ತಾಯಿ, 1 ವರ್ಷದ ತಂಗಿ ಯನ್ನು ಹೈದರಾಬಾದ್ ನಿಂದ ಬೆಂಗಳೂರಿಗೆ 350 ಕಿ.ಮೀ. ವ್ಹೀಲ್ ಚೇರ್ ನಲ್ಲಿ ಕರೆತಂದ 10 ವರ್ಷದ ಬಾಲಕ!

ಧೈರ್ಯ ಮತ್ತು ಇಚ್ಛಾಶಕ್ತಿಯನ್ನು ಒಗ್ಗೂಡಿಸಿಕೊಂಡು 10 ವರ್ಷದ ಬಾಲಕನೋರ್ವ ವ್ಹೀಲ್ ಚೇರ್ ನಲ್ಲಿರುವ ತನ್ನ ಅಂಗವಿಕಲ ತಾಯಿ ಹಾಗೂ ಒಂದು ವರ್ಷದ ತಂಗಿಯ ಜೊತೆಗೆ ಕಾಲ್ನಡಿಗೆಯಲ್ಲಿ ಹೈದರಾಬಾದ್-ಬೆಂಗಳೂರು ಮಾರ್ಗದ 350 ಕಿ.ಮೀ ಸಂಚರಿಸಿದ್ದಾನೆ!
ವ್ಹೀಲ್ ಚೇರ್ ನಲ್ಲಿ ತಾಯಿ ಜೊತೆ ಹೈದರಾಬಾದ್-ಬೆಂಗಳೂರು ಮಾರ್ಗದಲ್ಲಿ 350 ಕಿ.ಮೀ ನಡೆದು ಸಂಚರಿಸಿದ 10 ವರ್ಷದ ಬಾಲಕ!
ವ್ಹೀಲ್ ಚೇರ್ ನಲ್ಲಿ ತಾಯಿ ಜೊತೆ ಹೈದರಾಬಾದ್-ಬೆಂಗಳೂರು ಮಾರ್ಗದಲ್ಲಿ 350 ಕಿ.ಮೀ ನಡೆದು ಸಂಚರಿಸಿದ 10 ವರ್ಷದ ಬಾಲಕ!

ಕರ್ನೂಲು: ಧೈರ್ಯ ಮತ್ತು ಇಚ್ಛಾಶಕ್ತಿಯನ್ನು ಒಗ್ಗೂಡಿಸಿಕೊಂಡು 10 ವರ್ಷದ ಬಾಲಕನೋರ್ವ ವ್ಹೀಲ್ ಚೇರ್ ನಲ್ಲಿರುವ ತನ್ನ ಅಂಗವಿಕಲ ತಾಯಿ ಹಾಗೂ ಒಂದು ವರ್ಷದ ತಂಗಿಯ ಜೊತೆಗೆ ಕಾಲ್ನಡಿಗೆಯಲ್ಲಿ ಹೈದರಾಬಾದ್-ಬೆಂಗಳೂರು ಮಾರ್ಗದ 350 ಕಿ.ಮೀ ಸಂಚರಿಸಿದ್ದಾನೆ!

