ಬೇಗನೆ ಪತ್ತೆ ಹಚ್ಚಿದರೆ, ಕೋವಿಡ್ ಗುಣಪಡಿಸಬಹುದು: ಅನುಭವ ಹಂಚಿಕೊಂಡ ಶಿವರಾಜ್ ಸಿಂಗ್ ಚೌಹ್ಹಾಣ್

 ಕೋವಿಡ್-19 ಸೋಂಕಿಗೆ ತುತ್ತಾಗಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಮಂಗಳವಾರವಿಡಿಯೋ ಕಾನ್ಫರೆನ್ಸ್ ಮೂಲಕ ಆಸ್ಪತ್ರೆಯಿಂದಲೇ ಮೊದಲ  ವರ್ಚುವಲ್ ಸಚಿವ ಸಂಪುಟ ಸಭೆ ನಡೆಸಿದರು.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್

ಭೂಪಾಲ್:  ಕೋವಿಡ್-19 ಸೋಂಕಿಗೆ ತುತ್ತಾಗಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಮಂಗಳವಾರ
ವಿಡಿಯೋ ಕಾನ್ಫರೆನ್ಸ್ ಮೂಲಕ ಆಸ್ಪತ್ರೆಯಿಂದಲೇ ಮೊದಲ  ವರ್ಚುವಲ್  ಸಂಪುಟ ಸಭೆ ನಡೆಸಿದರು.

ಈ  ಸಂದರ್ಭದಲ್ಲಿ ತಮ್ಮ ಅನುಭವ ಹಂಚಿಕೊಂಡ ಶಿವರಾಜ್ ಸಿಂಗ್ ಚೌಹ್ಹಾಣ್,  ಒಂದು ವೇಳೆ ಸೋಂಕನ್ನು ಬೇಗನೆ
 ಪತ್ತೆ ಹಚ್ಚಿದರೆ ಕೋವಿಡ್ ಗುಣಪಡಿಸಬಹುದು ಅದು ಒಂದು ರೀತಿಯ ಶೀತ, ಕೆಮ್ಮು, ಜ್ವರವಿದ್ದಂತೆ ಎಂದರು.

ಕೊರೋನಾವೈರಸ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕೆಯೊಂದಿಗೆ ಅದನ್ನು ನಿಯಂತ್ರಣ ಮಾಡಬಹುದಾಗಿದೆ. ಒಂದು
 ವೇಳೆ ಸೋಂಕು ಶ್ವಾಸಕೋಶಕ್ಕೆ ಪ್ರವೇಶಿಸಿದಾಗ ಮಾತ್ರ ಅಪಾಯವನ್ನುಂಟುಮಾಡಲಿದೆ. ರೋಗ ಲಕ್ಷಣ ಕಂಡುಬಂದವರು ಕೂಡಲೇ ಡಾಕ್ಟರ್ ಸಂಪರ್ಕಿಸುವಂತೆ ಸಲಹೆ ನೀಡಿದರು.

ಸೋಮವಾರದಿಂದ ಯಾವುದೇ ಜ್ವರ, ಕೆಮ್ಮು ಬಂದಿಲ್ಲ ,ನಿಯಂತ್ರಣಕ್ಕೆ ಬಂದಿದೆ. ಬಟ್ಟೆಗಳನ್ನು ನಾನೇ ತೊಳೆದುಕೊಳ್ಳುತ್ತಿದ್ದೇನೆ.
ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತಿದೆ. ಟೀ ಕೂಡಾ ತಾವೇ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದರು.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟ ನಂತರ
ಶನಿವಾರ ಖಾಸಗಿ ಆಸ್ಪತ್ರೆಯೊಂದಕ್ಕೆ ಅವರನ್ನು ಸ್ಥಳಾಂತರಿಸಲಾಗಿತ್ತು. 

ಶಿವರಾಜ್ ಸಿಂಗ್ ಚೌಹ್ಹಾಣ್ ಆಸ್ಪತ್ರೆ ಸೇರಿದಾಗಿನಿಂದಲೂ  ಪ್ರತಿದಿನ ಇತರ ಇಲಾಖೆಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ
ಸಭೆ ನಡೆಸುವ ಮೂಲಕ ಕೋವಿಡ್-19 ಪರಿಸ್ಥಿತಿ ಬಗ್ಗೆ ಪರಾಮರ್ಶೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com