ಅನಾಮಿಕಾ ಅಥವಾ ಪ್ರಿಯಾ? ಬೇರೆ ಬೇರೆ ಹೆಸರಿನೊಂದಿಗೆ ವಿವಿಧೆಡೆ ಉದ್ಯೋಗದಲ್ಲಿದ್ದ ಈ ಟೀಚರ್ ಗಳಿಸಿದ್ದು ಕೋಟಿ ವೇತನ!

ಅನಾಮಿಕಾ ಶುಕ್ಲಾ, ಅನಾಮಿಕಾ ಸಿಂಗ್ ಕಡೇಯದಾಗಿ ಪ್ರಿಯಾ ಹೀಗೆ ಣಾನಾ ಹೆಸರು, ಗುರುತುಗಳನ್ನಿಟ್ಟುಕೊಂಡು  25 ಶಾಲೆಗಳಲ್ಲಿ ಏಕಕಾಲದಲ್ಲಿ ಬೋಧನೆ ಮಾಡುತ್ತಿದ್ದ ಚಾಲಾಕಿ ಮಹಿಳೆಯೊಬ್ಬಳು ಕಡೆಗೂ ಪೋಲೀಸ್ ಅತಿಥಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖನೌ: ಅನಾಮಿಕಾ ಶುಕ್ಲಾ, ಅನಾಮಿಕಾ ಸಿಂಗ್ ಕಡೇಯದಾಗಿ ಪ್ರಿಯಾ ಹೀಗೆ ಣಾನಾ ಹೆಸರು, ಗುರುತುಗಳನ್ನಿಟ್ಟುಕೊಂಡು  25 ಶಾಲೆಗಳಲ್ಲಿ ಏಕಕಾಲದಲ್ಲಿ ಬೋಧನೆ ಮಾಡುತ್ತಿದ್ದ ಚಾಲಾಕಿ ಮಹಿಳೆಯೊಬ್ಬಳು ಕಡೆಗೂ ಪೋಲೀಸ್ ಅತಿಥಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ಅನಾಮಿಕಾಳಿಗೆ ಮೂಲ ಶಿಕ್ಷಾ ಅಧಿಕಾರಿ (ಬಿಎಸ್‌ಎ) ಅಂಜಲಿ ಅಗರ್‌ವಾಲ್ ಅವರು ಶೋ ಕಾಸ್ ನೋಟಿಸ್ ನೀಡಿದ ನಂತರ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಲು ಹೋದ ವೇಳೆ ಉತ್ತರ ಪ್ರದೇಶದ ಕಸ್ಗಂಜ್  ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಕಸ್ಗಂಜ್ ಬಿಎಸ್ಎ ಅಂಜಲಿ ಅಗರ್‌ವಾಲ್ ಹೇಳಿದಂತೆ ಮೂಲತಃ ಫರುಖಾಬಾದ್ ನ  ಕೈಮ್ಗಂಜ್ ನಿವಾಸಿ ಅನಾಮಿಕಾ ಶುಕ್ಲಾ ಪ್ರಸ್ತುತ ಗೊಂಡಾದ ರಘುಕುಲ್ ಪದವಿ ಕಾಲೇಜಿನಿಂದ ಬಿ.ಎಡ್. ಪದವಿ ಹೊಂದಿದ್ದಳು. ಆಕೆಯ ಇತರೆ ಶೈಕ್ಷಣಿಕ ದಾಖಲೆಗಳು ಸಹ ಅದೇ ಕಾಲೀಜಿನವಾಗಿದೆ.ವಿಚಾರಣೆ ವೇಳೆ, ಅನಾಮಿಕಾ ಶುಕ್ಲಾ ತಾವು ನಿಜವಾಗಿಯೂ ಅನಾಮಿಕಾ ಸಿಂಗ್ ಎಂದು ಹೇಳಿದ್ದಾಳೆ. ಆದರೆ ವಿಚಾರಣೆ ಮುಂದುವರಿದಂತೆ ಫಾರೂಖಾಬಾದ್‌ನ ಪ್ರಿಯಾ ಸಹ ಆಕೆಯೇ ಎಂದು ತಿಳಿದುಬಂದಿದೆ. ಸಧ್ಯ ಐಪಿಸಿ ಸೆಕ್ಷನ್‌ಗಳು 420, 467 ಮತ್ತು 468  ಅಡಿಯಲ್ಲಿ ಮೋಸದ ಪ್ರಕರಣದಡಿ ಆಕೆಯ ಬಂಧನವಾಗಿದೆ. ಪೊಲೀಸರ ಪ್ರಕಾರ, ಈ ಕೆಲಸ ಪಡೆಯಲು ಅನಾಮಿಕಾ ಮೈನ್‌ಪುರಿ ಮೂಲದ ಪುರುಷನಿಗೆ ಐದು ಲಕ್ಷ ರೂ. ಕೊಟ್ಟಿದ್ದಳು.

