ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ದೆಹಲಿಯಲ್ಲಿ 'ಪ್ಲಾಸ್ಮಾ ಬ್ಯಾಂಕ್' ಸ್ಥಾಪನೆ: ಸಿಎಂ ಅರವಿಂದ್ ಕೇಜ್ರಿವಾಲ್

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ದೆಹಲಿ ಸರ್ಕಾರ ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಲು ಮುಂದಾಗಿದೆ. ದೆಹಲಿಯ ಲಿವರ್ ಅಂಡ್ ಬಿಲಿಯರಿ ಸೈನ್ಸ್ ಸಂಸ್ಥೆಯಲ್ಲಿ ಪ್ಲಾಸ್ಮಾ ಬ್ಯಾಂಕ್ ಅಸ್ತಿತ್ವಕ್ಕೆ ಬರಲಿದೆ, ಪ್ಲಾಸ್ಮಾದ ಅಗತ್ಯವಿರುವವರು ವೈದ್ಯರಿಂದ ಶಿಫಾರಸು ಪಡೆದಿರಬೇಕು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ನವದೆಹಲಿ: ಕೋವಿಡ್-19 ರೋಗಿಗಳಿಗೆ ಪ್ಲಾಸ್ಮಾ ಸಂಗ್ರಹಣೆಗೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆಗೆ ಮುಂದಾಗಿದೆ.

ದೆಹಲಿಯ ಲಿವರ್ ಅಂಡ್ ಬಿಲಿಯರಿ ಸೈನ್ಸ್ ಸಂಸ್ಥೆಯಲ್ಲಿ(ILBS) ಪ್ಲಾಸ್ಮಾ ಬ್ಯಾಂಕ್ ಅಸ್ತಿತ್ವಕ್ಕೆ ಬರಲಿದೆ. ಪ್ಲಾಸ್ಮಾದ ಅಗತ್ಯವಿರುವವರು ವೈದ್ಯರಿಂದ ಶಿಫಾರಸು ಪಡೆದುಕೊಂಡು ಈ ಸಂಸ್ಥೆಯಿಂದ ಪಡೆಯಬಹುದು, ವೈದ್ಯರಿಂದ ಶಿಫಾರಸು ಪಡೆದುಕೊಂಡು ಬಂದ ರೋಗಿಗಗಳಿಗೆ ಮಾತ್ರ ಸಂಸ್ಥೆ ಪ್ಲಾಸ್ಮಾ ನೀಡಲು ಸಾಧ್ಯ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ದೆಹಲಿ ಸರ್ಕಾರ ಇದುವರೆಗೆ 29 ಕೊರೋನಾ ರೋಗಿಗಳ ಮೇಲೆ ಪ್ಲಾಸ್ಮಾ ಥೆರಪಿಯನ್ನು ಮಾಡಿದ್ದು ಫಲಿತಾಂಶ ಉತ್ತಮವಾಗಿದೆ. ಮುಂದಿನ ಎರಡು ದಿನಗಳಲ್ಲಿ ಪ್ಲಾಸ್ಮಾ ಬ್ಯಾಂಕ್ ಕಾರ್ಯನಿರ್ವಹಣೆ ಆರಂಭಿಸಲಿದೆ. ಕೋವಿಡ್-19ನಿಂದ ಗುಣಮುಖ ಹೊಂದಿರುವವರು ಪ್ಲಾಸ್ಮಾಗಳನ್ನು ಮುಂದೆ ಬಂದು ದಾನ ಮಾಡಿ, ನೀವು ಆತಂಕಪಡುವ ಅಗತ್ಯವಿಲ್ಲ, ಸರ್ಕಾರ ನಿಮ್ಮ ಪ್ರಯಾಣದ ಖರ್ಚನ್ನು ನೋಡಿಕೊಳ್ಳಲಿದೆ ಎಂದು ಕೇಳಿಕೊಳ್ಳುತ್ತೇನೆ ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ. 

ಪ್ಲಾಸ್ಮಾ ದಾನ ಮಾಡಲು ಇಚ್ಛಿಸುವ ಜನರಿಗೆ ದೆಹಲಿ ಸರ್ಕಾರ ಸಹಾಯವಾಣಿಯೊಂದನ್ನು ಆರಂಭಿಸಲಿದೆ. 200 ರೋಗಿಗಳ ಮೇಲೆ ಪ್ಲಾಸ್ಮಾ ಚಿಕಿತ್ಸೆ ನೀಡಲು ದೆಹಲಿ ಸರ್ಕಾರ ಇತ್ತೀಚೆಗಷ್ಟೆ ಅನುಮತಿ ಪಡೆದು ಅದನ್ನು ಲೋಕ ನಾಯಕ ಜೈಪ್ರಕಾಶ್ ಆಸ್ಪತ್ರೆ ಮತ್ತು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ವಿಸ್ತರಿಸಿದೆ. 

ಕೋವಿಡ್-19ನಿಂದ ಮೃತಪಟ್ಟ ಎಲ್ ಎನ್ ಜೆಪಿ ಡಾ ಅಸೀಮ್ ಗುಪ್ತ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಿ ಸಿಎಂ ಕೇಜ್ರಿವಾಲ್ ಘೋಷಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com