ಶಾರೂಖ್ ಎಂಬ 10 ವರ್ಷದ ಬಾಲಕ ತನ್ನ ತಾಯಿ ಕುಳಿತಿದ್ದ ವ್ಹೀಲ್ ಚೇರ್ ತಳ್ಳಿಕೊಂಡು ತಂಗಿಯನ್ನು ಎತ್ತಿಕೊಂಡು ಬೆಂಗಳೂರಿನಲ್ಲಿರುವ ತನ್ನ ಇತರ ಮೂವರು ಸಹೋದರ/ಸಹೋದರಿಯರ ಜೊತೆಗೂಡಲು ಹೈದರಾಬಾದ್ ನಿಂದ ಕಾಲ್ನಡಿಗೆಯಲ್ಲಿ ಬರುತ್ತಿರುವ ವಿಷಯ ಕರ್ನೂಲ್ ಬಳಿ ಓರ್ವ ಸಬ್ ಇನ್ಸ್ಪೆಕ್ಟರ್ ಟಿ ನರೇಂದ್ರ ಕುಮಾರ್ ರೆಡ್ಡಿ ಅವರಿಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ. ಆ ವೇಳೆಗಾಗಲೆ ಬಾಲಕ ಹೈದರಾಬಾದ್ ನಿಂದ 350 ಕಿ.ಮೀ ದೂರದಲ್ಲಿರುವ ಕರ್ನೂಲು ತಲುಪಿದ್ದ. ಬಾಲಕ ಶಾರೂಖ್ ನ ಪಾಡನ್ನು ಗಮನಿಸಿದ ಪೊಲೀಸ್ ಅಧಿಕಾರಿ, ದ್ರೋಣಾಚಲಂ ಸೇವಾ ಸಮಿತಿಯ ಸಹಾಯದಿಂದ ಬೆಂಗಳೂರಿಗೆ ತಲುಪಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಈ ಬಗ್ಗೆ ಮಾತನಾಡಿರುವ ನರೇಂದ್ರ ಕುಮಾರ್ "ಶಾರೂಖ್ ನ ತಾಯಿ ಹಸೀನಾ ಉತ್ತರ ಪ್ರದೇಶದವರು. ಆಕೆ ಗಂಡನನ್ನು ಕಳೆದುಕೊಂಡ ಬಳಿಕ ತನ್ನ 5 ಮಕ್ಕಳೊಂದಿಗೆ ಹೈದರಾಬಾದ್ ಗೆ ಬಂದು ಜೀವನ ನಡೆಸುತ್ತಿದ್ದರು. ಲಾಕ್ ಡೌನ್ ಘೋಷಣೆಯಾಗುವುದಕ್ಕೂ ಮುನ್ನ ಆಕೆಯ 3 ಮಕ್ಕಳು ಪರಿಚಯಸ್ಥರೊಬ್ಬರು ಬೆಂಗಳೂರಿನ ಆಶ್ರಮವೊಂದಕ್ಕೆ ಕರೆದುಕೊಂಡುಹೋಗಿ ಬಿಟ್ಟಿದ್ದರು. ಕೆಲವು ದಿನಗಳ ನಂತರ ಹಸೀನಾ ಅವರೂ ಉಳಿದ ಇಬ್ಬರು ಮಕ್ಕಳೊಂದಿಗೆ ಅಲ್ಲಿಗೆ ಹೋಗುವವರಿದ್ದರು. ಆದರೆ ಲಾಕ್ ಡೌನ್ ಪರಿಣಾಮ ಹೈದರಾಬಾದ್ ನಲ್ಲೇ ಸಿಲುಕಿಕೊಂಡರು. ಆದರೆ ಕೆಲವು ದಿನಗಳ ನಂತರ ಬೆಂಗಳೂರಿನಲ್ಲಿರುವ ತನ್ನ ಮೂವರು ಮಕ್ಕಳ ಜೊತೆಗೂಡಲು ಕಾತುರದಿಂದ ಕಾಯುತ್ತಿದ್ದರು. ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ ಹಣವೂ ಇಲ್ಲದೇ ಶಾರೂಖ್ ಆತನ ತಂಗಿ, ಆತನ ತಾಯಿ ಹಸೀನ ಅವರು ಕಾಲ್ನಡಿಗೆಯಲ್ಲೇ ಬೆಂಗಳೂರಿಗೆ ಹೊರಟಿದ್ದರು" ಎಂದು ಹೇಳಿದ್ದು ಈ ಕುಟುಂಬವನ್ನು ಬೆಂಗಳೂರಿಗೆ ತಲುಪಿಸಿದ ದ್ರೋಣಾಚಲಂ ಸೇವಾ ಸಮಿತಿಯ ಯುವಕರಿಗೆ ಧನ್ಯವಾದ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com