ಚೀನೀ ಅಪ್ಲಿಕೇಶನ್‌ಗಳನ್ನು ತಕ್ಷಣ ನಿರ್ಬಂಧಿಸಿ: ಇಂಟರ್ನೆಟ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಖಡಕ್ ಆದೇಶ

ಐಟಿ ಕಾಯ್ದೆಯ ತುರ್ತುನಿಯಮದ ಅಡಿಯಲ್ಲಿ 59  ಚೀನೀ ಮೊಬೈಲ್ ಅಪ್ಲಿಕೇಶನ್‌ಗಳನ್ನು ತಕ್ಷಣವೇ ನಿರ್ಬಂಧಿಸುವಂತೆ ಸರ್ಕಾರ ಮಂಗಳವಾರ ಎಲ್ಲಾ ಅಂತರ್ಜಾಲ ಸೇವಾ ಪೂರೈಕೆದಾರರಿಗೆ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಚೈನೀಸ್ ಅಪ್ಲಿಕೇಶನ್‌ಗಳು
ಚೈನೀಸ್ ಅಪ್ಲಿಕೇಶನ್‌ಗಳು

ನವದೆಹಲಿ: ಐಟಿ ಕಾಯ್ದೆಯ ತುರ್ತುನಿಯಮದ ಅಡಿಯಲ್ಲಿ 59  ಚೀನೀ ಮೊಬೈಲ್ ಅಪ್ಲಿಕೇಶನ್‌ಗಳನ್ನು ತಕ್ಷಣವೇ ನಿರ್ಬಂಧಿಸುವಂತೆ ಸರ್ಕಾರ ಮಂಗಳವಾರ ಎಲ್ಲಾ ಅಂತರ್ಜಾಲ ಸೇವಾ ಪೂರೈಕೆದಾರರಿಗೆ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಆದೇಶವನ್ನು ಎರಡು ಸೆಟ್‌ಗಳಲ್ಲಿ ನೀಡಲಾಗಿದೆ - ಮೊದಲ ಸೆಟ್‌ನಲ್ಲಿ 35 ಅಪ್ಲಿಕೇಶನ್‌ಗಳ ಪಟ್ಟಿ  ಇದ್ದರೆ  ಇತರ 24 ಅಪ್ಲಿಕೇಶನ್‌ಗಳು ಚೀನಾದಿಂದ ಹೊರಗಿದೆ ಎಂದು ಮೂಲಗಳು ತಿಳಿಸಿವೆ. "ಎಲ್ಲಾ 59 ಚೀನೀ ಅಪ್ಲಿಕೇಶನ್‌ಗಳನ್ನು  ನಿರ್ಬಂಧಿಸುವ ಆದೇಶವನ್ನು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ನೀಡಲಾಗಿದೆ" ಎಂದು ಟೆಲಿಕಾಂ ಸಚಿವಾಲಯದ ಮೂಲವು ಪಿಟಿಐಗೆ ತಿಳಿಸಿದೆ.


ಸೋಮವಾರ ಸರ್ಕಾರ ಘೋಷಿಸಿದಂತೆಯೇ ಈ ಪಟ್ಟಿಯಲ್ಲಿ ಒಂದೇ ರೀತಿಯ ಅಪ್ಲಿಕೇಶನ್‌ಗಳಿವೆ. ಇದು ಟಿಕ್‌ಟಾಕ್, ಯುಸಿ ನ್ಯೂಸ್, ಯುಸಿ ಬ್ರೌಸರ್, ವಿವಾ ವಿಡಿಯೋ ಎಂಐ ವಿಡಿಯೋ ಕಾಲ್, ಬಿಗೊ ಲೈವ್, ವಿ ಚಾಟ್ ಇತ್ಯಾದಿ ಹೆಸರುಗಳು ನಿಷೇಧದ ಪಟ್ಟಿಯಲ್ಲಿದೆ.

"ಸರ್ಕಾರವು ಐಪಿ ವಿಳಾಸಗಳೊಂದಿಗೆ ವೆಬ್ ಲಿಂಕ್ ಅನ್ನು ಬಿಡುಗಡೆ ಮಾಡಿದೆ, ಇದು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಚೀನೀ ಅಪ್ಲಿಕೇಶನ್‌ಗಳ ಪ್ರವೇಶವನ್ನು ಸುಲಭವಾಗಿ ನಿರ್ಬಂಧಿಸುತ್ತದೆ" ಎಂದು ಮೂಲವೊಂದು ತಿಳಿಸಿದೆ. "ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಐಟಿ ಆಕ್ಟ್ 2000 ರ ತುರ್ತುನಿಯಮ  69 ಎ ಅಡಿಯಲ್ಲಿ ಸೂಚನೆಗಳನ್ನುನೀಡಲಾಗಿದೆ" ಎಂದು ಇಂಟರ್ನೆಟ್ ಕಂಪನಿಗಳಿಗೆ ಡಿಒಟಿ ಆದೇಶ ವಿವರಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com