ಲಡಾಕ್ ನಲ್ಲಿ ಭಾರತೀಯ ಸೈನಿಕರ ಪ್ರಾಣತ್ಯಾಗ ಅತೀವ ನೋವು ತಂದಿದೆ: ರಾಜನಾಥ್ ಸಿಂಗ್

ಪೂರ್ವ ಲಡಾಕ್ ನ ಗಲ್ವಾನ್ ಕಣಿವೆ ಭಾಗದಲ್ಲಿ ಸೋಮವಾರ ಮಧ್ಯರಾತ್ರಿ ನಡೆದ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಯೋಧರು ಚೀನಾ ಸೈನಿಕರಿಂದ ಹುತಾತ್ಮರಾದ ಘಟನೆ ತೀವ್ರ ನೋವುಂಟುಮಾಡುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ರಾಜನಾಥ್ ಸಿಂಗ್(ಸಂಗ್ರಹ ಚಿತ್ರ)
ರಾಜನಾಥ್ ಸಿಂಗ್(ಸಂಗ್ರಹ ಚಿತ್ರ)

ನವದೆಹಲಿ:ಪೂರ್ವ ಲಡಾಕ್ ನ ಗಲ್ವಾನ್ ಕಣಿವೆ ಭಾಗದಲ್ಲಿ ಸೋಮವಾರ ಮಧ್ಯರಾತ್ರಿ ನಡೆದ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಯೋಧರು ಚೀನಾ ಸೈನಿಕರಿಂದ ಹುತಾತ್ಮರಾದ ಘಟನೆ ತೀವ್ರ ನೋವುಂಟುಮಾಡುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ದೇಶವನ್ನು ಕಾಪಾಡುವ, ದೇಶದ ಘನತೆ ಗೌರವವನ್ನು ಎತ್ತಿ ಹಿಡಿಯುವ ವಿಚಾರದಲ್ಲಿ ನಮ್ಮ ಸೈನಿಕರು ವಿಶೇಷ ಧೈರ್ಯ, ಸಾಹಸ ಮೆರೆದಿದ್ದಾರೆ. ಪ್ರಾಣಕ್ಕಿಂತ ದೇಶ ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 20 ಮಂದಿ ಯೋಧರ ತ್ಯಾಗ, ಬಲಿದಾನ ವಿಷಯ ಮನಸ್ಸಿಗೆ ತೀವ್ರ ನೋವು ಮತ್ತು ತೊಂದರೆಯನ್ನುಂಟುಮಾಡುತ್ತಿದೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಹುತಾತ್ಮ ಸೈನಿಕರ ವೀರ ಬಲಿದಾನವನ್ನು ದೇಶ ಯಾವತ್ತಿಗೂ ಮರೆಯುವುದಿಲ್ಲ. ಅವರ ಕುಟುಂಬಸ್ಥರ ಜೊತೆ ಈ ಕಠಿಣ ಪರಿಸ್ಥಿತಿಯಲ್ಲಿ ನಾವು ಖಂಡಿತವಾಗಿಯೂ ಇರುತ್ತೇವೆ. ಹುತಾತ್ಮ ಸೈನಿಕರ ಕುಟುಂಬಸ್ಥರಿಗೆ ಸಂತಾಪಗಳು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com