ನವದೆಹಲಿ: ಐಸಿಎಂಆರ್ ವಿಜ್ಞಾನಿ ಮತ್ತು ಸಿಆರ್ ಪಿಎಫ್ ಅಧಿಕಾರಿಗೂ ತಗುಲಿದ ಕೊರೋನಾ ಸೋಂಕು!

ಎರಡು ವಾರಗಳ ಹಿಂದೆಯಷ್ಟೇ ಮುಂಬೈನಿಂದ ನವದೆಹಲಿಗೆ ವಾಪಸ್ಸಾದ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯ ಹಿರಿಯ ವಿಜ್ಞಾನಿಯಲ್ಲಿ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಎರಡು ವಾರಗಳ ಹಿಂದೆಯಷ್ಟೇ ಮುಂಬೈನಿಂದ ನವದೆಹಲಿಗೆ ವಾಪಸ್ಸಾದ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯ ಹಿರಿಯ ವಿಜ್ಞಾನಿಯಲ್ಲಿ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ.

ಮುಂಬೈಗೆ ತೆರಳಿದ್ದ ಹಿರಿಯ ವಿಜ್ಞಾನಿಯೊಬ್ಬರು ಇತ್ತೀಚಿಗಷ್ಟೇ ನವದೆಹಲಿಗೆ ವಾಪಸ್ಸಾಗಿದ್ದರು. ಈ ವೇಳೆ ಕೊರೊನಾ ವೈರಸ್ ಸೋಂಕಿತ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಪಡಿಸಿದ ಸಂದರ್ಭದಲ್ಲಿ ಸೋಂಕು ಪತ್ತೆಯಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯ ಕಟ್ಟಡವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಮುಂದಿನ ಎರಡು ದಿನಗಳ ಕಾಲ ಎಲ್ಲ ಸಿಬ್ಬಂದಿಗೆ ಪ್ರವೇಶಕ್ಕೆ ಅವಕಾಶವನ್ನು ನಿರ್ಬಂಧಿಸಲಾಗಿದೆ.

ನವದೆಹಲಿಯ ಐಸಿಎಂಆರ್ ಕಟ್ಟಡವನ್ನು ಸ್ಯಾನಿಟೈಸ್ ಮಾಡಲಾಗಿದ್ದು ಎಲ್ಲ ಸಿಬ್ಬಂದಿಯ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೊರೊನಾ ವೈರಸ್ ಸಂಬಂಧಿತ ಔಷಧಿ ಸಂಶೋಧನೆಗೆ ಸಂಬಂಧಿಸಿದ ಕೆಲವು ಅಗತ್ಯ ಸಿಬ್ಬಂದಿಗೆ ಮಾತ್ರ ಸೋಮವಾರ ಐಸಿಎಂಆರ್ ಕಟ್ಟಡದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು.

ಐಸಿಎಂಆರ್ ಕಚೇರಿಗೆ ತೆರಳದೇ ವರ್ಕ್ ಫ್ರಾಮ್ ಹೋಮ್ ಮಾಡುವುದಕ್ಕೆ ಸೂಚನೆ ನೀಡಲಾಗಿದೆ. ಕೊರೊನಾ ವೈರಸ್ ಗೆ ಸಂಬಂಧಿತ ಸಂಶೋಧನಾ ಸಿಬ್ಬಂದಿಗೆ ಅನಿವಾರ್ಯವಿದ್ದಲ್ಲಿ ಮಾತ್ರ ಕಚೇರಿಗೆ ಆಗಮಿಸಬೇಕು. ಇಲ್ಲದಿದ್ದಲ್ಲಿ ಎಲ್ಲರೂ ಮನೆಯಿಂದಲೇ ವರ್ಕ್ ಮಾಡುವಂತೆ ಸೂಚಿಸಲಾಗಿದೆ.

ಇದೇ ವೇಳೆ ದೆಹಲಿಯ ಸಿಆರ್ ಪಿಎಫ್ ಅಧಿಕಾರಿಗೂ  ಸೋಂಕು ತಗುಲಿರುವುದು ದೃಢ ಪಟ್ಟಿದೆ. ಅಧಿಕಾರಿಯನ್ನೂ ಪ್ರತ್ಯೇಕವಾಗಿರಿಸಲಾಗಿದ್ದು ಎಲ್ಲಾ ನಿಯಮಗಳನ್ನು ಪಾಲಿಸಲಾಗುತ್ತಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com