ವಿಮಾ ಪಾಲಿಸಿಗಳಲ್ಲಿ ಮಾನಸಿಕ ಅಸ್ವಸ್ಥತೆಯನ್ನು ಸೇರಿಸಬೇಕೆ? ಕೇಂದ್ರ, ಐಆರ್‌ಡಿಎ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್

ಸಮಾನತೆ ಹಕ್ಕಿನ ವ್ಯಾಪ್ತಿಗೆ ಬರುವಂತೆ  ಮಾನಸಿಕ ಆರೋಗ್ಯ ಕಾನೂನಿನ ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್  ಕೇಂದ್ರ ಮತ್ತು ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರದಿಂದ (ಐಆರ್ಡಿಎ) ಪ್ರತಿಕ್ರಿಯೆ ಕೋರಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಸಮಾನತೆ ಹಕ್ಕಿನ ವ್ಯಾಪ್ತಿಗೆ ಬರುವಂತೆ  ಮಾನಸಿಕ ಆರೋಗ್ಯ ಕಾನೂನಿನ ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್  ಕೇಂದ್ರ ಮತ್ತು ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರದಿಂದ (ಐಆರ್ಡಿಎ) ಪ್ರತಿಕ್ರಿಯೆ ಕೋರಿದೆ.

ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್, ನವೀನ್ ಸಿನ್ಹಾ ಮತ್ತು ಬಿ ಆರ್ ಗವಾಯಿ  ಅವರನ್ನೊಳಗೊಂಡ ನ್ಯಾಯಪೀಠವು ಮನವಿಯ ಕುರಿತು ನೋಟಿಸ್ ನೀಡಿದೆ.

ವಕೀಲರಾದ ಗೌರವ್ ಕುಮಾರ್ ಬನ್ಸಾಲ್ ತಾವು ಈ ಸಂಬಂಧ ಅರ್ಜಿ ಸಲ್ಲಿಸಿದ್ದು ಇಂದು ವಿಚಾರಣೆ ವೇಳೆ ಖುದ್ದು ಹಾಜರಿದ್ದರು. "ಮಾನಸಿಕ ಆರೋಗ್ಯ ಕಾಯ್ದೆ 2017 ರ ಸೆಕ್ಷನ್ 21 (4) ವಿಮಾ ಪಾಲಿಸಿಗಳಲ್ಲಿ ಮಾನಸಿಕ ಅಸ್ವಸ್ಥತೆ ವಿಚಾರ ಸೇರ್ಪಡಿಸಬೇಕು ಆದರೆ ಐಆರ್ಡಿಎಯ  ವಿಭಿನ್ನ ವರ್ತನೆಯ ಪರಿಣಾಮ  ಇಲ್ಲಿಯವರೆಗೆ ನಿಬಂಧನೆಯನ್ನು ಪಾಲಿಸಲಾಗಿಲ್ಲ." ಅವರು ವಾದಿಸಿದ್ದಾರೆ.

ವಿಮಾ ಕಂಪನಿಗಳು ಮಾನಸಿಕ ಆರೋಗ್ಯ ಕಾಯ್ದೆ 2017 ರ ಸೆಕ್ಷನ್ 21 (4) ಅನ್ನು ಜಾರಿಗೆ ತರುವಂತೆ ಮಾಡುವಲ್ಲಿ  ಐಆರ್ಡಿಎ ವಿಫಲವಾಗಿದೆ, ಇದರಿಂದಾಗಿ  ಮಾನಸಿಕ ಅಸ್ವಸ್ಥರಿಗೆ ಸಾಕಷ್ಟು ತೊಂದರೆ ಸೃಷ್ಟಿಯಾಗುತ್ತಿದೆ ಎಂದು ಬನ್ಸಾಲ್ ಹೇಳಿದ್ದಾರೆ.

