ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದೆಹಲಿಗರಿಗೆ ಮಾತ್ರವಲ್ಲ ಪ್ರತೀಯೊಬ್ಬರಿಗೂ ಚಿಕಿತ್ಸೆ ನೀಡಬೇಕು: ಕೇಜ್ರಿವಾಲ್ ನಡೆಗೆ ಲೆಫ್ಟಿನೆಂಟ್ ಗವರ್ನರ್ ತಿರುಗೇಟು!

ದೆಹಲಿಯಲ್ಲಿ ದೆಹಲಿ ನಿವಾಸಿಗಳಿಗೆ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯಬೇಕು ಎಂಬ ಕಾರಣದಿಂದ ಆಸ್ಪತ್ರೆಗಳನ್ನು ಮೀಸಲಿಡುವ ಕೇಜ್ರಿವಾಲ್ ಸರ್ಕಾರದ ನಿರ್ಧಾರಕ್ಕೆ ಲೆಫ್ಟಿನೆಂಟ್ ಗವರ್ನರ್  ತಡೆ ನೀಡಿದ್ದು, ದೆಹಲಿಯಲ್ಲಿ ಪ್ರತೀಯೊಬ್ಬರಿಗೂ ಚಿಕಿತ್ಸೆ ದೊರೆಯಬೇಕು ಎಂದು ಹೇಳಿದ್ದಾರೆ.

ನವದೆಹಲಿ: ದೆಹಲಿಯಲ್ಲಿ ದೆಹಲಿ ನಿವಾಸಿಗಳಿಗೆ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯಬೇಕು ಎಂಬ ಕಾರಣದಿಂದ ಆಸ್ಪತ್ರೆಗಳನ್ನು ಮೀಸಲಿಡುವ ಕೇಜ್ರಿವಾಲ್ ಸರ್ಕಾರದ ನಿರ್ಧಾರಕ್ಕೆ ಲೆಫ್ಟಿನೆಂಟ್ ಗವರ್ನರ್  ತಡೆ ನೀಡಿದ್ದು, ದೆಹಲಿಯಲ್ಲಿ ಪ್ರತೀಯೊಬ್ಬರಿಗೂ ಚಿಕಿತ್ಸೆ ದೊರೆಯಬೇಕು ಎಂದು ಹೇಳಿದ್ದಾರೆ.

ಮಾರಕ ಕೊರೋನಾ ವೈರಸ್ ದೆಹಲಿಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಗಳ ವ್ಯಾಪಕ ಕೊರತೆ ಎದುರಾಗಿತ್ತಿದೆ. ಇದೇ ಕಾರಣಕ್ಕೆ ಈ ಹಿಂದೆ ದೆಹಲಿ ಸರ್ಕಾರ ಅಲ್ಪ ಪ್ರಮಾಣದ ಸೋಂಕು ಮತ್ತು ಕೊರೋನಾ ಲಕ್ಷಣ ರಹಿತ ಸೋಂಕಿತರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಹೋಮ್ ಕ್ವಾರಂಟೈನ್ ನಲ್ಲಿರಿಸಿ ಚಿಕಿತ್ಸೆ ಪಡೆಯುವಂತೆ ಸೂಚಿಸಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೇಜ್ರಿವಾಲ್ ಸರ್ಕಾರ ದೆಹಲಿ ನಿವಾಸಿಗಳಿಗೆಂದೇ ಆಸ್ಪತ್ರೆಗಳನ್ನು ಮೀಸಲಿಟ್ಟಿದ್ದು, ಇತರ ರಾಜ್ಯಗಳ ರೋಗಿಗಳನ್ನು ನಿರ್ಬಂಧಿಸುವ ಕಾರ್ಯಕ್ಕೆ ಮುಂದಾಗಿತ್ತು.

ಆದರೆ ಕೇಜ್ರಿವಾಲ್ ಸರ್ಕಾರದ ಈ ನಡೆಯನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರು ತಡೆದಿದ್ದು, ದೆಹಲಿ ನಿವಾಸಿಗಳಲ್ಲದವರಿಗೂ ದೆಹಲಿಯಲ್ಲಿ ಚಿಕಿತ್ಸೆ ದೊರೆಯಬೇಕು ಎಂದು ಹೇಳಿ ಸರ್ಕಾರದ ಆದೇಶಕ್ಕೆ ತಡೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಕೊರೋನಾ ಸಾಂಕ್ರಾಮಿಕದಂತಹ ಈ ಪರಿಸ್ಥಿತಿಯಲ್ಲಿ ತಾರತಮ್ಯ ಸರಿಯಲ್ಲ. ಕೇವಲ ಬೇರೆ ರಾಜ್ಯದವರು ಎಂಬ ಒಂದೇ ಕಾರಣಕ್ಕೆ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಬಾರದು ಎಂದು ಹೇಳಿದ್ದಾರೆ. 

ಇದೇ ವೇಳೆ ಕೊರೋನಾ ಸಾಂಕ್ರಾಮಿಕ ಸಂಬಂಧ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿರುವ ಅನಿಲ್ ಬೈಜಲ್ ಅವರು, ಆರೋಗ್ಯ ಈ ದೇಶದ ಪ್ರತೀಯೊಬ್ಬ ಪ್ರಜೆಯ ಹಕ್ಕು. ಯಾವುದೇ ಕಾರಣಕ್ಕೂ ಅದನ್ನು ಯಾರೂ ನಿರಾಕರಿಸುವಂತಿಲ್ಲ. ಇದು ಸಂವಿಧಾನದ ಪ್ರಮುಖಾಂಶವಾಗಿದೆ. ಹೀಗಾಗಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರಗೆಳು ಯಾವುದೇ ರೀತಿಯ ತಾರತಮ್ಯ ಮಾಡದೇ ದೇಶದ ಪ್ರತೀಯೊಬ್ಬ ನಿವಾಸಿಗೂ ಚಿಕಿತ್ಸೆ ನೀಡಬೇಕು ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com