ಸ್ವದೇಶಿ ನಿರ್ಮಿತ 1,340 ವೆಂಟಿಲೇಟರ್ ರಾಜ್ಯಗಳಿಗೆ ರವಾನೆ: ಕೇಂದ್ರ ಸರ್ಕಾರ

ಕೋವಿಡ್-19 ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಕೇರ್ಸ್ ನಿಧಿಯಡಿಯಲ್ಲಿ ಮಂಜೂರಾದ 50 ಸಾವಿರ ಮೇಡ್ ಇನ್ ಇಂಡಿಯಾ' ವೆಂಟಿಲೇಟರ್‌ಗಳ ಪೈಕಿಯಲ್ಲಿ 3000 ವೆಂಟಿಲೇಟರ್ ಗಳನ್ನು ತಯಾರಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್-19 ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಕೇರ್ಸ್ ನಿಧಿಯಡಿಯಲ್ಲಿ ಮಂಜೂರಾದ 50 ಸಾವಿರ ಮೇಡ್ ಇನ್ ಇಂಡಿಯಾ' ವೆಂಟಿಲೇಟರ್‌ಗಳ ಪೈಕಿಯಲ್ಲಿ 3000 ವೆಂಟಿಲೇಟರ್ ಗಳನ್ನು ತಯಾರಿಸಲಾಗಿದೆ. ಇವುಗಳಲ್ಲಿ 1,300 ಕ್ಕೂ ಹೆಚ್ಚು ವೆಂಟಿಲೇಟರ್ ಗಳನ್ನು  ವಿವಿಧ ರಾಜ್ಯಗಳಿಗೆ ತಲುಪಿಸಲಾಗಿದೆ ಎಂದು ಕೇಂದ್ರಸರ್ಕಾರ ಇಂದು ಅಧಿಕೃತ ಮಾಹಿತಿ ನೀಡಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕಾಗಿ 3.100 ಕೋಟಿಯನ್ನು ಬಳಸಿಕೊಳ್ಳಲು ಮೇ 14ರಂದು ಪ್ರಧಾನ ಮಂತ್ರಿ ಕೇರ್ಸ್ ಫಂಡ್ ಟ್ರಸ್ಛ್ ನಿರ್ಧರಿಸಿತ್ತು. ಇಲ್ಲಿಯವರೆಗೂ 2,923 ವೆಂಟಿಲೇಟರ್ ಗಳನ್ನು ತಯಾರಿಸಲಾಗಿದ್ದು, ಈ ಪೈಕಿ 1340 ವೆಂಟಿಲೇಟರ್ ಗಳನ್ನು ಈಗ್ಗಾಗಲೇ ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಕೊರೋನಾ ಸೋಂಕು ಹೆಚ್ಚಿರುವ ಮಹಾರಾಷ್ಟ್ರಕ್ಕೆ 275, ದೆಹಲಿ 275, ಗುಜರಾತ್ 175, ಬಿಹಾರ 100, ಕರ್ನಾಟಕ 90, ರಾಜಸ್ಥಾನಕ್ಕೆ 75 ವೆಂಟಿಲೇಟರ್ ಕಳುಹಿಸಲಾಗಿದೆ. 50 ಸಾವಿರ ವೆಂಟಿಲೇಟರ್ ಗಳ ಪೈಕಿಯಲ್ಲಿ 30 ಸಾವಿರ ವೆಂಟಿಲೇಟರ್ ಗಳನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ತಯಾರಿಸುತ್ತಿದೆ ಎಂದು ಮಾಹಿತಿ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com