ಕೊರೋನಾ ಸಾಂಕ್ರಾಮಿಕ ಮಧ್ಯೆ 'ಪ್ರಾಣಾಯಾಮ' ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ:ಪಿಎಂ ಮೋದಿ

ಯೋಗದಲ್ಲಿ ಉಸಿರಾಟವನ್ನು ನಿಯಂತ್ರಿಸುವ ಅಭ್ಯಾಸ ಮಾಡುವ ಪ್ರಾಣಾಯಾಮ ಮಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನುಕೂಲವಾಗುತ್ತದೆ. ಪ್ರಸ್ತುತ ದೇಶದಲ್ಲಿ ಕೊರೋನಾ ವೈರಸ್ ಸೋಂಕಿನ ಸಮಸ್ಯೆ ಇರುವ ಸಂದರ್ಭದಲ್ಲಿ ಪ್ರಾಣಾಯಾಮ ಮಾಡುವ ಮೂಲಕ ಕೊರೋನಾ ಬರುವುದನ್ನು ತಡೆಗಟ್ಟಲು ಸಹಾಯವಾಗಬಹುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಯೋಗದಲ್ಲಿ ಉಸಿರಾಟವನ್ನು ನಿಯಂತ್ರಿಸುವ ಅಭ್ಯಾಸ ಮಾಡುವ ಪ್ರಾಣಾಯಾಮ ಮಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನುಕೂಲವಾಗುತ್ತದೆ. ಪ್ರಸ್ತುತ ದೇಶದಲ್ಲಿ ಕೊರೋನಾ ವೈರಸ್ ಸೋಂಕಿನ ಸಮಸ್ಯೆ ಇರುವ ಸಂದರ್ಭದಲ್ಲಿ ಪ್ರಾಣಾಯಾಮ ಮಾಡುವ ಮೂಲಕ ಕೊರೋನಾ ಬರುವುದನ್ನು ತಡೆಗಟ್ಟಲು ಸಹಾಯವಾಗಬಹುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊರೋನಾ ವೈರಸ್ ಸೋಂಕು ನಮ್ಮ ಉಸಿರಾಟ ವ್ಯವಸ್ಥೆ ಮಾಡಿ ದಾಳಿ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಉಸಿರಾಟದ ವ್ಯವಸ್ಥೆಯನ್ನು ಪ್ರಾಣಾಯಾಮದ ಮೂಲಕ ಹೆಚ್ಚು ನಿಯಂತ್ರಿಸಬಹುದು. ಸಾಮಾನ್ಯವಾಗಿ ಪ್ರಾಣಾಯಾಮದಲ್ಲಿ ಅನೋಮ, ವಿಲೋಮ ಬಹಳ ಮುಖ್ಯವಾದ ತಂತ್ರವಾಗಿದೆ. ಇದನ್ನು ನಾವು ದಿನನಿತ್ಯ ಮಾಡುತ್ತಾ ಹೋದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಸಹ ಬಲಪಡಿಸುತ್ತದೆ ಎಂದು ಹೇಳಿದರು.

6ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೆಹಲಿಯಲ್ಲಿ ಭಾಷಣ ಮಾಡಿದ ಅವರು,ವಿಶ್ವದ ಹಲವು ಕಡೆಗಳಲ್ಲಿ ಕೊರೋನಾ ರೋಗಿಗಳು ಯೋಗ ಮಾಡುವ ಮೂಲಕ ಪ್ರಯೋಜನ ಕಂಡುಕೊಂಡಿದ್ದಾರೆ. ಕಷ್ಟದ ಸಮಯಗಳಲ್ಲಿ ದೇಹದಲ್ಲಿ ಹೋರಾಟ ನಡೆಸಲು ಯೋಗ ಆತ್ಮವಿಶ್ವಾಸ ನೀಡಿ ರೋಗದ ವಿರುದ್ಧ ಜಯ ಸಾಧಿಸಲು ಸಹಾಯ ಮಾಡುತ್ತದೆ. ಯೋಗದಿಂದ ಶರೀರ ಮತ್ತು ಶಾರೀರ ಎರಡರ ಆರೋಗ್ಯ ಸಿಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com