ನೌಕರಿ ಕಳೆದುಕೊಂಡ ಶಿಕ್ಷಕನನಿಗೆ ವಿದ್ಯಾರ್ಥಿಗಳಿಂದ ನೆರವಿನ ಗಿಫ್ಟ್!

ಸಂಕಷ್ಟಕ್ಕೆ ಸಿಲುಕಿದ ಶಿಕ್ಷಕರ ನೆರವಿಗೆ ಹಳೆಯ ವಿದ್ಯಾರ್ಥಿಗಳು ಧಾವಿಸಿ, ಕೊರೋನಾ ಕಾಲದಲ್ಲಿ ಜೀವನ ನಿರ್ವಹಣೆಗೆ ಸಹಾಯ ಹಸ್ತ ಚಾಚಿದ್ದಾರೆ. 
ನೌಕರಿ ಕಳೆದುಕೊಂಡ ಶಿಕ್ಷಕನನಿಗೆ ವಿದ್ಯಾರ್ಥಿಗಳಿಂದ ನೆರವಿನ ಗಿಫ್ಟ್!
ನೌಕರಿ ಕಳೆದುಕೊಂಡ ಶಿಕ್ಷಕನನಿಗೆ ವಿದ್ಯಾರ್ಥಿಗಳಿಂದ ನೆರವಿನ ಗಿಫ್ಟ್!

ಹೈದರಾಬಾದ್: ಸಂಕಷ್ಟಕ್ಕೆ ಸಿಲುಕಿದ ಶಿಕ್ಷಕರ ನೆರವಿಗೆ ಹಳೆಯ ವಿದ್ಯಾರ್ಥಿಗಳು ಧಾವಿಸಿ, ಕೊರೋನಾ ಕಾಲದಲ್ಲಿ ಜೀವನ ನಿರ್ವಹಣೆಗೆ ಸಹಾಯ ಹಸ್ತ ಚಾಚಿದ್ದಾರೆ. 

ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಕೋರುಟ್ಲಾದ ಹನುಮಂತುಲ ರಘು (52) ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕೊರೋನಾದಿಂದ ಅವರ ಕೆಲಸಕ್ಕೇ ಸಂಚಕಾರ ಬಂದು ನೌಕರಿ ಕಳೆದುಕೊಂಡರು. ಈ ಹಂತದಲ್ಲಿ ಜೀವನ ಸಾಗಿಸಲು ದಿಕ್ಕು ತೋಚದಂತಾದ ಅವರಿಗೆ 1997-98 ರ ಬ್ಯಾಚ್ ನ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ತಂಡವೊಂದು ವಾಟ್ಸ್ ಆಪ್ ಮೂಲಕ ಜೊತೆಗೂಡಿ ಉಪಹಾರ ಕೇಂದ್ರ ತೆರೆಯುವುದಕೆಕ್ ಶೆಡ್ ನಿರ್ಮಿಸಿಕೊಟ್ಟು ಸಹಕರಿಸಿದ್ದಾರೆ. 

ವಿದ್ಯಾರ್ಥಿಗಳ ನೆರವಿನಿಂದ ನಿರ್ಮಾಣಗೊಂಡ ಉಪಹಾರ ಕೇಂದ್ರಕ್ಕೆ ಶಿಕ್ಷಕ ರಘು ಅವರು ಗುರುದಕ್ಷಿಣ ಎಂಬ ಹೆಸರನ್ನಿಟ್ಟಿದ್ದಾರೆ.

ರಘು ಅವರ ಮಗ ಸಹ ಬಿ.ಇಡ್ ಪದವೀಧರರಾಗಿದ್ದು, ನೌಕರಿ ಇಲ್ಲದ ಪರಿಸ್ಥಿತಿ ಎದುರಿಸುತ್ತಿದ್ದಾರೆ. "ನನಗೆ ಸಹಾಯ ಮಾಡಿದ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಪದಗಳು ಇಲ್ಲದಂತಾಗಿದೆ" ಎನ್ನುತ್ತಾರೆ ರಘು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com