ರಾಜಸ್ಥಾನ ಬಿಕ್ಕಟ್ಟು ಪರಿಹಾರಕ್ಕೆ ಎಲ್ಲರೂ ಒಪ್ಪಿಕೊಳ್ಳುವಂತಹ ಸೂತ್ರ ರೂಪಿಸಿ: ಸಲ್ಮಾನ್ ಖುರ್ಷಿದ್ ಸಲಹೆ

ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಪರಿಹರಿಸಲು ಗೌರವಯುತವಾದ, ಎಲ್ಲರೂ ಒಪ್ಪಿಕೊಳ್ಳುವಂತಹ ಸೂತ್ರವೊಂದನ್ನು ರೂಪಿಸುವಂತೆ ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್ ಅವರು ಪಕ್ಷದ ಹೈಕಮಾಂಡ್ ಗೆ ಮಂಗಳವಾರ ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್
ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್

ಬೆಂಗಳೂರು: ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಪರಿಹರಿಸಲು ಗೌರವಯುತವಾದ, ಎಲ್ಲರೂ ಒಪ್ಪಿಕೊಳ್ಳುವಂತಹ ಸೂತ್ರವೊಂದನ್ನು ರೂಪಿಸುವಂತೆ ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್ ಅವರು ಪಕ್ಷದ ಹೈಕಮಾಂಡ್ ಗೆ ಮಂಗಳವಾರ ಸಲಹೆ ನೀಡಿದ್ದಾರೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯವೆದ್ದಿರುವ ಸಚಿನ್ ಪೈಲಟ್ ಅವರೊಂದಿಗೆ ಮಾತುಕತೆ ನಡೆಸಬೇಕು. ಪಕ್ಷದ ಮುಖಂಡನಾಗಿ ಮತ್ತು ನನ್ನ ಆತ್ಮೀಯ ಗೆಳೆಯ ದಿವಂಗತ ಕಾಂಗ್ರೆಸ್ ನಾಯಕ ರಾಜೇಶ್ ಪೈಲಟ್ ಅವರ ಪುತ್ರ ಸಚಿನ್ ಪೈಲಟ್ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅವರನ್ನು ಬಾಲ್ಯದಿಂದಲೂ ಗಮನಿಸಿದ್ದೇನೆ. ಆದರೆ ರಾಜಸ್ಥಾನದಲ್ಲಿನ ಸದ್ಯದ ಬೆಳವಣಿಗೆಗಳಿಂದ ನನಗೆ ತುಂಬಾ ದುಃಖವಾಗಿದೆ ಎಂದು ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ದೇಶದ ಯಾವುದೇ ರಾಜ್ಯದಿಂದ ಯಾರಾದರೂ ಒಬ್ಬರು ಸಚಿನ್ ಪೈಲಟ್ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಪ್ರಯತ್ನಿಸಬೇಕು. ಕಾಂಗ್ರೆಸ್ ಚದುರಿಹೋಗಬಾರದು ಮತ್ತು ಚದುರಬಾರದು ಎಂದು ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ವೈವಿಧ್ಯತೆ, ಮಹತ್ವಾಕಾಂಕ್ಷೆಗಳಿಗೆ ಅವಕಾಶ ನೀಡಲು ಯಾವುದೇ ನಾಯಕತ್ವಕ್ಕೂ ಒಂದು ಮೀತಿ ಇರುತ್ತದೆ. ಆದರೆ ಅದು ಎರಡು ಕಡೆಯಿಂದ ಆಗಬೇಕು. ಜನರು ನಮ್ಮನ್ನು ಪರಿಗಣಿಸಿದರೆ ನಾವು ಪಕ್ಷವನ್ನು ಒಟ್ಟಿಗೆ ಇರಿಸಲು ಪ್ರಯತ್ನಿಸಬೇಕು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com