ಭಾರತ-ಚೀನಾ ಗಡಿಯಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಲು ಉತ್ತರಾಖಂಡ ಸರ್ಕಾರ ಅಸ್ತು

ಲಡಾಖ್‌ನ ಎಲ್ ಎಸಿ ಸಮೀಪ  ಚೀನಾದೊಂದಿಗಿನ ನಿರಂತರ ಉದ್ವಿಗ್ನತೆಯ ಮಧ್ಯೆ, ಭಾರತ-ಚೀನಾ ಗಡಿಯಲ್ಲಿ ಮೂರು ಆಯಕಟ್ಟಿನ ಪ್ರಮುಖ ರಸ್ತೆಗಳ ನಿರ್ಮಾಣಕ್ಕಾಗಿ ಸಂರಕ್ಷಿತ ಗಂಗೋತ್ರಿ ರಾಷ್ಟ್ರೀಯ ಉದ್ಯಾನದೊಳಗೆ 73.36 ಹೆಕ್ಟೇರ್ ಅರಣ್ಯ ಭೂಮಿಯನ್ನು ವರ್ಗಾವಣೆ ಮಾಡುವ ಪ್ರಸ್ತಾಪಗಳಿಗೆ ಉತ್ತರಾಖಂಡ ರಾಜ್ಯ ವನ್ಯಜೀವಿ ಸಲಹಾ ಮಂಡಳಿ ಅನುಮೋದನೆ ನೀಡಿದೆ. 
ಭಾರತ-ಚೀನಾ ಗಡಿಯಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಲು ಉತ್ತರಾಖಂಡ ಸರ್ಕಾರ ಅಸ್ತು

ಡೆಹ್ರಾಡೂನ್: ಲಡಾಖ್‌ನ ಎಲ್ ಎಸಿ ಸಮೀಪ  ಚೀನಾದೊಂದಿಗಿನ ನಿರಂತರ ಉದ್ವಿಗ್ನತೆಯ ಮಧ್ಯೆ, ಭಾರತ-ಚೀನಾ ಗಡಿಯಲ್ಲಿ ಮೂರು ಆಯಕಟ್ಟಿನ ಪ್ರಮುಖ ರಸ್ತೆಗಳ ನಿರ್ಮಾಣಕ್ಕಾಗಿ ಸಂರಕ್ಷಿತ ಗಂಗೋತ್ರಿ ರಾಷ್ಟ್ರೀಯ ಉದ್ಯಾನದೊಳಗೆ 73.36 ಹೆಕ್ಟೇರ್ ಅರಣ್ಯ ಭೂಮಿಯನ್ನು ವರ್ಗಾವಣೆ ಮಾಡುವ ಪ್ರಸ್ತಾಪಗಳಿಗೆ ಉತ್ತರಾಖಂಡ ರಾಜ್ಯ ವನ್ಯಜೀವಿ ಸಲಹಾ ಮಂಡಳಿ ಅನುಮೋದನೆ ನೀಡಿದೆ. 

ಈ ರಸ್ತೆಗಳು ಗಡಿಯ ಅಂತರವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿಯ ಸಂಚಾರವನ್ನು ಸುಲಭಗೊಳಿಸುತ್ತದೆ,  ಪ್ರಸ್ತುತ ಅವರುಗಳು ಅಲ್ಲಿಗೆ ತಲುಪಲು 25 ಕಿ.ಮೀ.ವರೆಗೆ ನಡೆದು ಬರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿಯ 15 ನೇ ಸಭೆಯಲ್ಲಿ ಸೋಮವಾರ ಈ ಪ್ರಸ್ತಾಪಗಳಿಗೆ ಅನುಮೋದನೆ ದೊರೆತಿದೆ ಎಂದು ಪ್ರಧಾನ ಕಾರ್ಯದರ್ಶಿ (ಅರಣ್ಯ) ಆನಂದ್ ವರ್ಧನ್   ಪಿಟಿಐಗೆ ತಿಳಿಸಿದ್ದಾರೆ.
 
ಅಂತಿಮ ಅನುಮತಿಗಾಗಿ ಶಿಫಾರಸನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಕಳುಹಿಸಲಾಗುವುದು ಎಂದು ವರ್ಧನ್ ಹೇಳಿದರು. ಮೂರು ಆಯಕಟ್ಟು ಪ್ರದೇಶದಲ್ಲಿ ರಸ್ತೆ ನಿರ್ಮಾಣವಾಗುತ್ತಿದ್ದು ಅವುಗಳಲ್ಲಿ 17.60 ಕಿ.ಮೀ ಮಂಡಿ-ಸಾಂಗ್‌ಚೋಲಾ ರಸ್ತೆ, 11.85 ಕಿ.ಮೀ ಸುಮ್ಲಾ-ಥಂಗ್ಲಾ ರಸ್ತೆ ಮತ್ತು 6.21 ಕಿ.ಮೀ ತ್ರಿಪಾಡಿ-ರಂಗ್‌ಮಚ್‌ಗಡ್ ರಸ್ತೆಗಳು ಸೇರಿದೆ. ರಸ್ತೆಗಳನ್ನು ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಉತ್ತರ್ಕಶಿ ಜಿಲ್ಲೆಯ ಸಂರಕ್ಷಿತ ಗಂಗೋತ್ರಿ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಿದೆ.

ಗಂಗೋತ್ರಿ ರಾಷ್ಟ್ರೀಯ ಉದ್ಯಾನವನದ ವಿವಿಧ ಸ್ಥಳಗಳಲ್ಲಿ ಸುಮಾರು 73.36 ಹೆಕ್ಟೇರ್ ಅರಣ್ಯ ಭೂಮಿಯನ್ನು ರಸ್ತೆಗಳ ನಿರ್ಮಾಣಕ್ಕಾಗಿ ವರ್ಗಾಯಿಸಲಾಗುವುದು ಎಂದು ವರ್ಧನ್ ಹೇಳಿದರು. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮುಖ್ಯವಾದ ರಸ್ತೆಗಳ ನಿರ್ಮಾಣದ ಪ್ರಸ್ತಾವನೆಗಳನ್ನು ಅಂತಿಮ ಅನುಮತಿಗಾಗಿ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಕಳುಹಿಸಬೇಕು ಎಂದು ಮಂಡಳಿ ಸರ್ವಾನುಮತದಿಂದ ಒಪ್ಪಿಕೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com