ದೆಹಲಿಗೆ ಬರುವವರಿಗೆ 5 ದಿನ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಆದೇಶ ಹಿಂಪಡೆದ ಲೆಫ್ಟಿನೆಂಟ್ ಗವರ್ನರ್

ದೆಹಲಿಯ ಆಪ್ ಸರ್ಕಾರದ ತೀವ್ರ ವಿರೋಧದ ನಂತರ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಕೋವಿಡ್-19 ರೋಗಿಗಳಿಗೆ 5 ದಿನಗಳ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಆದೇಶವನ್ನು ಹಿಂತೆಗೆದುಕೊಂಡಿದ್ದಾರೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್
ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್

ನವದೆಹಲಿ: ದೆಹಲಿಯ ಆಪ್ ಸರ್ಕಾರದ ತೀವ್ರ ವಿರೋಧದ ನಂತರ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಕೋವಿಡ್-19 ರೋಗಿಗಳಿಗೆ 5 ದಿನಗಳ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಆದೇಶವನ್ನು ಹಿಂತೆಗೆದುಕೊಂಡಿದ್ದಾರೆ.

ಆದೇಶವನ್ನು ಹಿಂಪಡೆದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಕಚೇರಿ ಮಾಡಿರುವ ಟ್ವೀಟ್ ನಲ್ಲಿ, ಕ್ಲಿನಿಕಲ್ ಪರೀಕ್ಷೆಯ ನಂತರ ಆಸ್ಪತ್ರೆಯ ಅಗತ್ಯವಿಲ್ಲದಿರುವ ಕೋವಿಡ್-19 ಪಾಸಿಟಿವ್ ಇರುವವರು, ಮನೆಯಲ್ಲಿ ಸ್ವ ನಿರ್ಬಂಧದಲ್ಲಿರಲು ಸರಿಯಾದ ಸೌಲಭ್ಯ ಹೊಂದಿಲ್ಲದವರು ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಬೇಕು ಎಂದು ಹೇಳಿದ್ದಾರೆ.

ಕೋವಿಡ್-19 ರೋಗಿಗಳಿಗೆ ದೆಹಲಿಯಲ್ಲಿ ಕಡ್ಡಾಯವಾಗಿ 5 ದಿನ ಸಾಂಸ್ಥಿಕ ಕ್ವಾರಂಟೈನ್ ಇರಬೇಕು ಎಂಬ ರಾಜ್ಯಪಾಲರ ಆದೇಶವನ್ನು ದೆಹಲಿ ಸರ್ಕಾರ ವಿರೋಧಿಸಿತ್ತು. ಇದೊಂದು ಅನಿಯಂತ್ರಿತ ನಡೆಯಾಗಿದ್ದು ರಾಷ್ಟ್ರ ರಾಜಧಾನಿಯ ಜನರನ್ನು ಖಂಡಿತವಾಗಿಯೂ ತೊಂದರೆಗೀಡು ಮಾಡುತ್ತದೆ, ರಾಜ್ಯಪಾಲರ ಸರ್ವಾಧಿಕಾರ ನಡೆಯನ್ನು ಇದು ತೋರಿಸುತ್ತದೆ ಎಂದು ಆಪ್ ಹಿರಿಯ ನಾಯಕ ಸಂಜಯ್ ಸಿಂಗ್ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com