ಬಿಜೆಪಿ ಸೇರಿದ 24 ಗಂಟೆಗಳಲ್ಲೇ ರಾಜಕೀಯ ತೊರೆದ ಮಾಜಿ ಪುಟ್ಬಾಲ್ ಆಟಗಾರ!

ಭಾರತೀಯ ಜನತಾ ಪಕ್ಷ ಸೇರ್ಪಡೆಯಾದ 24 ಗಂಟೆಗಳಲ್ಲೇ ಭಾರತದ ಮಾಜಿ ಫುಟ್ ಬಾಲ್ ಆಟಗಾ ಮೆಹ್ತಾಬ್ ಹುಸೇನ್ ರಾಜಕೀಯ ತೊರೆದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಮೆಹ್ತಾಬ್ ಹುಸೇನ್
ಮೆಹ್ತಾಬ್ ಹುಸೇನ್

ಕೊಲ್ಕೋತಾ: ಭಾರತೀಯ ಜನತಾ ಪಕ್ಷ ಸೇರ್ಪಡೆಯಾದ 24 ಗಂಟೆಗಳಲ್ಲೇ ಭಾರತದ ಮಾಜಿ ಫುಟ್ ಬಾಲ್ ಆಟಗಾ ಮೆಹ್ತಾಬ್ ಹುಸೇನ್ ರಾಜಕೀಯ ತೊರೆದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಮಿಡ್ ಫೀಲ್ಡ್ ಜನರಲ್ ಎಂದೇ ಪ್ರಖ್ಯಾತವಾಗಿರುವ ಹುಸೇನ್ ತಾವು ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ, ಇದು ತಮ್ಮ ವಯಕ್ತಿಕ ನಿರ್ಧಾರವಾಗಿದೆ ಎಂದು ಹೇಳಿರುವ ಅವರು ತಾವು ಪಕ್ಷ ಸೇರಿದ ನಂತರ ತಮ್ಮ ಕುಟುಂಬಸ್ಥರು ಹಾಗೂ ಹಿತೈಷಿಗಳು ನೋವಿನಿಂದ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸಿದರು ಎಂದು ಹೇಳಿದ್ದಾರೆ.

ಮಂಗಳವಾರ ಮೆಹ್ತಾಬ್ ಹುಸೇನ್ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲಿಪ್ ಘೋಶ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದ್ದರು.

"ನಾನು ಇಂದಿನಿಂದ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ನನ್ನ ಈ ನಿರ್ಧಾರಕ್ಕಾಗಿ ನನ್ನ ಎಲ್ಲ ಹಿತೈಷಿಗಳಿಗೆ ಕ್ಷಮೆಯಾಚಿಸುತ್ತೇನೆ ಎಂದು ಹುಸೇನ್ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಈ ನಿರ್ಧಾರ ತೆಗೆದುಕೊಳ್ಳಲು ಯಾರೂ ನನ್ನ ಮೇಲೆ ಒತ್ತಡ ಹಾಕಿಲ್ಲ, ಇದು ನನ್ನ ವಯಕ್ತಿಕ ನಿರ್ಧಾರ ಎಂದು ಸ್ಪಷ್ಟ ಪಡಿಸಿದ್ದಾರೆ."
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com