"ಐಆರ್ಡಿಎಯ ಪಕ್ಷಪಾತವು ಮಾನಸಿಕ ಅಸ್ವಸ್ಥತೆ ಹೊಂದಿದ್ದ ವ್ಯಕ್ತಿಗಳ ವಿರುದ್ಧ ತಾರತಮ್ಯವನ್ನು ಕಾಣಿಸುತ್ತಿದೆ. ಅಷ್ಟಲ್ಲದೆ ಇದು ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳಿಗೆ ಬಹುವಿಧದಲ್ಲಿ ತೊಂದರೆ ನೀಡುತ್ತಿದೆ. ಮಾನಸಿಕ ಆರೋಗ್ಯ ಕಾಯ್ದೆ, 2017 ರ ನಿಬಂಧನೆಯನ್ನು ಸೇರಿಸದಿದ್ದಕ್ಕಾಗಿ ವಿಮಾದಾರರಿಗೆ ಶಿಕ್ಷೆ ವಿಧಿಸುವ ಬದಲು, ಐಆರ್ಡಿಎ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ನೆರವಾಗುತ್ತಿದೆ " ಪಾಲಿಸಿದಾರರ ಹಿತಾಸಕ್ತಿಗಳನ್ನು ಕಾಪಾಡುವ ಪ್ರಧಾನ ಉದ್ದೇಶದಿಂದ ಐಆರ್‌ಡಿಎ ರಚನೆಯಾಗಿದೆ ಎಂದು ಬನ್ಸಾಲ್ ಕೋರ್ಟ್ ನ ಗಮನ ಸೆಳೆದಿದ್ದು ಆದರೆ ಇದೀಗ ಹಾಗಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕಾನೂನು ಜಾರಿಗೆ ಬಂದ ನಂತರ, ಐಆರ್ಡಿಎ 2018 ರ ಆಗಸ್ಟ್ 16 ರಂದು ಎಲ್ಲಾ ವಿಮೆದಾರರಿಗೆ ಮಾನಸಿಕ ಆರೋಗ್ಯ ಕಾಯ್ದೆ, 2017 ರ ನಿಬಂಧನೆಗಳನ್ನು ಪಾಲಿಸುವಂತೆ ಸುತ್ತೋಲೆ ಹೊರಡಿಸಿದೆ. ಇದರ ಸಂಬಂಧ ಏನೆಲ್ಲಾ ಬೆಳವಣಿಗೆಗಳಾಗಿದೆ ಎನ್ನುವುದನ್ನು ಅರಿಯಲು ಬನ್ಸಾಲ್  ಮಾಹಿತಿ ಹಕ್ಕು ಕಾಯ್ದೆ 2005 ರ ಸೆಕ್ಷನ್ 6 ರ ಅಡಿಯಲ್ಲಿ 2019 ರ ಜನವರಿ 10 ರಂದು ಅರ್ಜಿ ಸಲ್ಲಿಸಿದ್ದಾರೆ  "ಫೆಬ್ರವರಿ 6, 2019 ರಂದು ಪ್ರತಿವಾದಿ ಸಂಖ್ಯೆ 02 (ಐಆರ್ಡಿಎ) ತಮ್ಮ ಅರ್ಜಿಗೆ ಉತ್ತರ ಕೊಟ್ಟಿದೆ. ಅದರಲ್ಲಿ  ಐಆರ್ಡಿಎ ಹೊರಡಿಸಿದ 2018 ರ ಆಗಸ್ಟ್ 16 ರ ಆದೇಶವನ್ನು ಯಾವುದೇ ವಿಮೆಗಾರರು ಜಾರಿಗೆ ತಂದಿಲ್ಲ ಎಂದು ತಿಳಿಸಲಾಗಿದೆ. , "ವಿಮೆ ನಿಯಂತ್ರಕವು ತನ್ನ ಆದೇಶವನ್ನು ಅನುಷ್ಠಾನಗೊಳಿಸದ ಯಾವ ವಿಮಾ ಸಂಸ್ಥೆಯ ವಿರುದ್ಧ ಸಹ ಕ್ರ್ಮ ಜರುಗಿಸಿಲ್ಲ. ಕಾನೂನಿನಡಿಯಲ್ಲಿ ನಿರ್ದಿಷ್ಟ ನಿಬಂಧನೆಗಳನ್ನು ಹೊಂದಿದ್ದರೂ, ತಕ್ಷಣದ ಕ್ರಮ ತೆಗೆದುಕೊಳ್ಳಲು ಐಆರ್ಡಿಎ ಹಿಂಜರಿಯುತ್ತಿದೆ ಎಂಬುದು ಸಂಸ್ಥೆಯ ಮೊಂಡುತನಕ್ಕೆ ಸಾಕ್ಷಿ ಎಂದು ಬನ್ಸಾಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com