ಮಾ.05 ರಂದು ಸಂಸತ್ ಎದುರು ಜವಳಿ ಟ್ರೇಡ್ ಯೂನಿಯನ್ ಪ್ರತಿಭಟನೆ
ಮಾ.05 ರಂದು ಸಂಸತ್ ಎದುರು ಜವಳಿ ಟ್ರೇಡ್ ಯೂನಿಯನ್ ಪ್ರತಿಭಟನೆ

ಮಾ.05 ರಂದು ಸಂಸತ್ ಎದುರು ಜವಳಿ ಟ್ರೇಡ್ ಯೂನಿಯನ್ ಪ್ರತಿಭಟನೆ

ಮಾ.05 ರಂದು ಸಂಸತ್ ಎದುರು ಬೃಹತ್ ಪ್ರತಿಭಟನೆ ನಡೆಸಲು ಜವಳಿ ಟ್ರೇಡ್ ಯೂನಿಯನ್ ನಿರ್ಧರಿಸಿದೆ. 

ಪುದುಚೆರಿ: ಮಾ.05 ರಂದು ಸಂಸತ್ ಎದುರು ಬೃಹತ್ ಪ್ರತಿಭಟನೆ ನಡೆಸಲು ಜವಳಿ ಟ್ರೇಡ್ ಯೂನಿಯನ್ ನಿರ್ಧರಿಸಿದೆ. 

ಆಂದೋಲನ ಸಂಘಟಿಸಲು ಪುದುಚೆರಿಯಲ್ಲಿರುವ ಎಐಟಿಯುಸಿ ಕಚೇರಿಯಲ್ಲಿ ಮಾ.01 ರಂದು ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.  

ಎಎಫ್ ಟಿ ಭಾರತಿ ಹಾಗೂ ಸ್ವದೇಶಿ ಕಾಟನ್ ಮಿಲ್ ಗಳನ್ನು ಏ.30 ರಿಂದ ಸ್ಥಗಿತಗೊಳಿಸುವ ಕೇಂದ್ರ ಸರ್ಕಾರದ ಆದೇಶ ಹಿಂಪಡೆಯಬೇಕು, 500 ಕೋಟಿ ರೂಪಾಯಿ ಮಂಜೂರು ಮಾಡಿ 3 ಮಿಲ್ ಗಳನ್ನು ಆಧುನೀಕರಿಸಿ ಕಾರ್ಯಾರಂಭ ಮಾಡುವಂತೆ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಕೇಂದ್ರ ಸರ್ಕಾರ ಮುಂದಿಟ್ಟು ಜವಳಿ ಟ್ರೇಡ್ ಯೂನಿಯನ್ ಗಳು ಪ್ರತಿಭಟನೆಯನ್ನು ಸಂಘಟಿಸುತ್ತಿದೆ. 

ಎಐಟಿಯುಸಿ ನಾಯಕ ವಿಎಸ್ ಅಭಿಷೇಕಂ ಮಾತನಾಡಿದ್ದು, ಪ್ರತಿಭಟನೆಗೆ ಆಗಮಿಸುವ ಮಿಲ್ ಕಾರ್ಮಿಕರಿಗೆ ಆಧಾರ್ ಕಾರ್ಡ್ ತರುವಂತೆ ಮನವಿ ಮಾಡಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com