ರಾಜ್ಯಗಳಿಂದ ಮನವಿ ಸ್ವೀಕರಿಸಿದ 24 ಗಂಟೆಯಲ್ಲಿ ವಲಸಿಗರಿಗಾಗಿ ರೈಲು ಒದಗಿಸಲು ಸಿದ್ಧ: ರೈಲ್ವೆ ಸಚಿವಾಲಯ

ಮೇ 1 ರಿಂದ 4,347 ಶ್ರಮಿಕ್ ವಿಶೇಷ ರೈಲುಗಳ ಮೂಲಕ ಸುಮಾರು 60 ಲಕ್ಷ ಜನರನ್ನು ತಮ್ಮ ಸ್ವಂತ ರಾಜ್ಯಗಳಿಗೆ ಸಾಗಿಸಿರುವ ಭಾರತೀಯ ರೈಲ್ವೆ, ರಾಜ್ಯಗಳಿಂದ ಬೇಡಿಕೆ ಸ್ವೀಕರಿಸಿದ 24 ಗಂಟೆಗಳ ಒಳಗೆ ಈ ರೈಲುಗಳನ್ನು ಒದಗಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದೆ.
ಶ್ರಮಿಕ್ ರೈಲು
ಶ್ರಮಿಕ್ ರೈಲು

ನವದೆಹಲಿ: ಮೇ 1 ರಿಂದ 4,347 ಶ್ರಮಿಕ್ ವಿಶೇಷ ರೈಲುಗಳ ಮೂಲಕ ಸುಮಾರು 60 ಲಕ್ಷ ಜನರನ್ನು ತಮ್ಮ ಸ್ವಂತ ರಾಜ್ಯಗಳಿಗೆ ಸಾಗಿಸಿರುವ ಭಾರತೀಯ ರೈಲ್ವೆ, ರಾಜ್ಯಗಳಿಂದ ಬೇಡಿಕೆ ಸ್ವೀಕರಿಸಿದ 24 ಗಂಟೆಗಳ ಒಳಗೆ ಈ ರೈಲುಗಳನ್ನು ಒದಗಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದೆ.

ಶ್ರಮಿಕ್ ವಿಶೇಷ ರೈಲುಗಳ ಮೂಲಕ ವಲಸಿಗರಿಗೆ ಅನುಕೂಲಕರ ಮತ್ತು ಸುರಕ್ಷಿತ ಸಂಚಾರವನ್ನು ಒದಗಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿರುವ ರೈಲ್ವೆ ಸಚಿವಾಲಯ, ಶ್ರಮಿಕ್ ವಿಶೇಷ ರೈಲುಗಳ ಕುರಿತಂತೆ ತಮ್ಮ ಅವಶ್ಯಕತೆಗಳನ್ನು ಸೂಚಿಸುವಂತೆ ರಾಜ್ಯ ಸರ್ಕಾರಗಳಿಗೆ ವಿನಂತಿಸಿದೆ.

ರೈಲ್ವೆ ಮಂಡಳಿಯ ಅಧ್ಯಕ್ಷರು ಈ ವಿಷಯ ಕುರಿತಂತೆ ಮೇ 29 ಹಾಗೂ ಜೂನ್ 3 ರಂದು ರಾಜ್ಯಗಳಿಗೆ ಪತ್ರಗಳನ್ನು ಬರೆದಿದ್ದಾರೆ. ಮನವಿ ಸ್ವೀಕರಿಸಿದ 24 ಗಂಟೆಯೊಳಗೆ ಭಾರತೀಯ ರೈಲ್ವೆ ಅಗತ್ಯ ಸಂಖ್ಯೆಯ ಶ್ರಮಿಕ್ ವಿಶೇಷ ರೈಲುಗಳನ್ನು ಒದಗಿಸುತ್ತದೆ ಎಂದು ಅವರು ಪತ್ರದಲ್ಲಿ ಪ್ರತಿಪಾದಿಸಿದ್ದರು.

ಮಂಗಳವಾರವೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಇದೇ ವಿಷಯವಾಗಿ ಪತ್ರವನ್ನು ಕಳುಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com