ಆಂಧ್ರ ಪ್ರದೇಶ: ಬಡ ರೈತನಿಗೆ ಟ್ರ್ಯಾಕ್ಟರ್ ಗಿಫ್ಟ್ ನೀಡಿದ ನಟ ಸೋನು ಸೂದ್

ಎತ್ತುಗಳಿಲ್ಲದೇ ರೈತನೊಬ್ಬ ಮಕ್ಕಳನ್ನೆ ಎತ್ತುಗಳನ್ನಾಗಿಸಿಕೊಂಡು ಹೊಲದಲ್ಲಿ ಉಳುತ್ತಿದ್ದ ವಿಡಿಯೋ ವೈರಲ್ ಆಗಿತ್ತು, ಈ ವಿಡಿಯೋ ನೋಡಿದ್ದ ನಟ ಸೋನು ಸೂದ್ ತಾವು ನೀಡಿದ್ದ ಭರವಸೆಯಂತೆ ರೈತನಿಗೆ ಟ್ರ್ಯಾಕ್ಟರ್ ಗಿಫ್ಟ್ ನೀಡಿದ್ದಾರೆ
ಸೋನು ಸೂದ್ ನೀಡಿದ ಟ್ರ್ಯಾಕ್ಟರ್ ಜೊತೆ ರೈತನ ಕುಟುಂಬ
ಸೋನು ಸೂದ್ ನೀಡಿದ ಟ್ರ್ಯಾಕ್ಟರ್ ಜೊತೆ ರೈತನ ಕುಟುಂಬ

ಅಮರಾವತಿ: ಎತ್ತುಗಳಿಲ್ಲದೇ ರೈತನೊಬ್ಬ ಮಕ್ಕಳನ್ನೆ ಎತ್ತುಗಳನ್ನಾಗಿಸಿಕೊಂಡು ಹೊಲದಲ್ಲಿ ಉಳುತ್ತಿದ್ದ ವಿಡಿಯೋ ವೈರಲ್ ಆಗಿತ್ತು, ಈ ವಿಡಿಯೋ ನೋಡಿದ್ದ ನಟ ಸೋನು ಸೂದ್ ತಾವು ನೀಡಿದ್ದ ಭರವಸೆಯಂತೆ ರೈತನಿಗೆ ಟ್ರ್ಯಾಕ್ಟರ್ ಗಿಫ್ಟ್ ನೀಡಿದ್ದಾರೆ.

ಆಂಧ್ರ ಪ್ರದೇಶದ ಚಿತ್ತೂರ್ ಜಿಲ್ಲೆಯ ಮದನಪಲ್ಲಿಯ ರೈತರಿಗೆ ಟ್ರ್ಯಾಕ್ಟರ್ ಕಳಿಸಿಕೊಟ್ಟು ಮಾನವೀಯತೆ ತೋರಿದ್ಧಾರೆ.

ಹೆಣ್ಣು ಮಕ್ಕಳು ಎತ್ತುಗಳಾಗಿ ಭೂಮಿ ಉಳುತ್ತಿದ್ದ ವಿಡಿಯೋವನ್ನು ಪತ್ರಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. 

ವಿಡಿಯೋ ನೋಡಿದ ಸೋನು ಸೂದ್ ಮೊದಲು ಒಂದು ಜೊತೆ ಎತ್ತುಗಳನ್ನು ಕೊಡಿಸುವುದಾಗಿ ಘೋಷಿಸಿದರು, ನಂತರ ಮನಸ್ಸು ಬದಲಾಯಿಸಿದ ಸೂದ್ ಹೆಣ್ಣು ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನ ಹರಿಸಲಿ ಎಂದು ಹೇಳಿದ್ದರು.

ನಂತರ ಟ್ವೀಟ್ ಮಾಡಿದ್ದ ಸೋನು ಈ ಕುಟುಂಬಕ್ಕೆ ಟ್ರ್ಯಾಕ್ಟರ್ ಅವಶ್ಯಕತೆಯಿದೆ , ರೈತ ದೇಶದ ಹೆಮ್ಮೆ ಎಂದು ಹೇಳಿದ್ದರು. ಅದರಂತೆ ಈಗ ಆ ರೈತನ ಕುಟುಂಬಕ್ಕೆ ಟ್ರ್ಯಾಕ್ಟರ್
ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com