ದೇಶದ ಆರ್ಥಿಕ ಪರಿವರ್ತನೆಯಲ್ಲಿ ಪಿ ವಿ ನರಸಿಂಹ ರಾವ್ ಪಾತ್ರ ಪ್ರಮುಖ: ಸೋನಿಯಾ, ರಾಹುಲ್

ದಿವಂಗತ ಪ್ರಧಾನಿ ಪಿ ವಿ ನರಸಿಂಹರಾವ್ ನಾಯಕತ್ವದೊಡನೆ, ದೇಶದ ಆರ್ಥಿಕ ಪರಿವರ್ತನೆಯಲ್ಲಿ ಕಾಂಗ್ರೆಸ್ ಸರ್ಕಾರ ಪ್ರಮುಖ ಪಾತ್ರ ವಹಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. 
ದೇಶದ ಆರ್ಥಿಕ ಪರಿವರ್ತನೆಯಲ್ಲಿ ಪಿ ವಿ ನರಸಿಂಹ ರಾವ್ ಪಾತ್ರ ಪ್ರಮುಖ: ಸೋನಿಯಾ, ರಾಹುಲ್
ದೇಶದ ಆರ್ಥಿಕ ಪರಿವರ್ತನೆಯಲ್ಲಿ ಪಿ ವಿ ನರಸಿಂಹ ರಾವ್ ಪಾತ್ರ ಪ್ರಮುಖ: ಸೋನಿಯಾ, ರಾಹುಲ್

ನವದೆಹಲಿ: ದಿವಂಗತ ಪ್ರಧಾನಿ ಪಿ ವಿ ನರಸಿಂಹರಾವ್ ನಾಯಕತ್ವದೊಡನೆ, ದೇಶದ ಆರ್ಥಿಕ ಪರಿವರ್ತನೆಯಲ್ಲಿ ಕಾಂಗ್ರೆಸ್ ಸರ್ಕಾರ ಪ್ರಮುಖ ಪಾತ್ರ ವಹಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. 

ದಿವಂಗತ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯು ವರ್ಷಪೂರ್ತಿ ಆಚರಣೆಯ ಉದ್ಘಾಟನೆಯ ವೇಳೆ ನೀಡಿದ ಸಂದೇಶದಲ್ಲಿ, ಪಿ.ವಿ. ನರಸಿಂಹರಾವ್ ಅವರ ದಿಟ್ಟ ನಾಯಕತ್ವದ ಮೂಲಕ ಅನೇಕ ಸವಾಲುಗಳನ್ನು ಯಶಸ್ವಿಯಾಗಿ ಜಯಿಸಲು ಸಾಧ್ಯವಾಯಿತು. 1991 ಜುಲೈ 24 ರ ಕೇಂದ್ರ ಬಜೆಟ್ ದೇಶದ ಆರ್ಥಿಕ ಪರಿವರ್ತನೆಗೆ ದಾರಿಮಾಡಿಕೊಟ್ಟಿತು ಎಂದು ಸೋನಿಯಾಗಾಂಧಿ ಹೇಳಿದ್ದಾರೆ.

ಪಿ ವಿ ನರಸಿಂಹ ರಾವ್ ಅವರ ವರ್ಷಪೂರ್ತಿ ಜನ್ಮ ಶತಮಾನೋತ್ಸವ ಆಚರಣೆಗೆ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ಅಭಿನಂದಿಸಿದ ಅವರು, 'ಪಿ ವಿ ನರಸಿಂಹ ರಾವ್ ಅವರು ಅತ್ಯಂತ ಗೌರವಾನ್ವಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯಕ್ತಿ. ಅವರ ಅನೇಕ ಸಾಧನೆಗಳು ಮತ್ತು ಕೊಡುಗೆಗಳಲ್ಲಿ ಕಾಂಗ್ರೆಸ್ ಪಕ್ಷ ಹೆಮ್ಮೆ ಪಡುತ್ತದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾತನಾಡಿ, ಪಿ.ವಿ.ನರಸಿಂಹ ರಾವ್ ಅವರು ತಮ್ಮ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಡಾ.ಮನಮೋಹನ್ ಸಿಂಗ್ ಅವರೊಡನೆ ಉದಾರೀಕರಣದ ಯುಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.

ದಿವಂಗತ ಪ್ರಧಾನಿ ಪಿ ವಿ ನರಸಿಂಹ ರಾವ್ ಅವರು ಆಧುನಿಕ ಭಾರತವನ್ನು ರೂಪಿಸುವಲ್ಲಿ ಅಗ್ರಗಣ್ಯ ವ್ಯಕ್ತಿಯೆಂದು ವಿವರಿಸಿದ ರಾಹುಲ್ ಗಾಂಧಿ, ತಮ್ಮ ಹದಿಹರೆಯದ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಪ್ರಧಾನಿಯಾಗುವವರೆಗಿನ ಅವರ ಗಮನಾರ್ಹ ರಾಜಕೀಯ ಪ್ರಯಾಣವು ಅವರ ಮನೋಭಾವ ಮತ್ತು ದೃಢತೆಯನ್ನು ಪ್ರತಿಬಿಂಬಿಸಿತು.

ಈ ಘಟನೆಯು ಭಾರತದ ಬೆಳವಣಿಗೆಯ ಕಥೆ ಮತ್ತು ಇದನ್ನು ಸಾಧ್ಯವಾಗಿಸಿದ ಗಮನಾರ್ಹ ವ್ಯಕ್ತಿಗಳ ಬಗ್ಗೆ ತಿಳಿಯಲು ನಮ್ಮ ಯುವಕರಲ್ಲಿ ಆಸಕ್ತಿಯನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com