'ಮುಂದಿನ ಸಲ ನಿಮಗೆ ಗುಜರಾತಿ ಕಿಚಿಡಿ ಮಾಡಿ ತಿನ್ನಿಸುತ್ತೇನೆ': ಮೋದಿ ಮುಂದೆ ಬಯಕೆ ಹೇಳಿಕೊಂಡ ಆಸ್ಟ್ರೇಲಿಯಾ ಪ್ರಧಾನಿ

ನಿಮ್ಮನ್ನು ಭೇಟಿ ಮಾಡಿ ಅಪ್ಪಿಕೊಳ್ಳಬೇಕು ಎನಿಸುತ್ತಿದೆ, ನಾನು ಮಾಡಿರುವ ಸಮೋಸವನ್ನು ನಿಮಗೆ ತಿನ್ನಿಸಬೇಕು, ಮುಂದಿನ ಬಾರಿ ನಿಮ್ಮನ್ನು ಭೇಟಿಯಾದಾಗ ನಿಮ್ಮಿಷ್ಟದ ಗುಜರಾತ್ ಕಿಚಿಡಿ ಮಾಡಿಕೊಡಬೇಕು ಇತ್ಯಾದಿಯಾಗಿ ವಿನೋದದ ಪ್ರೀತಿಯ ಮಾತುಗಳನ್ನಾಡಿದರು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್.
ಪಿಎಂ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್
ಪಿಎಂ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್

ನವದೆಹಲಿ: ನಿಮ್ಮನ್ನು ಭೇಟಿ ಮಾಡಿ ಅಪ್ಪಿಕೊಳ್ಳಬೇಕು ಎನಿಸುತ್ತಿದೆ, ನಾನು ಮಾಡಿರುವ ಸಮೋಸವನ್ನು ನಿಮಗೆ ತಿನ್ನಿಸಬೇಕು, ಮುಂದಿನ ಬಾರಿ ನಿಮ್ಮನ್ನು ಭೇಟಿಯಾದಾಗ ನಿಮ್ಮಿಷ್ಟದ ಗುಜರಾತ್ ಕಿಚಿಡಿ ಮಾಡಿಕೊಡಬೇಕು ಇತ್ಯಾದಿಯಾಗಿ ವಿನೋದದ ಪ್ರೀತಿಯ ಮಾತುಗಳನ್ನಾಡಿದರು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್.

ಇಂದು ಪ್ರಧಾನಿ ಮೋದಿಯೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಿದ ವರ್ಚುವಲ್ ಶೃಂಗಸಭೆಯಲ್ಲಿ ಹಲವು ಗಂಭೀರ ಮಾತುಗಳ ಮಧ್ಯೆ ಈ ರೀತಿಯ ವಿನೋದದ ಸಂಭಾಷಣೆ ಉಭಯ ನಾಯಕರ ಮಧ್ಯೆ ಸಾಗಿತು. ಸಮೋಸ, ಕಿಚಿಡಿ ಬಗ್ಗೆ ಆಸ್ಟ್ರೇಲಿಯಾ ಪ್ರಧಾನಿ ಹೇಳಿದಾಗ ಅದಕ್ಕೆ ಪ್ರತಿಯಾಗಿ ಮೋದಿಯವರು, ನಿಮ್ಮ ಸಮೋಸ ಇಲ್ಲಿ ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಬಹಳ ಜನ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ನೀವು ಕಿಚಿಡಿ ಬಗ್ಗೆ ಪ್ರಸ್ತಾಪಿಸಿದ್ದೀರಿ, ಅದನ್ನು ಕೇಳಿದ ಮೇಲಂತೂ ಗುಜರಾತೀಯರಿಗೆ ಇನ್ನೂ ಖುಷಿಯಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಹಲವು ಮಂದಿ ಗುಜರಾತಿಗಳು ನೆಲೆಸಿದ್ದಾರೆ ಎಂದರು.

ಕಿಚಿಡಿಯನ್ನು ಭಾರತದ ವಿವಿಧ ಕಡೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ, ಇಡೀ ದೇಶದಲ್ಲಿ ಜನಪ್ರಿಯವಾದ ತಿಂಡಿ ಅದು ಎಂದು ಸಹ ಮೋದಿ ಆಸ್ಟ್ರೇಲಿಯಾ ಪ್ರಧಾನಿಗೆ ಹೇಳಿದರು. ಹೇಳಿದರು.

ಕಳೆದ ಭಾನುವಾರ ಆಸ್ಟ್ರೇಲಿಯಾ ಪ್ರಧಾನಿ ಮೊರಿಸನ್ ಒಂದು ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು. ಅದು ಭಾರತದಲ್ಲಿ ಬಹಳ ಜನಪ್ರಿಯವಾಗಿರುವ ತಿಂಡಿ ಸಮೋಸ. ಸಮೋಸ ಜೊತೆ ಮಾವಿನ ಕಾಯಿ ಚಟ್ನಿ ಮಾಡಿ ಅದಕ್ಕೆ ಸ್ಕೊಮೊಸ ಎಂದು ಹೆಸರನ್ನಿಟ್ಟು ಇದನ್ನು ಪ್ರಧಾನಿ ಮೋದಿಗೆ ನೀಡಲು ಬಯಸುವುದಾಗಿ ಬರೆದು ಹಾಕಿದ್ದರು. ಮೋದಿಯವರನ್ನು ಟ್ಯಾಗ್ ಮಾಡಿದ್ದರು. ಅದು ಬಹಳ ವೈರಲ್ ಆಗಿ ಸುದ್ದಿಯಾಯಿತು.

ಅದನ್ನು ನೋಡಿದ ಮೋದಿಯವರು ಓಹ್, ನಿಜಕ್ಕೂ ಸೊಗಸಾಗಿದೆ, ಈ ಕೊರೋನಾ ಸಂಕಷ್ಟವೆಲ್ಲ ಮುಗಿದ ನಂತರ ನಾವು ಭೇಟಿಯಾಗಿ ಜೊತೆಯಲ್ಲಿ ಕುಳಿತು ತಿನ್ನೋಣ ಎಂದು ಉತ್ತರಿಸಿದ್ದರು. 

ಇಂದು ಮಾತಿನ ವೇಳೆ ಮೊರಿಸನ್ ಅವರು, ನಿಮಗೆ ನೆನಪಿದೆಯಾ ಕಳೆದ ಬಾರಿ ನಾವು ಭೇಟಿಯಾದಾಗ ಕಿಚಿಡಿ ಬಹಳ ಇಷ್ಟ ಎಂದು ಹೇಳಿದ್ದಿರಿ, ನಾನು ಅದನ್ನು ನಿಮಗೆ ಮಾಡಿಕೊಡಬೇಕು, ನಿಮ್ಮನ್ನು ಮುಖತಃ ಭೇಟಿ ಮಾಡಬೇಕು, ಮಾತನಾಡಬೇಕು, ನಿಮ್ಮನ್ನು ಅಪ್ಪಿಕೊಳ್ಳಬೇಕೆನಿಸುತ್ತಿದೆ ಎಂದರು.

ಇಂದು ಮೋದಿ ಮತ್ತು ಮೊರಿಸನ್ ನಡೆಸಿದ ಆನ್ ಲೈನ್ ಸಂವಾದದಲ್ಲಿ ಆರೋಗ್ಯ, ವ್ಯಾಪಾರ, ರಕ್ಷಣೆ ಇತ್ಯಾದಿಗಳ ಕುರಿತು ವಿಸ್ತಾರವಾಗಿ ಮಾತುಕತೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com