ಬಾಳೆಹಣ್ಣಿನ ಗೊನೆಗಳ ನಡುವೆ ಸಾಗಿಸುತ್ತಿದ್ದ 20 ಲಕ್ಷ ರೂ. ಮೌಲ್ಯದ 108 ಕೆಜಿ ಗಾಂಜಾ ಪತ್ತೆ

ಜುಲೈ 21 ರ ಮಂಗಳವಾರ ಪಿಕ್ ಅಪ್ ಟ್ರಕ್‌ನಲ್ಲಿ ತುಂಬಿದ ಬಾಳೆಹಣ್ಣಿನ ಗೊನೆಗಳ ನಡುವೆ  ಅಡಗಿಸಿಟ್ಟಿದ್ದ ಒಂದು ಕ್ವಿಂಟಾಲ್ ಗಾಂಜಾವನ್ನು ಪತ್ತೆ ಹಚ್ಚುವಲ್ಲಿ ಕಾಸರಗೋಡು ಜಿಲ್ಲೆ ಮಂಜೇಶ್ವರ ಠಾಣೆ  ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.  ಆದರೆ ಆರೋಪಿಗಳು ಪೋಲೀಸರ ಕೈಗೆ ಸಿಕ್ಕದೆ ಪರಾರಿಯಾಗಿದ್ದಾರೆ.
ಗಾಂಜಾ
ಗಾಂಜಾ

ಕಾಸರಗೋಡು: ಜುಲೈ 21 ರ ಮಂಗಳವಾರ ಪಿಕ್ ಅಪ್ ಟ್ರಕ್‌ನಲ್ಲಿ ತುಂಬಿದ ಬಾಳೆಹಣ್ಣಿನ ಗೊನೆಗಳ ನಡುವೆ  ಅಡಗಿಸಿಟ್ಟಿದ್ದ ಒಂದು ಕ್ವಿಂಟಾಲ್ ಗಾಂಜಾವನ್ನು ಪತ್ತೆ ಹಚ್ಚುವಲ್ಲಿ ಕಾಸರಗೋಡು ಜಿಲ್ಲೆ ಮಂಜೇಶ್ವರ ಠಾಣೆ  ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.  ಆದರೆ ಆರೋಪಿಗಳು ಪೋಲೀಸರ ಕೈಗೆ ಸಿಕ್ಕದೆ ಪರಾರಿಯಾಗಿದ್ದಾರೆ.

ವಿಶ್ವಾಸಾರ್ಹ ಮೂಲಗಳಿಂದ ಬಂದ ಮಾಹಿತಿ ಆಧರಿಸಿ  ಪೊಲೀಸರು ಮಂಗಳವಾರ ಸಂಜೆ ಈ ಕಾರ್ಯಾಚರಣೆಯನ್ನು ನಡೆಸಿದ್ದು  ಪೊಲೀಸರು ಮಂಜೇಶ್ವರ ಕುಂಜತ್ತ್ರ್‍ ಪಡವಿನಲ್ಲಿ ವಾಹನಗಳನ್ನು ಪರಿಶೀಲಿಸುತ್ತಿದ್ದಾಗ, ಆ ಮಾರ್ಗದಲ್ಲಿ ಬಂದ ಪಿಕ್-ಅಪ್ ಟ್ರಕ್ ಒಂದರಲ್ಲಿ ಕ್ವಿಂಟಾಲ್ ತೂಕದ ಗಾಂಜಾ ಪತ್ತೆಯಾಗಿದೆ.

ಟ್ರಕ್ ಪೋಲೀಸರ ಪರಿಶೀಲನೆಗೆ ಸಿಕ್ಕದೆ ಮುಂದೆ ವೇಗವಾಗಿ ಚಲಿಸುವಾಗ ವಾಹನವನ್ನು ಬೆನ್ನಟ್ಟಿದ ಪೊಲೀಸರು ವಾಹನ ಅಡ್ಡಗಟ್ಟುವಲ್ಲಿ ಯಶಸ್ವಿಯಾದರು. ಆದರೆ ಪೊಲೀಸರ ಕಣ್ತಪ್ಪಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ವಾಹನವನ್ನು  ಕೂಲಂಕಷವಾಗಿ ಪರಿಶೀಲನೆ ನಡೆಸಿದ ಪೊಲೀಸರು 108 ಕೆಜಿ ಗಾಂಜಾವನ್ನು ಸ್ಯಾಚೆಟ್‌ಗಳಲ್ಲಿ ತುಂಬಿರುವುದನ್ನು ಕಂಡುಕೊಂಡರು. ಪೊಲೀಸರು ಈಗ ಆರೋಪಿಗಳ ಶೋಧದಲ್ಲಿ ತೊಡಗಿದ್ದು ಪ್ರಶ್ನಾರ್ಹ ವಾಹನವು ಕರ್ನಾಟಕ ನೋಂದಣಿ ಸಂಖ್ಯೆಯನ್ನು ಹೊಂದಿದೆ, ಮತ್ತು ಆ ಸಂಖ್ಯೆ ನಕಲಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಶಪಡಿಸಿಕೊಂಡ ಗಂಜಾದ ಮಾರುಕಟ್ಟೆ ಮೌಲ್ಯ ಅಂದಾಜು 20 ಲಕ್ಷ ರೂ. ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com