೇವೆ ಹೊರತುಪಡಿಸದಂತೆ ಎಲ್ಲಾ ವಿಭಾಗದ ನೌಕರರು ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ ಎಂದು ಹಿರಿಯ ಆಡಳಿತಾಧಿಕಾರಿ ಎ. ಧನಲಕ್ಷ್ಮಮ್ಮ ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp