ಚೀನಾ ವಿರುದ್ಧದ ಪೋಸ್ಟ್: ಅಮೂಲ್ ನ ಟ್ವಿಟರ್ ಖಾತೆ ತಾತ್ಕಾಲಿಕ ಸ್ಥಗಿತ!

ಚೀನಾ ವಿರುದ್ಧ ಪೋಸ್ಟ್ ಹಾಕಿದ್ದಕ್ಕಾಗಿ ದೇಶಿಯ ಸಂಸ್ಥೆ ಅಮೂಲ್ ಹಾಗೂ ಅದರ ಮಾಲೀಕರ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿತ್ತು. 

ಅಮೂಲ್ ನ ಜಾಹಿರಾತು ಏಜೆನ್ಸಿ ಚೀನಾ ವಸ್ತುಗಳನ್ನು ತಿರಸ್ಕರಿಸುವಂತೆ ಕರೆ ನೀಡಿ ಜಾಹಿರಾತನ್ನು ಪ್ರಕಟಿಸಿ ಟ್ವಿಟರ್ ನಲ್ಲಿ ಹಾಕಿತ್ತು. ಈ ಹಿನ್ನೆಲೆಯಲ್ಲಿ ಟ್ವಿಟರ್ ಅಮೂಲ್ ಹಾಗು ಅದರ ಮಾಲೀಕರ ಟ್ವೀಟ್ ಖಾತೆಗಳನ್ನು ಬ್ಲಾಕ್ ಮಾಡಿದೆ. 

ಅಮೂಲ್ ಪ್ರಕಟಿಸಿದ್ದ ಜಾಹಿರಾತಿನಲ್ಲಿ ಎಕ್ಸಿಟ್ ಡ್ರ್ಯಾಗನ್? ಎಂದು ಬರೆಯಲಾಗಿತ್ತಲ್ಲದೆ, ಬಲಭಾಗದಲ್ಲಿ ಅಮೂಲ್ ಮೇಡ್ ಇನ್ ಇಂಡಿಯಾ ಎಂಬ ಸಂದೇಶ ಬರೆಯಲಾಗಿತ್ತು. ಲಡಾಕ್ ನ ಗಡಿ ಸಂಘರ್ಷದ ನಂತರ ದೇಶಾದ್ಯಂತ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವುದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಅಮೂಲ್ ಪ್ರಕಟಿಸಿದ್ದ ಜಾಹಿರಾತಿಗೆ ಭಾರಿ ಬೆಂಬಲ, ಮೆಚ್ಚುಗೆ ವ್ಯಕ್ತವಾಗಿತ್ತು. 

ಜಿಸಿಎಂಎಂಎಫ್ ವ್ಯವಸ್ಥಾಪಕ ನಿರ್ದೇಶಕ ಆರ್ ಎಸ್ ಸೋಧಿ ಈ ಬಗ್ಗೆ ಮಾತನಾಡಿದ್ದು, ನಮ್ಮ ಟ್ವಿಟರ್ ಖಾತೆ ಯಾಕೆ ಬ್ಲಾಕ್ ಆಗಿದೆ ಎಂದು ತಿಳಿದಿಲ್ಲ. ನಮ್ಮ ಜಾಹಿರಾತು ಸಂಸ್ಥೆ ಇದನ್ನು ಟ್ವಿಟರ್ ನಲ್ಲಿ ಹಂಚಿದ ಬಳಿಕ ಫಾರ್ವಾರ್ಡ್ ಮೆಸೇಜ್ ಮೂಲಕ ನಮಗೆ ಖಾತೆ ಬ್ಲಾಕ್ ಆಗಿದೆ ಎಂದು ತಿಳಿದುಬಂದಿತು. ಪುನಃ ಅದನ್ನು ಸಕ್ರಿಯಗೊಳಿಸಿವಂತೆ ಮನವಿ ಮಾಡಿದ್ದರ ಬಳಿಕ ಸಕ್ರಿಯಗೊಂಡಿದೆ. ನಾವು ಯಾರ ವಿರುದ್ಧವೂ ಅಭಿಯಾನ ಮಾಡಿಲ್ಲ, ಟ್ವಿಟರ್ ಖಾತೆ ಬ್ಲಾಕ್ ಆಗಿರುವುದಕ್ಕೆ ನಮಗೆ ಅಧಿಕೃತ ಸಂದೇಶ ಬಂದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com