ಆಕೆ  ಫರಿಯಾಖಾಬಾದ್ ಜಿಲ್ಲೆಯ ಕಾಯಮ್‌ಗಂಜ್ ಪೊಲೀಸ್ ವಲಯದ ಲಖನ್‌ಪುರ ಗ್ರಾಮದ ನಿವಾಸಿ ಮಹಿಪಾಲ್ ಅವರ ಪುತ್ರಿ ಪ್ರಿಯಾ. ಆಗಿದ್ದು ಕೆಲಸ ಗಿಟ್ಟಿಸಿಕೊಳ್ಳುವುದಕ್ಕಾಗಿ ಅನಾಮಿಕಾ ಶುಕ್ಲಾ  ಆಗಿ ಬದಲಾಗಿದ್ದಳು.

"ವಿಚಾರಣೆ ವೇಳೆ ಆರೋಪಿಸುಭಾಸ್ ಸಿಂಗ್ ಅವರ ಪುತ್ರಿ ಅನಾಮಿಕಾ ಸಿಂಗ್ ಎಂದು ಹೇಳಿಕೊಂಡಿದ್ದಾಳೆ.  ಆಕೆಯ ದಾಖಲೆಗಳು ಸುಭಾಸ್ ಚಂದ್ರ ಶುಕ್ಲಾ ಅವರ ಪುತ್ರಿ ಅನಾಮಿಕಾ ಶುಕ್ಲಾ  ಎಂಬ ಹೆಸರಿನಲ್ಲಿದೆ. “ ಸೊರೊನ್ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರಿಪುದಮಾನ್ ಸಿಂಗ್ ಹೇಳಿದ್ದಾರೆ.

ಈ ಕೆಲಸಕ್ಕಾಗಿ ಮೈನ್‌ಪುರಿ ಮೂಲದ ರಾಜ್‌ಗೆ ತಾನು ಭಾರಿ ಮೊತ್ತವನ್ನು ಪಾವತಿಸಿದ್ದೇನೆ ಮತ್ತು ಆಗಸ್ಟ್ 2018 ರಿಂದ ಫರೀದ್‌ಪುರ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯ (ಕೆಜಿಬಿವಿ) ಯಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿ ಹೇಳಿಕೊಂಡಿದ್ದಾಳೆ. ಆಕೆಗೆ ಕೆಲಸ ಕೊಡಿಸಿದ್ದ ವ್ಯಕ್ತಿಯ ಶೋಧಕ್ಕೆ ಈಗ ಪೋಲೀಸರು ತೊಡಗಿದ್ದಾರೆ.

ಇನ್ನು ಉತ್ತರ ಪ್ರದೇಶ ಸರ್ಕಾರದ ಪ್ರಕಾರ, ಇನ್ನೂ ಐದು ಅನಾಮಿಕಾ ಶುಕ್ಲಾರು ಅಂಬೇಡ್ಕರ್ ನಗರ, ಬಾಗ್ಪತ್, ಅಲಿಘರ್  ಸಹರಾನ್ಪುರ್ ಮತ್ತು ಪ್ರಯಾಗರಾಜ್ ಜಿಲ್ಲೆಗಳಲ್ಲಿ ಕೆಜಿಬಿವಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಕಳೆದ ಒಂದು ವರ್ಷದಲ್ಲಿ ಒಟ್ಟು ಒಂದು ಕೋಟಿ ರೂ. ವೇತನ ಪಡೆಇದ್ದಾರೆ. ಸಮಾಜದ ದುರ್ಬಲ ವರ್ಗದ ಬಾಲಕಿಯರ ವಸತಿ ಶಾಲೆಯಾಗಿರುವ ಕೆಜಿಬಿವಿಯಲ್ಲಿ ಶಿಕ್ಷಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ ಮತ್ತು ಅವರಿಗೆ ತಿಂಗಳಿಗೆ ಅಂದಾಜು 30,000 ರೂ. ವೇತನ ದೊರಕುತ್ತದೆ.ಜಿಲ್ಲೆಯ ಪ್ರತಿ ಬ್ಲಾಕ್‌ನಲ್ಲಿ ಒಂದು ಕಸ್ತೂರ್ಬಾ ಗಾಂಧಿ ಶಾಲೆ ಇದೆ.

ಈ ಘಟನೆ ಆಘಾತಕಾರಿ ಮತ್ತು ಪೊಲೀಸರು ಈ ಪ್ರಕರಣದ ಸಂಪೂರ್ಣ ದಂಧೆಯನ್ನು ಬಿಚ್ಚಿಡುತ್ತಾರೆ ಎಂದು ಮೂಲ ಶಿಕ್ಷಣ ಸಚಿವ ಸತೀಶ್ ದ್ವಿವೇದಿ ಹೇಳಿದ್ದಾರೆ. "ಕೆಜಿಬಿವಿಯಲ್ಲಿ ತನಗೆ ಕೆಲಸ ದೊರಕಿಸಿಕೊಳ್ಳಲು ನಂತರ ಅದನ್ನು ಮರೆಮಾಚುವಲ್ಲಿ ಈ ಶಿಕ್ಷಕನೊಂದಿಗೆ ಸಂಪರ್ಕ ಹೊಂದಿದ ಯಾವುದೇ ಅಧಿಕಾರಿ, ಉದ್ಯೋಗಿಯನ್ನು ಸುಮ್ಮನೆ ಬಿಡಲಾಗುವುದಿಲ್ಲ ಎಂದು ಅವರು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com