21 ದಿನದ ನೋಟಿಸ್ ಕೊಟ್ಟು ವಿಧಾನಸಭೆ ಅಧಿವೇಶನ ಕರೆಯಲು ಗೆಹ್ಲೋಟ್ ಸರ್ಕಾರಕ್ಕೆ ರಾಜಸ್ಥಾನ ರಾಜ್ಯಪಾಲ ಒಪ್ಪಿಗೆ

ರಾಜಸ್ಥಾನ ಸರ್ಕಾರದ ಬಿಕ್ಕಟ್ಟು ಕೊನೆಗೂ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿದ್ದು, ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಷರತ್ತು ವಿಧಿಸಿ ವಿಧಾನಸಭೆ ಅಧಿವೇಶನ ಕರೆದಿದ್ದಾರೆ. 
ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ
ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ

ಜೈಪುರ: ರಾಜಸ್ಥಾನ ಸರ್ಕಾರದ ಬಿಕ್ಕಟ್ಟು ಕೊನೆಗೂ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿದ್ದು, ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಷರತ್ತು ವಿಧಿಸಿ ವಿಧಾನಸಭೆ ಅಧಿವೇಶನ ಕರೆದಿದ್ದಾರೆ. 

ವಿಧಾನಸಭೆ ಅಧಿವೇಶನ ಕರೆಯದೇ ಇರುವುದು ಉದ್ದೇಶವಾಗಿರಲಿಲ್ಲ ಎಂದು ರಾಜಭವನ ತಿಳಿಸಿದೆ. ಕೊರೋನಾ ಕಾರಣದಿಂದಾಗಿ ಶಾಸಕರಿಗೆ ಮೂರು ವಾರಗಳ (21 ದಿನಗಳ) ಸೂಚನೆಯ ಅವಧಿ ನೀಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಬಗ್ಗೆ ವಿವರಿಸಬೇಕು, ಸರ್ಕಾರ ಇವುಗಳಿಗೆ ಒಪ್ಪಿಗೆ ಸೂಚಿಸಿದಲ್ಲಿ ಮಾತ್ರ ವಿಧಾನಸಭೆ ಅಧಿವೇಶನ ನಡೆಸಬಹುದೆಂದು ಕಲ್ ರಾಜ್ ಮಿಶ್ರ ಸರ್ಕಾರಕ್ಕೆ ಸೂಚಿಸಿದ್ದಾರೆ.

ಇನ್ನು ಇದೇ ವೇಳೆ ರಾಜಸ್ಥಾನದ ಸ್ಪೀಕರ್ ಸಿಪಿ ಜೋಷಿ ಬಂಡಾಯ ಶಾಸಕರನ್ನು ಅನರ್ಹಗೊಳಿಸುವ ನಿರ್ಧಾರದಿಂದ ದೂರ ಸರಿಯಬೇಕೆಂದು ಸೂಚಿಸಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ದಾಖಲಿಸಿದ್ದ ಪ್ರಕರಣವನ್ನು ಹಿಂಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com